ಅಂಜನಾದ್ರಿಗೆ ಸಮರ್ಪಿಸಿದ ಪ್ರಭಾವಳಿ, ಗದೆ ಸೇರಿ 12 ಸಾಮಗ್ರಿ ಚಿನ್ನಲೇಪಿತ: ಎಸಿ ಮಾಲಗಿತ್ತಿ

KannadaprabhaNewsNetwork |  
Published : May 11, 2026, 02:15 AM IST
Anjanadri

ಸಾರಾಂಶ

ತಾಲೂಕಿನ ಐತಿಹಾಸಿಕ ಕಿಷ್ಕಿಂದಾ ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಗೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ಕುಟುಂಬಸ್ಥರು ಸಮರ್ಪಣೆ ಮಾಡಿರುವ ಪ್ರಭಾವಳಿ, ಕಿರೀಟ, ಗದೆ ಸೇರಿದಂತೆ 12 ಸಾಮಗ್ರಿಗಳು ಚಿನ್ನಲೇಪಿತ ತಾಮ್ರದಿಂದ ಕೂಡಿದ್ದಾಗಿವೆ.

ಗಂಗಾವತಿ: ತಾಲೂಕಿನ ಐತಿಹಾಸಿಕ ಕಿಷ್ಕಿಂದಾ ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಗೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ಕುಟುಂಬಸ್ಥರು ಸಮರ್ಪಣೆ ಮಾಡಿರುವ ಪ್ರಭಾವಳಿ, ಕಿರೀಟ, ಗದೆ ಸೇರಿದಂತೆ 12 ಸಾಮಗ್ರಿಗಳು ಚಿನ್ನಲೇಪಿತ ತಾಮ್ರದಿಂದ ಕೂಡಿದ್ದಾಗಿವೆ. ಎಲ್ಲವೂ ಚಿನ್ನದಿಂದ ಕೂಡಿಲ್ಲ ಎಂದು ಕಿಷ್ಕಿಂದಾ ಅಂಜನಾದ್ರಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.

ಭಾನುವಾರ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ದೇವಾಲಯಕ್ಕೆ ಸಮರ್ಪಣೆಯಾಗಿರುವ ಸಾಮಾನುಗಳನ್ನು ಲೋಹ ತಜ್ಞರಿಂದ ಪರೀಕ್ಷೆ ಮಾಡಿಸಿದ ಆನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಎಎಂಆರ್ ಕಂಪನಿಯ ಮಹೇಶ ರೆಡ್ಡಿ ಸಮರ್ಪಣೆ

ಹೈದರಾಬಾದ್ ಮೂಲದ ಎಎಂಆರ್ ಕಂಪನಿಯ ಮಹೇಶ ರೆಡ್ಡಿ ಹಾಗೂ ಕುಟುಂಬಸ್ಥರು ಮೇ 8ರಂದು ಪ್ರಭಾವಳಿ ಗದೆ, ಕಿರೀಟ ಇತರ ಪೂಜಾ ಸಾಮಗ್ರಿಗಳನ್ನು ಸಮರ್ಪಣೆ ಮಾಡಿದ್ದರು. ಒಂದೂವರೆ ಕೆಜಿ ಚಿನ್ನ ಅಂದಾಜು ₹2.30 ಕೋಟಿ ಮೌಲ್ಯದ ಆಭರಣಗಳು ಎಂದು ಹೇಳಲಾಗಿತ್ತು. ಈಗ ಚಿನ್ನ ಲೇಪಿತ ತಾಮ್ರದಿಂದ ಕೂಡಿವೆ ಎಂದು ಲೋಹ ಪರಿಶೋಧಕರು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ನೀಡುವಾಗ ಬಂಗಾರದ ಮೌಲ್ಯಮಾಪನ ಮಾಡುವ ಗುಂಡಾಚಾರ್ ಮತ್ತು ಪರಶುರಾಮ ವಿಶ್ವಕರ್ಮ ದೃಢಪಡಿಸಿದ್ದು, ತಾಮ್ರಕ್ಕೆ ಚಿನ್ನದ ತಗಡು ಲೇಪನ ಮಾಡಲಾಗಿದೆ.

ಎಲ್ಲವೂ ಚಿನ್ನದ ಸಾಮಗ್ರಿ ಅಲ್ಲ

 ಎಲ್ಲವೂ ಚಿನ್ನದ ಸಾಮಗ್ರಿ ಅಲ್ಲ. ದಾನ ನೀಡಿದ ದಾನಿಗಳನ್ನು ಸಂಪರ್ಕಿಸಿ ಶ್ರೀ ಆಂಜನೇಯನಿಗೆ ಸಮರ್ಪಣೆ ಮಾಡಿದ ಸಾಮಗ್ರಿಗಳ ಮೌಲ್ಯ ಹಾಗೂ ರಸೀದಿಯನ್ನು ದೇವಾಲಯ ಕಮಿಟಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು, ಶೀಘ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ದಾನಿಗಳು ದೇವಾಲಯಗಳಿಗೆ ನೀಡಿದ ಚಿನ್ನಾಭರಣ, ಬೆಳ್ಳಿ ಇತರ ಅಮೂಲ್ಯ ವಸ್ತುಗಳ ಮೌಲ್ಯಮಾಪನ ಮಾಡಿ, ರಸೀದಿ ಸಮೇತ ದಾಖಲೆ ಇಡಬೇಕಾಗುತ್ತದೆ. ಆದ್ದರಿಂದ ಲೋಹ ಶೋಧಕರು ಮತ್ತು ಮೌಲ್ಯಮಾಪನ ಮಾಡುವವರಿಂದ ಮೌಲ್ಯ ಮಾಡಿಸಿ ದಾಖಲೆ ಇರಿಸಲಾಗುತ್ತದೆ ಎಂದು ಮಾಲಗಿತ್ತಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಯು. ವಸಂತಕುಮಾರಿ, ಕಂದಾಯ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನನ್ನ, ಡಿಕೆಶಿ ನಡುವೆ ವ್ಯವಹಾರಿಕ ಸಂಬಂಧವಿಲ್ಲ: ಬಿವೈವಿ
ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಕ್ಲಾಸ್‌