- ಮಕ್ಕಳಿಗೆ ಹನೂರು ಎಂ.ಆರ್. ಮಂಜುನಾಥ್ ಅಭಿನಂದನೆ
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನಲ್ಲಿ ಒಟ್ಟು 12 ಮಕ್ಕಳು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದು, ಅದರಲ್ಲಿ 8 ಮಕ್ಕಳು ಒಂದೇ ಶಾಲೆಯಲ್ಲಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು. ತಾಲೂಕಿನ ಕಾಡಂಚಿನ ಗ್ರಾಮವಾದ ನೆಲ್ಲೂರು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಆಯ್ಕೆಯಾದ ಮಕ್ಕಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಕ್ಕಳಿಗೆ ಬ್ಯಾಗ್ ವಿತರಣೆ ಮಾತನಾಡಿದರು.ನೆಲ್ಲೂರು ಶಾಲೆಯ ಶಿಕ್ಷಕರು ಪೋಷಕರ ಸಹಕಾರದೊಂದಿಗೆ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಹೇಗೆ ಪರೀಕ್ಷೆಯನ್ನು ಎದುರಿಸಬೇಕು ಎಂಬುದನ್ನು ಮಾರ್ಗದರ್ಶನ ಮಾಡಿರುವ ಪರಿಣಾಮ ಒಮ್ಮೆಲೆ 8 ಮಕ್ಕಳು ಆಯ್ಕೆಯಾಗಿದ್ದಾರೆ. ಇಂತಹ ನಿದರ್ಶನ ನಮ್ಮ ಹನೂರು ತಾಲೂಕಿನಲ್ಲಿ ಮೊದಲು ಎಂಬ ಹೆಗ್ಗಳಿಕೆಗೆ ನೆಲ್ಲೂರು ಶಾಲೆ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಇಂತಹ ಸಾಧನೆಗೆ ಇಲ್ಲಿನ ಶಿಕ್ಷಕರು ಮೂಲಭೂತ ಸೌಲಭ್ಯ ಹಾಗೂ ಇನ್ನಿತರ ಪರಿಕರಗಳು ಬೇಕು ಎಂಬ ಮನವಿ ಕೊಟ್ಟರೆ ಕಲ್ಪಿಸಲು ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ಗ್ರಾಮೀಣ ಭಾಗದ ಮಕ್ಕಳು ಬುದ್ಧಿವಂತರು ಎಂಬುದನ್ನು ಈ ಶಾಲೆಯ ಮಕ್ಕಳು ನಿರೂಪಿಸಿದ್ದಾರೆ. ಹಾಗಾಗಿ ಮುಂದಿನ ಬಾರಿಯೂ ಸಹ ಈ ಭಾಗದಿಂದ ಸಾಕಷ್ಟು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ಕುಳಿತು ಆಯ್ಕೆಯಾಗಲಿ ಎಂಬ ಹಾರೈಕೆ ನನದಾಗಿದೆ ಎಂದರು.ತಮಿಳು ಮಾಧ್ಯಮ:
ಇದೇ ಸಂದರ್ಭದಲ್ಲಿ ಈ ಭಾಗದ ಮುಖಂಡರಾದ ಯರಂಬಾಡಿ ಹುಚ್ಚಯ್ಯ, ಪಿ.ಜಿ. ಮಣಿ, ಚಾಮುಲ್ ನಿರ್ದೇಶಕರ ಉದ್ದನೂರು ಪ್ರಸಾದ್, ಮಿಣ್ಯ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಬಸವಣ್ಣ, ನೆಲ್ಲೂರು ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ರಾಜ್ ಹಾಗೂ ಸಹ ಶಿಕ್ಷಕರು ಮತ್ತು ಗ್ರಾಮಸ್ಥರು, ಮುಖಂಡರು, ಮಕ್ಕಳು, ಪೋಷಕರು ಉಪಸ್ಥಿತರಿದ್ದರು.---
ಜವಾಹರ್ ನವೋದಯ ವಿದ್ಯಾಲಯಕ್ಕೆ ಮಕ್ಕಳನ್ನು ಶಾಸಕ ಎಂ.ಆರ್. ಮಂಜುನಾಥ್ ಅಭಿನಂದಿಸಿದರು.