ಬಿಳಿಚೋಡು ಬಳಿ ಸೇತುವೆ ನಿರ್ಮಾಣಕ್ಕೆ ₹11 ಕೋಟಿ ಪ್ರಸ್ತಾವನೆ

KannadaprabhaNewsNetwork | Published : Aug 7, 2024 1:08 AM

ಸಾರಾಂಶ

ದಾವಣಗೆರೆ ರಾಜ್ಯ ಹೆದ್ದಾರಿಯ ಬಿಳಿಚೋಡು ಸಮೀಪದ ಸೇತುವೆ ಶಿಥಿಲಗೊಂಡಿದೆ. ಈ ಹಳೆಯ ಸೇತುವೆ ಕೆಡವಿ, ಇದೇ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು. ಈ ಹಿನ್ನೆಲೆ ಸುಮಾರು ₹೧೨ ಕೋಟಿ ವೆಚ್ಚದ ಕಾಮಗಾರಿಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಜಗಳೂರಿನಲ್ಲಿ ಹೇಳಿದ್ದಾರೆ.

- ನೂತನ ನಾಡ ಕಚೇರಿ ಕಟ್ಟಡ ಉದ್ಘಾಟಿಸಿ ಶಾಸಕ ಬಿ.ದೇವೇಂದ್ರಪ್ಪ ಹೇಳಿಕೆ - - - ಕನ್ನಡಪ್ರಭ ವಾರ್ತೆ ಜಗಳೂರು

ದಾವಣಗೆರೆ ರಾಜ್ಯ ಹೆದ್ದಾರಿಯ ಬಿಳಿಚೋಡು ಸಮೀಪದ ಸೇತುವೆ ಶಿಥಿಲಗೊಂಡಿದೆ. ಈ ಹಳೆಯ ಸೇತುವೆ ಕೆಡವಿ, ಇದೇ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು. ಈ ಹಿನ್ನೆಲೆ ಸುಮಾರು ₹೧೨ ಕೋಟಿ ವೆಚ್ಚದ ಕಾಮಗಾರಿಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಸೋಮವಾರ ನೂತನ ನಾಡ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು. ಮುಖ್ಯ ರಸ್ತೆಯಲ್ಲಿ ಸೇತುವೆ ನಿರ್ಮಾಣ ಬಹಳ ಮುಖ್ಯವಾಗಿದೆ. ೫೦ ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಸೇತುವೆ ಮಾಡಲಾಗುವುದು ಎಂದರು.

ಬಿಳಿಚೋಡು ಪಾಳೆಗಾರರಿಂದ, ರಾಜಕೀಯವಾಗಿ ಸ್ವಾತಂತ್ರ್ಯ ನಂತರ, ಸ್ವತಂತ್ರ ಪೂರ್ವದವರೆಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹೋಬಳಿ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಸುತ್ತಮುತ್ತಲೂ ಹತ್ತಾರು ಅನೇಕ ಹಳ್ಳಿಗಳು ಸಂಪರ್ಕ ಇರುವುದರಿಂದ ಹೊಸ ನಾಡ ಕಚೇರಿ ನಿರ್ಮಿಸಲಾಗಿದೆ. ಶ್ರಾವಣ ಮಾಸದ ಮೊದಲ ಸೋಮವಾರ ನಾಡ ಕಚೇರಿ ಲೋಕಾರ್ಪಣೆ ಬಹಳ ಸಂತಸ ತಂದಿದೆ ಎಂದರು.

ಸಾರ್ವಜನಿಕ ಸೇವೆಗಳು ಇಲ್ಲಿ ನಿರ್ವಿಘ್ನವಾಗಿ ನಡೆಯಬೇಕು. ಸರ್ಕಾರದ ಉದ್ದೇಶದಂತೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳಾಗದಂತೆ ಉತ್ತಮವಾಗಿ ಸ್ಪಂದಿಸಿ, ಕೆಲಸ ಮಾಡಬೇಕು. ಸರ್ಕಾರಿ ಕಚೇರಿಗಳು, ಆಸ್ಪತ್ರೆ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆಗಳು ತಮಗಾಗಿ ಇದೆ ಎಂಬ ಭಾವನೆ ಸಾರ್ವಜನಿಕರಲ್ಲಿಯೂ ಇರಬೇಕು. ಇಲಾಖೆ ಸಿಬ್ಬಂದಿ ಜತೆ ಸ್ನೇಹ- ವಿಶ್ವಾಸದಿಂದ ಕೆಲಸ ಮಾಡಿಕೊಳ್ಳಬೇಕು. ಸಣ್ಣ ವಿಚಾರಗಳಿಗೆ ಗಲಾಟೆ, ದೌರ್ಜನ್ಯ ಮಾಡುವುದು ಬಿಡಬೇಕು ಎಂದು ಸಲಹೆ ನೀಡಿದರು.

ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಸೊಕ್ಕೆ ಉಪ ತಹಸೀಲ್ದಾರ್ ಉಪೇಂದ್ರ, ರೂಪ, ಧನಂಜಯ್, ವಿ.ಎ. ಶಿವಕುಮಾರ್, ಪಿಡಿಒ ನಂದಿ ಲಿಂಗೇಶ್ವರ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್‌ ಅಹಮದ್, ಕುರುಬ ಸಮಾಜದ ಅಧ್ಯಕ್ಷ ಓಮಣ್ಣ, ಗ್ರಾಪಂ ಸದಸ್ಯ ಅಜಾಮುಲ್ಲಾ, ಪಪಂ ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಶಂಭುಲಿಂಗಪ್ಪ, ವೆಂಕಟೇಶ್, ರಂಗಸ್ವಾಮಿ, ತಾನಾಜಿ ಗೋಸಾಯಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕೆಂಚೋಳ್, ಗ್ಯಾರಂಟಿ ಯೋಜನೆ ಸದಸ್ಯ ರಮೇಶ್ ಮತ್ತಿತರರಿದ್ದರು.

- - - -05ಜೆಎಲ್.ಆರ್1:

ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಸೋಮವಾರ ತಾಲೂಕು ಕಚೇರಿ ನೂತನ ನಾಡ ಕಚೇರಿ ಕಟ್ಟಡವನ್ನು ಶಾಸಕ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು.

Share this article