ಗದಗ: ಕಾನೂನು ಸಚಿವ ಎಚ್.ಕೆ. ಪಾಟೀಲ ಅವರ 72ನೇ ಜನ್ಮದಿನದ ಅಂಗವಾಗಿ 1072 ಜನರಿಂದ ಅಂಗಾಗ ದಾನ ಮಾಡಲು ತೀರ್ಮಾನಿಸಿದ್ದು, ಅಂದು ಅಂಗಾಂಗ ದಾನ ಮಾಡಿದವರಿಗೆ ಪ್ರತಿಜ್ಞಾ ಪತ್ರ ವಿತರಿಸಲಾಗುವುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪ್ರಭು ಬುರಬುರೆ ಹೇಳಿದರು.
ಡಾ. ಎಸ್.ಆರ್. ನಾಗನೂರ ಮಾತನಾಡಿ, ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಮನಷ್ಯನ ಮರಣದ ನಂತರ ಕಣ್ಣನ್ನು ಮಾತ್ರ ತೆಗೆಯಬಹುದು. ಬೇರೆ ಅಂಗಾಂಗಳನ್ನು ತೆಗೆಯಲು ಸಾಧ್ಯವಿಲ್ಲ. ಆದರೆ, ಮೆದುಳು ನಿಷ್ಕ್ರೀಯ ಆದವರಿಂದ ಅಂಗಾಂಗ ಪಡೆಯಬಹುದು. ಒಬ್ಬ ವ್ಯಕ್ತಿ ಅಂಗಾಂಗ ದಾನ ಮಾಡುವುದರಿಂದ ಸುಮಾರು 7ರಿಂದ 8 ಜನರಿಗೆ ಉಪಯೋಗವಾಗುತ್ತದೆ. ದೇಹವನ್ನು ಸುಡುವುದು, ಹೂಳುವುದನ್ನು ಮಾಡದೇ ದಾನ ಮಾಡಿದರೆ ಬೇರೆಯವರ ಬಾಳಲ್ಲಿ ಬೆಳಕಾಗಬಹುದು ಹಾಗೂ ಅವರ ದೇಹದ ಭಾಗ ಇನ್ನೂ ಜೀವಂತವಾಗಿದೆ ಎನ್ನುವ ಭಾವ ಅವರ ಕುಟುಂಬಸ್ಥರಲ್ಲಿ ಇರುತ್ತದೆ. ಹಾಗಾಗಿ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿದರೆ ಸಾಕಷ್ಟು ಜನರಿಗೆ ಉಪಯೋಗ ಆಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಡಾ. ಪ್ಯಾರಾಲಿ ನೂರಾನಿ, ಬಸವರಾಜ ಕಡೆಮನಿ, ಎಂ.ಸಿ. ಶೇಖ್, ವಿನೋದ ಶಿದ್ಲಿಂಗ, ಡಾ. ವೇಮನ ಸಾಹುಕಾರ, ರಮೇಶ ಹೊನ್ನಿನಾಯ್ಕರ, ಉಮರ್ ಫಾರೂಖ್ ಬಾರಿಗಿಡದ, ಮಹಮ್ಮದಸಾಬ್ ಬೆಟಗೇರಿ ಮುಂತಾದವರು ಇದ್ದರು.