1154 ಮಸಾಜ್ ಪಾರ್ಲರ್, ಸ್ಪಾ ಮೇಲೆ ದಾಳಿ

KannadaprabhaNewsNetwork |  
Published : Nov 30, 2026, 03:00 AM IST
ಮುದ್ದೇಬಿಹಾಳ | Kannada Prabha

ಸಾರಾಂಶ

ವಿಶೇಷ ಪರಿಶೀಲನಾ ಅಭಿಯಾನದಡಿ ನಗರದಾದ್ಯಂತ 1,154 ಮಸಾಜ್ ಪಾರ್ಲರ್ ಮತ್ತು ಸ್ಪಾ ಕೇಂದ್ರಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಶೇಷ ಪರಿಶೀಲನಾ ಅಭಿಯಾನದಡಿ ನಗರದಾದ್ಯಂತ 1,154 ಮಸಾಜ್ ಪಾರ್ಲರ್ ಮತ್ತು ಸ್ಪಾ ಕೇಂದ್ರಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ 11 ಸಂಸ್ಥೆಗಳು ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದ್ದು, 91 ಸಂಸ್ಥೆಗಳಿಗೆ ನೋಟಿಸ್‌ ನೀಡಲಾಗಿದೆ. ಸ್ಪಾ ಮತ್ತು ಮಸಾಜ್ ಥೆರಪಿ ಸಂಸ್ಥೆಗಳಲ್ಲಿ ಮಾಲೀಕರು, ಉದ್ಯೋಗಿಗಳು ಹಾಗೂ ಗ್ರಾಹಕರಿಗೆ ನ್ಯಾಯಯುತ, ಸುರಕ್ಷಿತ ಮತ್ತು ಕಾನೂನುಬದ್ಧ ವಾತಾವರಣವನ್ನು ನಿರ್ಮಿಸುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆಯಂತೆ ನಗರದಾದ್ಯಂತ 1,154 ಮಸಾಜ್ ಪಾರ್ಲರ್ ಮತ್ತು ಸ್ಪಾ ಸಂಸ್ಥೆಗಳನ್ನು ಒಳಗೊಂಡ ವಿಶೇಷ ಪರಿಶೀಲನಾ ಅಭಿಯಾನವನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಭಿಯಾನ ನಗರದ ಪೊಲೀಸ್ ಆಯುಕ್ತ ಹಿತೇಂದ್ರ ಅವರ ನೇತೃತ್ವದಲ್ಲಿ ಹಾಗೂ ರೌಡಿ ನಿಗ್ರಹ ದಳ ಮತ್ತು ಅಪರಾಧ ನಿಯಂತ್ರಣ ವಿಭಾಗದ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು. ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅನ್ವಯವಾಗುವ ಅವಕಾಶಗಳ ಪಾಲನೆ, ಆರೋಗ್ಯ ಇಲಾಖೆ ನಿಗದಿಪಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ (ಎಸ್‌ಒಪಿ) ಅನುಸರಣೆ ಹಾಗೂ ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಪ್ರಜೆಗಳ ಉದ್ಯೋಗ ಮತ್ತು ವೀಸಾ ಸ್ಥಿತಿಯ ಪರಿಶೀಲನೆಯ ಮೇಲೆ ಈ ತಪಾಸಣೆ ಕೇಂದ್ರೀಕೃತವಾಗಿತ್ತು

ಎಲ್ಲ ಸಂಸ್ಥೆಗಳು ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅನ್ವಯವಾಗುವ ಅವಕಾಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರವಾಸಿ ವೀಸಾದಲ್ಲಿರುವ ವಿದೇಶಿ ಪ್ರಜೆಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ತಪ್ಪಿಸಬೇಕು ಮತ್ತು ಆರೋಗ್ಯ ಇಲಾಖೆ ನಿಗದಿಪಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅನುಸರಿಸಬೇಕು. ನ್ಯಾಯಸಮ್ಮತ ವ್ಯವಹಾರಗಳನ್ನು ರಕ್ಷಿಸಲು ಮತ್ತು ಕಾನೂನುಬದ್ಧ ಕಾರ್ಯಾಚರಣೆಗೆ ಪೂರಕ ವಾತಾವರಣ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಆದರೆ, ಕಾನೂನಿನ ಯಾವುದೇ ಉಲ್ಲಂಘಟನೆ ಅಥವಾ ಆರೋಗ್ಯ ಸೇವೆಗಳ ಹಸರಿನಲ್ಲಿ ನಡೆಯುವ ಶೋಷಣೆಯನ್ನು ಸಹಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

-ಬಾಕ್ಸ್‌ ಟೇಬಲ್‌-ಆಯುಕ್ತಾಲಯತಪಾಸಣೆಉಲ್ಲಂಘನೆನೋಟಿಸ್‌ಕೇಂದ್ರ11244

ಉತ್ತರ250026ಪೂರ್ವ191061

ಪಶ್ಚಿಮ22400ದಕ್ಷಿಣ28900ರೌಡಿ ನಿಗ್ರಹ ದಳ8870

ಒಟ್ಟು1,1541191

-ಕೋಟ್‌-

ಮಸಾಜ್ ಪಾರ್ಲರ್ ಮತ್ತು ಸ್ಪಾಗಳು ನ್ಯಾಯಯುತ, ಸುರಕ್ಷಿತ ಮತ್ತು ಕಾನೂನುಬದ್ಧ ವಾತಾವರಣದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿ, ಮಾಲೀಕರು, ಉದ್ಯೋಗಿಗಳು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಸಮಾನವಾಗಿ ರಕ್ಷಿಸುವುದು ಪರಿಶೀಲನೆಯ ಉದ್ದೇಶವಾಗಿದೆ.

-ಪ್ರಿಯಾಂಕ್ ಖರ್ಗೆ, ಗೃಹ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಸ್ತೇಜನಗೊಂಡ ಗ್ರಾಮೀಣ ಗ್ರಂಥಾಲಯಗಳು !
ಪ್ರತಿಯೊಬ್ಬ ಕನ್ನಡಿಗ ನಾಡಿನ ಕಾವಲುಗಾರನಾಗಬೇಕಿದೆ: ಚಲಪತಿ ಗೌಡ