11 ಕೋಟಿ ಅವ್ಯವಹಾರ: ಡಿಸಿಸಿ ಬ್ಯಾಂಕ್‌ನಲ್ಲಿ ಸಿಐಡಿ ತನಿಖೆ

KannadaprabhaNewsNetwork |  
Published : Jul 09, 2026, 12:45 AM IST
ನಗರದ | Kannada Prabha

ಸಾರಾಂಶ

ಹಲವು ವಿಎಸ್‌ಎಸ್‌ಎನ್ ಸಂಘದ ಕಾರ್ಯದರ್ಶಿ ಸೇರಿದಂತೆ 2001-2002 ರಲ್ಲಿ 2 ಕೋಟಿ ಹಗರಣ, ನಂತರ 2025 ರಲ್ಲಿ ವಿಎಸ್‌ಎಸ್‌ಎನ್ ಸೊಸೈಟಿಗಳ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಮತ್ತೊಂದು ದೂರನ್ನು ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ನೀಡಲಾಗಿತ್ತು.

ವಿವಿಧ ವಿಎಸ್‌ಎಸ್‌ಎನ್ ಸೊಸೈಟಿಗಳ ಅವ್ಯವಹಾರಗಳ ಕುರಿತು ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ಆರೋಪ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ನಗರದ ಡಿಸಿಸಿ ಬ್ಯಾಂಕ್‌ನಿಂದ ಹಲವು ವಿಎಸ್‌ಎಸ್‌ಎನ್ ಸಂಘಗಳಿಂದ ಬಹುಕೋಟಿ ಅವ್ಯವಹಾರವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಐಡಿ ಇಲಾಖೆ ಅಧಿಕಾರಿಗಳು ನಗರದ ಡಿಸಿಸಿ ಬ್ಯಾಂಕ್‌ಗೆ ಭೇಟಿ ನೀಡಿ ವಿವಿಧ ರೀತಿಯ ಕಡತಗಳನ್ನು ಪರಿಶೀಲನೆ ಮಾಡಿದರು.

ಹಲವು ವಿಎಸ್‌ಎಸ್‌ಎನ್ ಸಂಘದ ಕಾರ್ಯದರ್ಶಿ ಸೇರಿದಂತೆ 2001-2002 ರಲ್ಲಿ 2 ಕೋಟಿ ಹಗರಣ, ನಂತರ 2025 ರಲ್ಲಿ ವಿಎಸ್‌ಎಸ್‌ಎನ್ ಸೊಸೈಟಿಗಳ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಮತ್ತೊಂದು ದೂರನ್ನು ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ನೀಡಲಾಗಿತ್ತು. ಆದರಂತೆ ಇಲ್ಲಿನ ಮ್ಯಾನೆಜರ್ ಹಾಗೂ ವಿಎಸ್‌ಎಸ್‌ಎನ್ ಸಂಘದ ಕಾರ್ಯದರ್ಶಿ ಮತ್ತು ಇನ್ನಿತರೆ ಅಧಿಕಾರಿಗಳು 2 ಕೋಟಿಗೂ ಹೆಚ್ಚಿನ ಮೊತ್ತದ ಹಣದ ಪ್ರಕರಣವು ಸಿಬಿಐ ತನಿಖೆಗೆ ಒಳಪಟ್ಟರು. ನಂತರ ಸಿಐಡಿಗೆ ತನಿಖೆಗೆ ಕರೆದಿದ್ದು ಖುದ್ದು ಹಾಜರಾತಿ ಇರಬೇಕೆಂದು ಸರ್ಕಾರದಿಂದ ಬಂದಿರುವ ಹಣದ ಬಗ್ಗೆ ಸಿಐಡಿ ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದು ಆದರಂತೆ ಇಂದು ನಾನು ಖುದ್ದು ಡಿಸಿಸಿ ಬ್ಯಾಂಕ್‌ಗೆ ಹಾಜರಾಗಿ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್, ದಾಖಲೆಗಳನ್ನು ನೀಡಿ ಹಲವು ವಿಎಸ್‌ಎಸ್‌ಎನ್ ಸಂಘಗಳನ್ನು ಕರೆದು ತನಿಖೆ ನಡೆಸಲಿದ್ದಾರೆ. ನಂಬಿಕೆ ವಿಶ್ವಾಸವಿದೆ ರೈತರ ಹಣ ಏನಿದೆಯೋ ರೈತರ ಖಾತೆಗಳಿಗೆ ಜಮೆಯಾಗಬೇಕು, ಅವ್ಯವಹಾರದಲ್ಲಿ ಪಾಲ್ಗೊಂಡವರು ಯಾರೇ ಆದರೂ ಅವರಿಗೆ ಕಾನೂನು ರೀತ್ಯಾ ಶಿಕ್ಷೆಯಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಇಂತಹ ಅವ್ಯವಹಾರಗಳಲ್ಲಿ ಭಾಗವಹಿಸಲು ಹಿಂಜರಿಕೆಯಾಗುವಂತೆ ಶಿಕ್ಷೆಯಾಗಬೇಕೆಂದರು.

ಸರ್ಕಾರದ, ಬಡವರ, ರೈತರ ಹಣ ದುರುಪಯೋಗವಾಗದಂತೆ ಶಿಕ್ಷೆ ವಿಧಿಸಿಬೇಕು ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಅನುಕೂಲವಾಗಲು ಮಾಡುವ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂಬುದೇ ನಮ್ಮ ಮುಖ್ಯ ಉದ್ದೇಶವಾಗಿತ್ತು. ಆದರಂತೆ 2025 ರಲ್ಲಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ ಪ್ರತಿಫಲವಾಗಿ ಇಂದು ಸಿಐಡಿ ತನಿಖೆ ನಡೆಯುತ್ತಿದ್ದು ನ್ಯಾಯ ದೊರಕುವ ವಿಶ್ವಾಸದಲ್ಲಿರುವುದಾಗಿ ತಿಳಿಸಿದರು.

ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಬ್ಯಾಲಹಳ್ಳಿ ಗೋವಿಂದಗೌಡರವರು ಸೇರಿದಂತೆ ವಿವಿಧ ಡಿಸಿಸಿ ಬ್ಯಾಂಕಿನ ನಿರ್ವಹಣಾಧಿಕಾರಿಗಳು, ಮ್ಯಾನೇಜರ್ ಹಾಗೂ ಸಿಬ್ಬಂದಿ ಈ ಕೃತ್ಯಗಳಲ್ಲಿ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಿಐಡಿ ಅಧಿಕಾರಿಗಳು ಬಂದಿದ್ದು, ಇಂದು 11 ಕೋಟಿ ಮೊತ್ತದ ಹಣಕ್ಕೆ ಸಂಬಂಧಿಸಿದ ತನಿಖೆ ನಡೆಸಲಾಗುತ್ತಿದೆ. ಇದು ಸಾಲಮನ್ನಾಗೆ ಸಂಬಂಧಿಸಿದ್ದು ತಾಲೂಕಿನಲ್ಲಿ 100 ಕೋಟಿಗೂ ಅವ್ಯವಹಾರ ನಡೆದಿದೆಯೆಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯರಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲಿಲ್ಲ: ಎನ್. ರವಿಕುಮಾರ್ ಆರೋಪ
ಯುವಕರು ಶಿಸ್ತುಬದ್ಧ ಜೀವನಶೈಲಿ ರೂಪಿಸಿಕೊಳ್ಳಲಿ: ವೆಂಕಟೇಶ್