ಕುಣಿಗಲ್‌ ಶಾಸಕರಿಂದ ರಾಜಕೀಯ ವ್ಯಭಿಚಾರ

KannadaprabhaNewsNetwork |  
Published : Jul 09, 2026, 12:45 AM IST
 ಫೋಟೋ ಇದೆ : 6 ಕೆಜಿಎಲ್ 1 :  ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ. | Kannada Prabha

ಸಾರಾಂಶ

ಕಳೆದ ಬಾರಿ ಚುನಾವಣೆಯಲ್ಲಿ ಪಿಂಗಾಣಿ ಕುಕ್ಕರು ಸೇರಿದಂತೆ ಹಲವಾರು ವಸ್ತುಗಳ ಆಮಿಷವೊಡ್ಡಿ ಜನರಿಂದ ಮತ ಪಡೆದಿದ್ದೀರಿ. ನೈತಿಕವಾದ ರಾಜಕಾರಣ ಮಾಡದೆ ಅನೈತಿಕ ರಾಜಕಾರಣ ಎಷ್ಟು ಸರಿ ಎಂದರು. ರಾಜಕೀಯ ವ್ಯಭಿಚಾರ ಮಾಡುವ ನೀವುಗಳು ನಿಖಿಲ್ ಹಾಗೂ ಕುಮಾರಸ್ವಾಮಿಯವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಜೆಡಿಎಸ್ ಮುಖಂಡ ಬಿಎನ್ ಜಗದೀಶ್ ಕುಟುಕಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ಕಳೆದ ಬಾರಿ ಚುನಾವಣೆಯಲ್ಲಿ ಪಿಂಗಾಣಿ ಕುಕ್ಕರು ಸೇರಿದಂತೆ ಹಲವಾರು ವಸ್ತುಗಳ ಆಮಿಷವೊಡ್ಡಿ ಜನರಿಂದ ಮತ ಪಡೆದಿದ್ದೀರಿ. ನೈತಿಕವಾದ ರಾಜಕಾರಣ ಮಾಡದೆ ಅನೈತಿಕ ರಾಜಕಾರಣ ಎಷ್ಟು ಸರಿ ಎಂದರು. ರಾಜಕೀಯ ವ್ಯಭಿಚಾರ ಮಾಡುವ ನೀವುಗಳು ನಿಖಿಲ್ ಹಾಗೂ ಕುಮಾರಸ್ವಾಮಿಯವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಜೆಡಿಎಸ್ ಮುಖಂಡ ಬಿಎನ್ ಜಗದೀಶ್ ಕುಟುಕಿದ್ದಾರೆ.

ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಣಿಗಲ್ ಶಾಸಕರು ಅತಿ ಬುದ್ಧಿವಂತರು ಯಾವ ವಿಚಾರವನ್ನು ಯಾವ ರೀತಿ ಬಳಸಿಕೊಳ್ಳಬೇಕೆಂಬುದನ್ನು ಕಲಿತಿರುವ ಚಾಣಾಕ್ಷತೆ ಅವರಿಗಿದೆ. ಈ ವಿಚಾರವನ್ನು ಅವರು ರಾಜಕೀಯಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಡಿ ಕೆ ಶಿವಕುಮಾರ್ ಇಂತಹ ವಿಚಾರಗಳಲ್ಲಿ ಲಘುವಾಗಿ ತೆಗೆದುಕೊಳ್ಳುವುದಿಲ್ಲ ಅವರ ಜೊತೆ ಇದ್ದು ನೀವು ಕಲಿತಿರುವ ವಿದ್ಯೆ ಏನು. ಸಿದ್ದರಾಮಯ್ಯ ಕೂಡ ಈ ರೀತಿ ಹಲವು ಬಾರಿ ಆಡು ಭಾಷೆ ಬಳಸಿದ್ದಾರೆ, ಅದನ್ನು ಯಾರೂ ಕೂಡ ರಾಜಕೀಯ ವ್ಯಭಿಚಾರಕ್ಕೆ ಬಳಸಿಲ್ಲ ಎಂದು ತಿವಿದರು. ಕುಣಿಗಲ್ ಶಾಸಕ ಡಾ. ರಂಗನಾಥ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿರುವ ವಂಶವಾಹಿ ವಿಚಾರ ಅವರ ವೈಯಕ್ತಿಕ ಅಲ್ಲ ಸಾಮಾನ್ಯವಾಗಿ ಆಡು ಭಾಷೆ ಅದನ್ನು ಕುಣಿಗಲ್ ಶಾಸಕ ಡಾ.ರಂಗನಾಥ್ ತಮ್ಮ ರಾಜಕೀಯ ಮೇಲಾಟಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದ ಏಳಿಗೆಗಾಗಿ ಕುಮಾರಸ್ವಾಮಿ ನಿರಂತರವಾಗಿ ದುಡಿಯುತ್ತಿದ್ದಾರೆ. ಆದರೆ ಆ ಕೆಲಸವನ್ನು ನಿಮ್ಮ ಕಾಂಗ್ರೆಸ್ ನವರು ಏಕೆ ಮಾಡುತ್ತಿಲ್ಲ. ಒಂದು ಕಾಲದಲ್ಲಿ ಡಾ. ರಂಗನಾಥ್ ಅವರಿಗೆ ಸೆನೆಟ್ ಮೆಂಬರ್ ಮಾಡಲು ಅವಕಾಶ ನೀಡಿದ್ದು ಕುಮಾರಸ್ವಾಮಿ ಆ ಋಣ ನಿಮ್ಮ ಮೇಲಿದೆ. ಕನಕಪುರ, ಕುಣಿಗಲ್ ಮಾಗಡಿ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಡಿಕೆ ಬೆಂಬಲಿಗರು ಮಾಡುತ್ತಿರುವ ಅನಾಚಾರದ ಬಗ್ಗೆ ಅವರು ಮಾತನಾಡಿದ್ದಾರೆ. ಹೊರತು ಕೇವಲ ಒಂದು ವ್ಯವಸ್ಥೆ ಅಥವಾ ವಂಶವಾಹಿ ಬಗ್ಗೆ ಮಾತನಾಡಿಲ್ಲ ಎಂದರು ಈ ಸಂದರ್ಭದಲ್ಲಿ ಪ್ರಕಾಶ್, ದೀಪು, ಮಂಜುನಾಥ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯರಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲಿಲ್ಲ: ಎನ್. ರವಿಕುಮಾರ್ ಆರೋಪ
ಯುವಕರು ಶಿಸ್ತುಬದ್ಧ ಜೀವನಶೈಲಿ ರೂಪಿಸಿಕೊಳ್ಳಲಿ: ವೆಂಕಟೇಶ್