ಕನಕಗಿರಿ: ಪಟ್ಟಣದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು, ೧೧೭೦ ವಿದ್ಯಾರ್ಥಿಗಳು ಪ್ರಥಮ ಭಾಷಾ ಪರೀಕ್ಷೆ ಬರೆದಿದ್ದು, ೨೦ ವಿದ್ಯಾರ್ಥಿಗಳು ಗೈರಾಗಿದ್ದರು.
ಗೈರಾದ ೧೧ ವಿದ್ಯಾರ್ಥಿಗಳ ಪೈಕಿ ೧೦ ಕನ್ನಡ ಭಾಷಾ ಹಾಗೂ ಓರ್ವ ಆಂಗ್ಲ ಭಾಷಾ ವಿದ್ಯಾರ್ಥಿಯಾಗಿದ್ದಾನೆ ಎಂದು ಕೇಂದ್ರದ ಅಧೀಕ್ಷಕ ಜಗದೀಶ ಹಾದಿಮನಿ ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರ ಸಂಖ್ಯೆ ೨ರಲ್ಲಿ ೪೬೯ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದ್ದು, ೪೬೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಕನ್ನಡ ಭಾಷೆಗೆ ೪೩೨ ವಿದ್ಯಾರ್ಥಿಗಳು, ಓರ್ವ ಉರ್ದು ಹಾಗೂ ೩೦ ವಿದ್ಯಾರ್ಥಿಗಳು ಆಂಗ್ಲ ಭಾಷೆಯ ಪರೀಕ್ಷೆ ಬರೆದಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥ ಚಂದುಸಾಬ ತಿಳಿಸಿದರು.ಇನ್ನೂ ಶ್ರೀ ರುದ್ರಸ್ವಾಮಿ ಅನುದಾನಿತ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದಲ್ಲಿ ೩೧೧ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವಾಗಿದೆ. ಈ ಪೈಕಿ ೩೧೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮೂವರು ಗೈರಾಗಿದ್ದಾರೆ. ಇದರಲ್ಲಿ ೨೮೮ ಕನ್ನಡ ಮಾಧ್ಯಮ ಹಾಗೂ ೨೦ ವಿದ್ಯಾರ್ಥಿಗಳು ಆಂಗ್ಲ ಭಾಷೆಯನ್ನು ಎದುರಿಸಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥ ಬಸವರಾಜ ಪಾಟೀಲ್ ತಿಳಿಸಿದರು.
ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಹಾದಿಮನಿ, ಸಮೂಹ ಸಂಪನ್ಮೂಲ ವ್ಯಕ್ತಿ ಶಿವಪ್ಪ ಹೆಳವರ, ಪರೀಕ್ಷಾ ಮುಖ್ಯ ಅಧೀಕ್ಷಕರಾದ ಜಗದಶ ಹಾದಿಮನಿ, ಚಂದುಸಾಬ ಇತರರಿದ್ದರು.