ಹರಪನಹಳ್ಳಿ: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು (ಟಿಎಪಿಸಿಎಂಎಸ್) 2023-24ನೇ ಸಾಲಿನಲ್ಲಿ ₹11.64 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಎಚ್.ನೇತ್ರಾವತಿ ಪರಶುರಾಮ ತಿಳಿಸಿದರು.
ಸಂಘವು ಕಳೆದ ಸಾಲಿನಲ್ಲಿ ರಸಗೊಬ್ಬರ ಮತ್ತು ಪೆಟ್ರೋಲ್ ಬಂಕ್ ಉತ್ಪನ್ನಗಳನ್ನು ಸೇರಿ ಒಟ್ಟು ₹12.38 ಕೋಟಿ ವ್ಯವಹಾರ ಮಾಡಿ ₹11.64 ಲಕ್ಷ .ಲಾಭ ಗಳಿಸಿದೆ. ಲಾಭ ಮತ್ತು ವ್ಯವಹಾರ ಹಾಗೂ ಬಾಡಿಗೆಗಳ ಆದಾಯ ಸೇರಿ ಬಿಡಿಪಿ ಯೋಜನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಂಘವು ₹3.8 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಘದಿಂದ ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಸಂಘದ ಎಲ್ಲ ಸದಸ್ಯರು ರಸಗೊಬ್ಬರ ಖರೀದಿ ಮಾಡಬೇಕೆಂದು ಮನವಿ ಮಾಡಿದರು.ಸಂಘದಲ್ಲಿ ರೈತರಿಗೆ ಮತ್ತು ಸದಸ್ಯರಿಗೆ ಅನುಕೂಲಕ್ಕಾಗಿ ಬಂಗಾರದ ಆಭರಣದ ಮೇಲೆ ಸಾಲ ನೀಡಲು ಕ್ರಮ ವಹಿಸಿದ್ದು, ಜೊತೆಗೆ ಸಿಎನ್‌ಜಿ ಗ್ಯಾಸ್ ಬಂಕ್‌ನ್ನು ತೆರೆಯಲು ಸಂಘ ಪ್ರಯತ್ನಿಸಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ಕುಲಮಿ ಅಬ್ದುಲ್ಲಾ, ನಿರ್ದೇಶಕರಾದ ಬಿ.ಕೆ.ಪ್ರಕಾಶ, ಎಲ್.ಬಿ.ಹಾಲೇಶನಾಯ್ಕ್, ಪಿ.ಪ್ರೇಮಕುಮಾರ, ತಳವಾರ ಮಂಜಪ್ಪ, ಗಿಡ್ಡಳ್ಳಿ ನಾಗರಾಜ, ಬಿ.ರೇವಣಸಿದ್ದಪ್ಪ, ಎಂ.ವಿ.ಕೃಷ್ಣಕಾಂತ, ಕೆ.ವಿರುಪಾಕ್ಷಪ್ಪ, ಪ್ರಕಾಶಗೌಡ, ನಾಮನಿರ್ದೇಶಕ ಚಿಕ್ಕೇರಿ ಬಸಪ್ಪ, ಸಂಘದ ಕಾರ್ಯದರ್ಶಿ ಎಚ್.ತಿರುಪತಿ ಸೇರಿದಂತೆ ಸಂಘದ ಸರ್ವ ಸದಸ್ಯರು ಸಿಬ್ಬಂದಿ ಇದ್ದರು.