ಜಿಲ್ಲೆಯಲ್ಲಿ 11.39 ಲಕ್ಷ ಮತದಾರರು: ಡಿಸಿ ಲಕ್ಷ್ಮೀಪ್ರಿಯಾ

KannadaprabhaNewsNetwork |  
Published : Oct 30, 2026, 02:30 AM IST
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿದರು. | Kannada Prabha

ಸಾರಾಂಶ

ಆಗಸ್ಟ್ 24 ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 11,23,022 ಮತದಾರರಿದ್ದರು. ಬಳಿಕ ಸೇರ್ಪಡೆ, ಹೆಸರುಗಳ ಅಳಿಸುವಿಕೆ ಹಾಗೂ ತಿದ್ದುಪಡಿ ಪ್ರಕ್ರಿಯೆ ನಡೆಸಲಾಗಿದೆ. ಈ ಅವಧಿಯಲ್ಲಿ 19,268 ಮತದಾರರ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದ್ದು, 2,667 ಹೆಸರುಗಳನ್ನು ಅಳಿಸಲಾಗಿದೆ.

ಕಾರವಾರ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅ. 27ರ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 11,39,623 ಮತದಾರರು ನೋಂದಣಿಯಾಗಿದ್ದು, 5,70,006 ಪುರುಷರು, 5,69,614 ಮಹಿಳೆಯರು ಹಾಗೂ ಮೂವರು ಇತರೆ ಲಿಂಗದ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 1,523 ಮತಗಟ್ಟೆಗಳಿದ್ದು, ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 2,18,003 ಮತದಾರರಿದ್ದರೆ, ಕಾರವಾರ ಕ್ಷೇತ್ರದಲ್ಲಿ 2,01,469, ಶಿರಸಿ ಕ್ಷೇತ್ರದಲ್ಲಿ 1,95,044, ಕುಮಟಾ ಕ್ಷೇತ್ರದಲ್ಲಿ 1,79,114, ಹಳಿಯಾಳ ಕ್ಷೇತ್ರದಲ್ಲಿ 1,70,367 ಹಾಗೂ ಯಲ್ಲಾಪುರ ಕ್ಷೇತ್ರದಲ್ಲಿ 1,75,626 ಮತದಾರರು ನೋಂದಣಿಯಾಗಿದ್ದಾರೆ.ಆಗಸ್ಟ್ 24 ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 11,23,022 ಮತದಾರರಿದ್ದರು. ಬಳಿಕ ಸೇರ್ಪಡೆ, ಹೆಸರುಗಳ ಅಳಿಸುವಿಕೆ ಹಾಗೂ ತಿದ್ದುಪಡಿ ಪ್ರಕ್ರಿಯೆ ನಡೆಸಲಾಗಿದೆ. ಈ ಅವಧಿಯಲ್ಲಿ 19,268 ಮತದಾರರ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದ್ದು, 2,667 ಹೆಸರುಗಳನ್ನು ಅಳಿಸಲಾಗಿದೆ. 15,361 ಮತದಾರರ ವಿವರಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಒಟ್ಟಾರೆ ಕರಡು ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ 16,601 ಮತದಾರರ ಹೆಚ್ಚಳವಾಗಿದೆ.ವಿಧಾನಸಭಾ ಕ್ಷೇತ್ರವಾರು ಪರಿಶೀಲಿಸಿದಾಗ, ಭಟ್ಕಳದಲ್ಲಿ 4,321 ಮತದಾರರ ಹೆಚ್ಚಳವಾಗಿದ್ದು, ಇದು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಹೆಚ್ಚಳವಾಗಿದೆ. ಕಾರವಾರದಲ್ಲಿ 2,507, ಹಳಿಯಾಳದಲ್ಲಿ 2,600, ಯಲ್ಲಾಪುರದಲ್ಲಿ 2,200, ಶಿರಸಿಯಲ್ಲಿ 3,293 ಹಾಗೂ ಕುಮಟಾದಲ್ಲಿ 1,680 ಮತದಾರರ ನಿವ್ವಳ ಹೆಚ್ಚಳವಾಗಿದೆ.ಮತದಾರರ ಪಟ್ಟಿಯಿಂದ ಒಟ್ಟು 2,667 ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಇದರಲ್ಲಿ 79 ಮಂದಿ ಮೃತಪಟ್ಟಿರುವುದು, ಇಬ್ಬರು ಗೈರುಹಾಜರಾಗಿರುವುದು, ಮೂವರು ಈಗಾಗಲೇ ಬೇರೆಡೆ ನೋಂದಣಿಯಾಗಿರುವುದು ಹಾಗೂ 2,008 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಕಾರಣವಾಗಿದೆ. 575 ಹೆಸರುಗಳನ್ನು ಇತರ ಕಾರಣಗಳಿಂದ ಅಳಿಸಲಾಗಿದೆ. ಕ್ಷೇತ್ರವಾರು ತೆಗೆದುಹಾಕುವಿಕೆಯಲ್ಲಿ, ಶಿರಸಿಯಲ್ಲಿ 630, ಭಟ್ಕಳದಲ್ಲಿ 526, ಕಾರವಾರದಲ್ಲಿ 453, ಹಳಿಯಾಳದಲ್ಲಿ 413, ಯಲ್ಲಾಪುರದಲ್ಲಿ 327 ಹಾಗೂ ಕುಮಟಾದಲ್ಲಿ 318 ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಜಯ್ ಸಾಳುಂಕೆ, ಸಿಪಿಐ(ಎಂ)ನ ಯಮುನಾ ಗಾಂವಕರ್ ಮಾತನಾಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗುಟ್ಕರ್, ಜೆಡಿಎಸ್ ಪಕ್ಷದ ವಕ್ತಾರ ಉದಯ ಭೋವಿ, ಚುನಾವಣಾ ಶಾಖೆಯ ತಹಸೀಲ್ದಾರ್ ಪಿ.ಡಿ. ನಾಯ್ಕ, ಶಿರಸ್ತೇದಾರ್ ಶೇಖ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು