ದಸರಾ ನಿಮಿತ್ತ ತುಳಜಾಪೂರಕ್ಕೆ 110 ತಡೆ ರಹಿತ ಬಸ್‌ ಸಂಚಾರ

KannadaprabhaNewsNetwork | Published : Oct 7, 2023 2:19 AM

ಸಾರಾಂಶ

ಅ.6ರಿಂದ ನ.7ರ ವರೆಗೆ ಸಂಚಾರ । ಭಕ್ತರ ಪ್ರಯಾಣಕ್ಕೆ ವಿಶೇಷ ಬಸ್‌ ವ್ಯವಸ್ಥೆಹುಮನಾಬಾದ್‌ನಲ್ಲಿ ಚಾಲನೆ ನೀಡಿ ವಿಭಾಗೀಯ ನಿಯಂತ್ರಣಾಧಿಕಾರಿ ಮಾಹಿತಿ
ಅ.6ರಿಂದ ನ.7ರ ವರೆಗೆ ಸಂಚಾರ । ಭಕ್ತರ ಪ್ರಯಾಣಕ್ಕೆ ವಿಶೇಷ ಬಸ್‌ ವ್ಯವಸ್ಥೆ ಹುಮನಾಬಾದ್‌ನಲ್ಲಿ ಚಾಲನೆ ನೀಡಿ ವಿಭಾಗೀಯ ನಿಯಂತ್ರಣಾಧಿಕಾರಿ ಮಾಹಿತಿ ಕನ್ನಡಪ್ರಭ ವಾರ್ತೆ ಹುಮನಾಬಾದ್‌ ದಸರಾ ಹಬ್ಬದ ನಿಮಿತ್ತ ತುಳಜಾಪುರ ಭವಾನಿದೇವಿ ದರ್ಶನಕ್ಕೆ ತೆರಳುವ ಭಕ್ತರ ಸುರಕ್ಷಿತ ಪ್ರಯಾಣಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್‌ ಸೌಲಭ್ಯಗಳಲ್ಲಿಯೇ ಪ್ರಯಾಣಿಸಬೇಕೆಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೆಕರ್‌ ಕರೆ ನೀಡಿದರು. ಅವರು ಪಟ್ಟಣದ ಬಸ್‌ ನಿಲ್ದಾಣದಲ್ಲಿ ಶುಕ್ರವಾರ ತುಳಜಾಪೂರಕ್ಕೆ ಇಂದಿನಿಂದ ಆರಂಭಗೊಂಡ ಬಸ್‌ಗೆ ತುಳಜಾಭವಾನಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು. ಈ ಭಾಗದ ಶಕ್ತಿ ಪೀಠಗಳಲ್ಲಿ ಒಂದಾದ ತುಳಜಾಭವಾನಿಗೆ ದಸರಾ ಹಬ್ಬದ ಪ್ರಯುಕ್ತ ಕಲ್ಯಾಣ ಕರ್ನಾಟಕ ಭಾಗ ಅಲ್ಲದೇ ತೆಲಂಗಾಣಾದಿಂದ ಒಂದು ತಿಂಗಳವರೆಗೆ ನಿತ್ಯ ತುಳಜಾ ಭವಾನಿ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಹಾಗೂ ಸುಖಕರ ಪ್ರಯಾಣದ ಉದ್ದೇಶದಿಂದ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. ಸಾರಿಗೆ ಇಲಾಖೆ ಹುಮನಾಬಾದ್‌ ಘಟಕದಿಂದ ಅ.6ರಿಂದ ನ.7ರ ವರೆಗೆ ಸಂಚರಿಸಲಿದ್ದು, ಪ್ರತಿ ಪ್ರಯಾಣಿಕರಿಗೆ 200ರು. ಪ್ರಯಾಣ ದರ ನಿಗದಿ ಮಾಡಲಾಗಿದೆ ಎಂದರು. ಹುಮನಾಬಾದ್‌ ಘಟಕದಿಂದ 40 ಹಾಗೂ ಬಸವಕಲ್ಯಾಣ ತಾಲೂಕಿನ ಬಂಗ್ಲಾದಿಂದ 20 ಬಸ್‌ಗಳ ವ್ಯವಸ್ಥೆ ಸೇರಿದಂತೆ ಜಿಲ್ಲೆಯಿಂದ ಸುಮಾರು 110 ತಡೆ ರಹಿತ ಬಸ್‌ ಸಂಚಾರ ಸೌಲಭ್ಯದೊಂದಿಗೆ ಈ ಬಾರಿ 3 ಕೋಟಿ ರು. ಆದಾಯ ಗುರಿ ಹೊಂದಲಾಗಿದೆ. ಗುರಿ ಮೀರಿದ ಸಾಧನೆ ಮಾಡುವ ಆತ್ಮವಿಶ್ವಾಸವಿದ್ದು, ಹುಮನಾಬಾದ್‌, ಚಿಟಗುಪ್ಪ, ಮನ್ನಾಏಖ್ಖೆಳ್ಳಿ ಸೇರಿದಂತೆ ತಾಲೂಕಿನ ಯಾವುದೇ ಗ್ರಾಮದಿಂದ 50ಕ್ಕಿಂತ ಹೆಚ್ಚಿನ ಜನ ಭಕ್ತರು ತುಳಜಾಪೂರಕ್ಕೆ ಪ್ರಯಾಣಿಸುವವರಿದ್ದಲ್ಲಿ ಅಂತಹ ಗ್ರಾಮಗಳಿಗೆ ವಿಶೇಷ ಬಸ್‌ನ ಸೌಲಭ್ಯ ಕಲ್ಪಿಸಲಾಗುತ್ತದೆ. ಪ್ರಯಾಣಿಕರು ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಹುಮನಾಬಾದ್‌, ಚಿಟಗುಪ್ಪ ತಾಲೂಕು ಘಟಕ ವ್ಯವಸ್ಥಾಪಕ ವಿಠಲರಾವ್‌ ಕದಮ ಮಾತನಾಡಿ. ಪ್ರಯಾಣಿಕರ ಸುರಕ್ಷತೆ ಹಾಗೂ ಬಸ್‌ ಸೌಲಭ್ಯಕ್ಕಾಗಿ ಹೆಚ್ಚಿನ ಮಾಹಿತಿಗಾಗಿ ಬೀದರ್‌- 7760992200, 7760992214, ಹುಮನಾಬಾದ್‌- 7760992215, ಬಸವಕಲ್ಯಾಣ- 7760992216, ಭಾಲ್ಕಿ- 7760992217, ಔರಾದ್‌- 77609922187 ಇವರಿಗೆ ಸಂರ್ಪಕಿಸಬಹುದು ಎಂದು ತಿಳಿಸಿದರು. ನಿಲ್ದಾಣಾಧಿಕಾರಿ ರಮೇಶ, ಸಿಬ್ಬಂದಿ ಮೇಲ್ವಿಚಾರಕ ಶಿವಬಸಪ್ಪ ಪಾಟೀಲ್‌, ಲೆಕ್ಕಪತ್ರ ಮೇಲ್ವಿಚಾರಕ ವಿನೋದಕುಮಾರ, ಕೀರಿಯ ಸಹಾಯಕ ಜಗದೀಶ, ರಾಜಕುಮಾರ, ತಾಂತ್ರಿಕ ಸಿಬ್ಬಂದಿಗಳಾದ ಸಂಜುಕುಮಾರ, ರಾಜಶೇಖರ, ನಾಗರೆಡ್ಡಿ, ಪ್ರಭು, ನರಸಿಂಗ, ಸಂಗ್ರಾಮ ರಾಚಪ್ಪ, ಜೈಶಾಂತ ಡಾಂಗೆ ಸೇರಿದಂತೆ ಅನೇಕರಿದ್ದರು. ----

Share this article