ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ ಪೆರೇಸಂದ್ರದಲ್ಲಿ ಪ್ರತಿಭಟನೆ । ತಿಂಡಿ ಪೊಟ್ಟಣ ಕೋತಿ ಕಿತ್ತುಕೊಂಡಿದ್ದಕ್ಕೆ ಪ್ರಜ್ಞಾಹೀನಳಾದ ಬಾಲಕಿ
ಹಾಲಿ ಶಾಸಕ ಮತ್ತು ಸಂಸದರ ತವರೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕನಿಷ್ಠ ಬಿಪಿ, ಶುಗರ್, ಆಕ್ಸಿಜನ್ ಲೆವೆಲ್ ಚೆಕ್ ಮಾಡೋ ಮಿಷನ್ ಕೂಡ ಇಲ್ಲದೆ 11 ವರ್ಷದ ಮಗು ಜೀವ ಕಳೆದುಕೊಂಡ ಘಟನೆ ನಡೆದಿದ್ದು, ಇಡೀ ಊರೆ ರಸ್ತೆ ತಡೆ ಮಾಡಿ ಜನಪ್ರತಿನಿಧಿಗಳು ಸರ್ಕಾರಕ್ಕೆ ತರಾಟೆಗೆ ತಗೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.
ತಾನು ತಿನ್ನುತ್ತಿದ್ದ ತಿಂಡಿಯ ಪೊಟ್ಟಣವನ್ನು ಕೋತಿ ಕಿತ್ತುಕೊಂಡಿದ್ದಕ್ಕೆ ಭಯಬೀತಳಾಗಿ ಪ್ರಜ್ಞಾಹೀನಳಾದ ಬಾಲಕಿಯನ್ನು ತಾಲೂಕಿನ ಪೆರೆಸಂದ್ರ ಸರ್ಕಾರಿ ಆಸ್ಪತ್ರೆಗೆ ತಂದಾಗ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಇಲ್ಲದೇ, ವೈದ್ಯಕೀಯ ಸೌಲಭ್ಯವೂ ದೊರೆಯದೆ, ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ 11 ವರ್ಷದ ಬಾಲಕಿ ಸಾವನ್ನಪ್ಪಿದಳು. ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.ಏನಿದು ಘಟನೆ:
ಈ ಘಟನೆಯಿಂದ ಬಾಲಕಿಯ ಅಪ್ಪ, ಅಮ್ಮ,ಅಜ್ಜಿ, ತಾತಾ, ಸಂಬಂಧಿಕರು ಅವರ ಅಣ್ಣ ತಮ್ಮಂದಿರ ಆಕ್ರಂದನ ಮುಗಿಲು ಮುಟ್ಟಿತ್ತು. ಅವರಿಗೆ ದಿಕ್ಕು ತೋಚದೆ ಮುಖಂಡರಿಗೆ ಪೋನ್ ಮಾಡಿ ಸಹಾಯ ಬೇಡಿದ್ದಾರೆ. ಅದೇ ಗ್ರಾಮದ ಸಮಾಜ ಸೇವಕ ಸಂದೀಪರೆಡ್ಡಿಗೆ ದೂರವಾಣಿ ಮೂಲಕ ಮಗುವನ್ನ ಕಳೆದುಕೊಂಡ ನಾವು ದುಖಿತರಾಗಿದ್ದೇವೆ. ನಮ್ಮ ಮಗು ಹೋಗಿಬಿಟ್ಟಿದೆ. ಇನ್ನಾರಿಗೂ ವೈದ್ಯರಿಲ್ಲದೇ ಜೀವ ಕಳೆದು ಕೊಳ್ಳುವ ಗತಿ ಬರಬಾರದು ಮೊದಲು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ನಿವಾರಿಸಿ, ಅಲ್ಲಿಗೆ ಬೇಕಾಗಿರೋ ಮೂಲಸೌಕರ್ಯ ಮತ್ತು ದಿನದ 24 ಗಂಟೆಯೂ ವೈದ್ಯರ ಸೌಲಭ್ಯ ಕೊಡಿಸಿ ಎಂದು ಅಂಗಲಾಚಿ ಬೇಡಿಕೊಂಡ ಆಡೀಯೋ ಸಾಮಾಜಿಕತಾಣದಲ್ಲಿ ಲಭ್ಯವಾಗಿದೆ.
ಈ ವೇಳೆ ನೆರೆದ ಜನರಲ್ಲಿ ಕೆಲವರು ಶಾಸಕ ಪ್ರದೀಪ್ ಈಶ್ವರ್‌ಗೆ ದೂರವಾಣಿ ಕರೆ ಮಾಡಲು ಹೋಗಿದ್ದಾರೆ. ಆದರೆ ಶಾಸಕರು ನೀಡಿದ್ದ ಮೊಬೈಲ್ ನಂಬರ್‌ಗೆ ಪೋನ್ ಕನೆಕ್ಟ್ ಆಗದಿದ್ದರಿಂದ ರೊಚ್ಚಿಗೆದ್ದ ಅವರು ಪೋನ್ ಹೋಗುತಿಲ್ಲ. ಶಾಸಕರು ಹಣ ಇಲ್ಲದೇ ಪೋನ್ ರೀಚಾರ್ಜ್ ಮಾಡಿಸಿಲ್ಲ, ಶಾಸಕರೇ ನಿಮ್ಮ ಪೋನ್ ರಿಚಾರ್ಜ್‌ಗಾಗಿ ನಿನಗೆ ಗತಿಯಿಲ್ಲದಿದ್ರೆ, ಪೋನ್ ಪೇ ಮಾಡಿ ನಾವೆ ಹಣ ಕೊಡ್ತೀವಿಧೆಂದು ಅವರ ವಿರುದ್ಧ ಘೋಷಣೆ ಕೂಗಿದ ಪ್ರಸಂಗವೂ ನಡೆದಿದೆ.
ಸಂಸದ ಡಾ.ಕೆ. ಸುಧಾಕರ್ ಅವರು ಸಚಿವರಾಗಿದ್ದ ವೇಳೆ ಇದೇ ಪೆರೇಸಂದ್ರ ಸಾರ್ವನಿಕ ಆಸ್ಪತ್ರೆಯ ಆವರಣದಲ್ಲಿ ಸುಮಾರು 9 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಕಟ್ಟಡ ಕಟ್ಟಿಸಿ ಮೂರು ವರ್ಷಗಳಾದರೂ ಆರಂಭವಾಗಿಲ್ಲ, ಅದೇ ರೀತಿ ಪೆರೆಸಂದ್ರ ಗ್ರಾಮದಿಂದ ಕೂಗಳತೆ (ಕೇವಲ 2 ಕಿಮೀ) ದೂರದಲ್ಲಿ ಡಾ.ಕೆ.ಸುಧಾಕರ್ ಅವರು ತಮ್ಮ ಶಾಸಕ ಸ್ಥಾನ ಪಣಕ್ಕಿಟ್ಟು ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು ತಂದು ಸುಮಾರು 900 ಕೋಟಿ ರು.ಗಳ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಟ್ಟಿಸಿದ್ದು, ಕಾಲೇಜು ಆರಂಭವಾಗಿ ಒಂದು ಬ್ಯಾಚ್ ಸಹ ಹೊರ ಹೋಗಿದೆ. ಆಸ್ಪತ್ರೆ ಕಟ್ಟಡದ ಕಾಮಗಾರಿ ಮುಗಿದು ಒಂದು ವರ್ಷವಾದರೂ ಸಹಾ ಆಸ್ಪತ್ರೆ ಪ್ರಾರಂಭವಾಗದಿರುವುದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.