ಜಿಲ್ಲೆಯ 12 ತಾಲೂಕು ಪಂಚಾಯಿತಿಗಳಿಗೆ 118 ಸ್ಥಾನ

KannadaprabhaNewsNetwork |  
Published : Oct 08, 2026, 02:15 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ತಾಲೂಕು ಪಂಚಾಯಿತಿಗಳ ಒಟ್ಟು ಸದಸ್ಯ ಸ್ಥಾನಗಳನ್ನು ಅನುಸೂಚಿತ ಜಾತಿ(ಎಸ್‌ಸಿ), ಅನುಸೂಚಿತ ಪಂಗಡ(ಎಸ್‌ಟಿ), ಹಿಂದುಳಿದ ವರ್ಗ ‘ಎ’, ಹಿಂದುಳಿದ ವರ್ಗ ‘ಬ’ ಹಾಗೂ ಸಾಮಾನ್ಯ ವರ್ಗಗಳಿಗೆ ಹಂಚಿಕೆ ಮಾಡಲಾಗಿದೆ.

ಕಾರವಾರ: ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ -1993ರ ಕಲಂ 123ರ ಪ್ರಕಾರ ಜಿಲ್ಲೆಯ 12 ತಾಲೂಕು ಪಂಚಾಯಿತಿಗಳಿಗೆ ಒಟ್ಟು 118 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ತಾಲೂಕು ಪಂಚಾಯಿತಿಗಳ ಒಟ್ಟು ಸದಸ್ಯ ಸ್ಥಾನಗಳನ್ನು ಅನುಸೂಚಿತ ಜಾತಿ(ಎಸ್‌ಸಿ), ಅನುಸೂಚಿತ ಪಂಗಡ(ಎಸ್‌ಟಿ), ಹಿಂದುಳಿದ ವರ್ಗ ‘ಎ’, ಹಿಂದುಳಿದ ವರ್ಗ ‘ಬ’ ಹಾಗೂ ಸಾಮಾನ್ಯ ವರ್ಗಗಳಿಗೆ ಹಂಚಿಕೆ ಮಾಡಲಾಗಿದೆ.

ಶಿರಸಿ, ಕುಮಟಾ ಮತ್ತು ಹೊನ್ನಾವರ ತಾಲೂಕು ಪಂಚಾಯಿತಿಗಳಿಗೆ ತಲಾ 13 ಸ್ಥಾನಗಳು ನಿಗದಿಯಾಗಿದ್ದು, ತಲಾ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಉಳಿದಂತೆ ದಾಂಡೇಲಿಗೆ 7, ಜೋಯಿಡಾ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಸಿದ್ದಾಪುರ, ಅಂಕೋಲಾ, ಕಾರವಾರ ಹಾಗೂ ಭಟ್ಕಳ ತಾಲೂಕು ಪಂಚಾಯಿತಿಗಳಿಗೆ ತಲಾ 9 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.

ಒಟ್ಟಾರೆ 118 ಸ್ಥಾನಗಳಲ್ಲಿ 65 ಮಹಿಳಾ ಸ್ಥಾನಗಳಿದ್ದು, ಎಸ್‌ಸಿಗೆ 13(12 ಮಹಿಳಾ), ಎಸ್‌ಟಿಗೆ 12(12 ಮಹಿಳಾ), ಹಿಂದುಳಿದ ವರ್ಗ ‘ಎ’ಗೆ 25(15 ಮಹಿಳಾ), ಹಿಂದುಳಿದ ವರ್ಗ ‘ಬ’ಗೆ 3 ಸ್ಥಾನ ಹಾಗೂ ಸಾಮಾನ್ಯ ವರ್ಗಕ್ಕೆ 65(26 ಮಹಿಳಾ) ಸ್ಥಾನಗಳು ಮೀಸಲಾಗಿವೆ.

ಜಿಪಂಗೆ ಮೀಸಲಾತಿ

ಕಾರವಾರ: ಜಿಲ್ಲಾ ಪಂಚಾಯಿತಿಗೆ ಮೀಸಲಾತಿ ಅದಿಸೂಚನೆ ಹೊರಡಿಸಲಾಗಿದೆ.ವಿವರ ಹೀಗಿದೆ. ಆವರಣದಲ್ಲಿ ಮಹಿಳೆಯರಿಗೆ ಮೀಸಲಾದ ಸ್ಥಾನಗಳಿವೆ. ಒಟ್ಟೂ ಸ್ಥಾನಗಳ ಸಂಖ್ಯೆ 53(27) ಅನುಸೂಚಿತ ಜಾತಿ 4 (2), ಅನುಸೂಚಿತ ಪಂಗಡ 1(1),ಹಿಂದುಳಿದ ವರ್ಗ ಅ 14(7), ಹಿಂದುಳಿದ ವರ್ಗ ಬ 4(2), ಸಾಮಾನ್ಯ 30(15) ಸ್ಥಾನಗಳನ್ನು ಕಲ್ಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವರ್ಣವಲ್ಲೀ ಮಠದ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ
ಹಳಿಯಾಳದಲ್ಲಿ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗೆ ತೆರೆ