ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದಲ್ಲಿ ಶಾಂತಿ ಕಾಲೇಜಿನ ಮುಂಭಾಗದ ಮೈದಾನದಲ್ಲಿ ನಡೆಯಲಿರುವ ಸುತ್ತೂರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ 1066 ಜಯಂತ್ಯುತ್ಸವದ ಸಭಾ ಮಂಟಪ (ವೇದಿಕೆ) ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಿ ಹಾಗೂ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
10ನೇ ಶತಮಾತನದಲ್ಲಿ ನಾಡಿನ ಹೊಸ ಧಾರ್ಮಿಕ ನೆಲೆಯನ್ನು ಸೃಷ್ಟಿಸಿ ಹಲವಾರು ಸೇವಾ ಕಾರ್ಯವನ್ನು ಶ್ರೀಮಠದಿಂದ ಮುಂದುವರೆಸಿಕೊಂಡು ಬರಲಾಗುತ್ತಿದೆ. ಶಿವಯೋಗಿಗಳ ಜಯಂತಿಯನ್ನು ಸುತ್ತೂರು ಮಠದಲ್ಲಿ ಮಾತ್ರ ಸೀಮಿತಗೊಳಿಸದೇ ವಿವಿಧೆಡೆ ಆಚರಿಲಾಗುತ್ತಿತ್ತು. ಪ್ರಸ್ತುತ ಮಳವಳ್ಳಿಯಲ್ಲಿ ನಡೆಯಬೇಕೆಂಬ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಭಾಗವಹಿಸಲಿದ್ದಾರೆ ಎಂದರು.ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರ ಮಾರ್ಗದರ್ಶನದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮುಖಂಡರು ಸೇರಿದಂತೆ ಎಲ್ಲರ ಒಗ್ಗಟ್ಟಿನಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿದೆ. ಕೇವಲ ವೈಭವಕ್ಕೆ ಸೀಮಿತಗೊಳ್ಳದೇ ಉಪನ್ಯಾಸ, ವಿಚಾರ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅರ್ಥಪೂರ್ಣವಾಗಿ ಜನರಲ್ಲಿ ಸೌಹರ್ದತೆಗೆ ಅವಕಾಶ ಮಾಡಿಕೊಡಲು ಜಯಂತಿ ಆಯೋಜಿಸಿದ್ದು, ತಾಲೂಕಿನ ಜನರು ನೆರವನ್ನು ನೀಡಿ ಯಶಸ್ವಿಗೆ ಸಹಕರಿಸಬೇಕೆಂದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮತನಾಡಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಅಶೀರ್ವಾದದಿಂದ ಮಳವಳ್ಳಿಯಲ್ಲಿ ಜಯಂತಿ ಆಚರಣೆಗೆ ಅವಕಾಶ ಕೊಟ್ಟಿರುವುದು ನಮ್ಮೆಲ್ಲರ ಪುಣ್ಯ. ಡಿ.18ರಿಂದ ಒಂದು ವಾರಗಳ ಕಾಲ ಶ್ರೀ ಮಠದ ಜವಾಬ್ದಾರಿಯಲ್ಲಿ ಎಲ್ಲಾ ಭಕ್ತರ ಸಹಭಾಗಿತ್ವದೊಂದಿಗೆ ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ ಎಂದರು.ಶ್ರೀಗಳು ಜಯಂತಿಯನ್ನು ಬೇರೆ ತಾಲೂಕಿನಲ್ಲಿ ನಡೆಯಲು ಅವಕಾಶ ಮಾಡಿಕೊಟ್ಟ ರೀತಿಯಲ್ಲಿ ಮಳವಳ್ಳಿಗೆ ಅವಕಾಶ ನೀಡಿದ್ದಾರೆ. ಭಕ್ತಿಯ ಪರಂಪರೆಗೆ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಶಿವರಾತ್ರೀಶ್ವರ ಶಿವಯೋಗಿಗಳ 1066 ಜಯಂತ್ಯುತ್ಸವ ಪ್ರಚಾರ ರಥ ಯಾತ್ರೆಯೂ ತಮ್ಮ ಗ್ರಾಮಕ್ಕೆ ಆಗಮಿಸಿದಾಗ ಗೌರವ ಪೂರ್ವಕವಾಗಿ ಬರಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ಹಾಗೂ ತಾಲೂಕಿನ ಎಲ್ಲ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಸುತ್ತೂರು ಗುರು ಪರಂಪರೆ, ಸಂಪ್ರದಾಯ ಬದ್ಧ ಆಚರಣೆಯಂತೆ ಮಹಾರಾಜ ಸಂಸ್ಕೃತಿ ಪಾಠಶಾಲೆ, ನಿವೃತ್ತ ಶೈವಾಗಮ ಪ್ರಾಂಶುಪಾಲ ಮಲ್ಲಣ್ಣ ನೇತೃತ್ವದಲ್ಲಿ ಶಿವರಾತ್ರೀಶ್ವರ ಶಿವಯೋಗಿಯವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕ ಕೆ.ಅನ್ನದಾನಿ ಭೂಮಿಪೂಜೆ ನೆರವೇರಿಸಿದರು.ನಂತರ ಪ್ರಚಾರ ರಥಕ್ಕೂ ಪೂಜೆ ಸಲ್ಲಿಸಿದ ಗಣ್ಯರು ಈಡುಗಾಯಿ ಹೊಡೆದು ವಿಧ್ಯುಕ್ತವಾಗಿ ಚಾಲನೆ ನೀಡಿದರು.