- 50 ಮಂದಿ ಈವರೆಗೂ ಪತ್ತೆ ಇಲ್ಲ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಹೆಣ್ಣು ಮಕ್ಕಳ ಅಪಹರಣ/ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಒಂದೂವರೆ ವರ್ಷದಲ್ಲಿ ಅಪಹರಣ, ನಾಪತ್ತೆಯಾದ ಹೆಣ್ಣು ಮಕ್ಕಳ ಪೈಕಿ ಸುಮಾರು 21ಕ್ಕೂ ಅಧಿಕ ಮಕ್ಕಳು ಈವರೆಗೆ ಪತ್ತೆಯಾಗಿಲ್ಲ.ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಆಗಮಿಸಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ನಾಪತ್ತೆಯಾಗಿ ಮೂರು ದಿನ ಬಳಿಕ ಶವವಾಗಿ ಸಿಕ್ಕಿದ್ದಾಳೆ. ಇದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ.
3 ವರ್ಷದಲ್ಲಿ 1011 ನಾಪತ್ತೆ, ಅಪರಣ ಪ್ರಕರಣ
ಈ ರೀತಿ ಅಪಹರಣವಾದ ಮಕ್ಕಳನ್ನು ಭಿಕ್ಷಾಟನೆ, ಮಹಿಳೆಯರನ್ನು ಮುಂಬೈ, ದೆಹಲಿ ಸೇರಿದಂತೆ ಮೊದಲಾದ ರಾಜ್ಯಗಳಿಗೆ ಇನ್ನಿತರ ಕೆಲಸಗಳಿಗೆ ಬಲವಂತವಾಗಿ ಭಿಕ್ಷಾಟನೆಗೆ ದೂಡಲಾಗುತ್ತದೆ. ಜತೆಗೆ ಒತ್ತಾಯ ಪೂರ್ವಕ ದುಡಿಮೆ, ಲೈಂಗಿಕ ದೌರ್ಜನ್ಯ, ಲೈಂಗಿಕ ವೃತ್ತಿ, ಅಂಗಾಂಗ ಕಸಿಯುವಂಥ ಕಾರ್ಯಗಳಿಗೆ ಬಳಸಲಾಗುತ್ತದೆ ಎನ್ನಲಾಗಿದೆ.
ಕಳೆದ ಮೂರು ವರ್ಷದಲ್ಲಿ ಮಹಿಳೆಯರ ನಾಪತ್ತೆ, ಅಪಹರಣ ಪ್ರಕರಣದ ವಿವರ
20232692672
20252292218
ಒಟ್ಟು82379429
---ಬಾಕ್ಸ್---ಮೂರು ವರ್ಷದ ಜಿಲ್ಲೆಯ ಹೆಣ್ಣು ಮಕ್ಕಳ ನಾಪತ್ತೆ, ಅಪಹರಣ ಪ್ರಕರಣದ ವಿವರ
ವರ್ಷಪ್ರಕರಣ ಸಂಖ್ಯೆಪತ್ತೆ ಸಂಖ್ಯೆಬಾಕಿ ಸಂಖ್ಯೆ202353530
2024545402025745915
2026(ಫೆ.20)716ಒಟ್ಟು18816721
---ಬಾಕ್--ಸ್ನಿಯಂತ್ರಣಕ್ಕೆ ಕ್ರಮಗಳೇನು?ಮಕ್ಕಳ ಅಪಹರಣ ಪ್ರಕರಣಗಳು ವರದಿಯಾದ ಕೂಡಲೇ ವಿಳಂಬ ಮಾಡದೆ ಎಫ್ಐಆರ್ ದಾಖಲಿಸಲಾಗುತ್ತಿದೆ. ಕೂಡಲೇ ರಾಜ್ಯದ ಎಲ್ಲಾ ಠಾಣೆಗಳಿಗೆ ಪ್ರಕರಣದ ಆರೋಪಿ ಮತ್ತು ಅಪಹರಿಸಿರುವ ಮಗುವಿನ ಬಗ್ಗೆ ಯಾವುದೇ ಸುಳಿವು ದೊರೆತರೆ ಮಾಹಿತಿ ಪಡೆಯಲು ಪಾಲಕರ ಒಪ್ಪಿಗೆ ಮೇರೆಗೆ ಪತ್ರಿಕಾ ಪ್ರಕಟಣೆ, ದೂರದರ್ಶನ, ಆಕಾಶವಾಣಿಯಲ್ಲಿ ಪ್ರಕಟಣೆ ಹೊರಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದ ಗಡಿ ಪ್ರದೇಶಗಳಲ್ಲಿ ಮತ್ತು ಬಸ್ -ರೈಲ್ವೆ ನಿಲ್ದಾಣಗಳಲ್ಲಿ ಪತ್ರಗಳನ್ನು, ಫೋಟೋ ಅಂಟಿಸಿ ಕ್ರಮ ಕೈಗೊಳ್ಳ ಲಾಗುತ್ತಿದೆ. ರೀಜನಲ್ ಪಾಸ್‌ಪೋರ್ಟ್ ಆಫೀಸ್‌ಗೆ ನವಜಾತ ಮಕ್ಕಳಿಗೆ ಪಾಸ್ ಪೋರ್ಟ್ ಅರ್ಜಿ ಸಲ್ಲಿಸಿರುವ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.ಲುಕ್‌ಔಟ್ ನೋಟಿಸ್ ನೀಡುವುದು, ಅಕ್ಕ-ಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ಮಕ್ಕಳ ಕುರಿತು ಹುಡುಕಾಟ ನಡೆಸಲಾಗುತ್ತದೆ. ಅಧಿಕಾರಿಗಳ ತಂಡ ರಚಿಸಿ ಎಲ್ಲಾ ಕಡೆ ಹುಡುಕಾಟ ನಡೆಸುವುದು, ಅಕ್ಕ-ಪಕ್ಕದ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅಪರಿಚಿತ ಶವಗಳ ಯುಡಿಆರ್ ಪ್ರಕರಣ ಪರಿಶೀಲಿಸುವುದು, ಜಿಲ್ಲಾ ಅಪರಾಧ ದಾಖಲಾತಿ ವಿಭಾಗಗಳಲ್ಲಿನ ವರದಿ ಪರಿಶೀಲಿಸುವುದು, ದಿನಪತ್ರಿಕೆ ಮತ್ತು ದೂರದರ್ಶನದಲ್ಲಿ ಕಾಣೆಯಾದ ಮಕ್ಕಳ ಭಾವಚಿತ್ರ ಪ್ರಸಾರ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.