ಗ್ರಾಹಕನಂತೆ ನಟಿಸಿ ಚಿನ್ನದ ಸರ ಕಳವು

KannadaprabhaNewsNetwork |  
Published : Mar 30, 2026, 12:30 AM IST
29ಎಚ್ಎಸ್ಎನ್10 :  | Kannada Prabha

ಸಾರಾಂಶ

ಅಂಗಡಿ ಮಾಲೀಕ ಅಮೃತ್ ಅವರ ಮಾಹಿತಿಯಂತೆ, ಮಾಸ್ಕ್ ಧರಿಸಿಕೊಂಡು ಅಪರಿಚಿತ ವ್ಯಕ್ತಿ ಗ್ರಾಹಕನಂತೆ ನಟಿಸಿ ಅಂಗಡಿಗೆ ಬಂದಿದ್ದು, ಮೊದಲು ತಾಳಿ ಗುಂಡು ಹಾಗೂ ಚಿನ್ನದ ಸರ ಬೇಕೆಂದು ಹೇಳಿ ವೀಕ್ಷಿಸಿದ್ದಾನೆ. ನಂತರ ಉಂಗುರ ತೋರಿಸುವಂತೆ ಕೇಳಿದ್ದಾನೆ. ಅಂಗಡಿ ಮಾಲೀಕ ಉಂಗುರ ತರುವ ವೇಳೆ, ಆ ವ್ಯಕ್ತಿ ಗಮನ ಬೇರೆಡೆ ಸೆಳೆದು ಇಟ್ಟಿದ್ದ ಚಿನ್ನದ ಸರವನ್ನು ಜೇಬಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾನೆ. ಕಳವಾಗಿರುವ ಸರವು ಸುಮಾರು 12 ಗ್ರಾಂ ತೂಕ ಹೊಂದಿದ್ದು, ಅದರ ಮೌಲ್ಯ ಸುಮಾರು ₹1.90 ಲಕ್ಷ ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಗಾಣಿಗರ ಬೀದಿಯಲ್ಲಿರುವ ಕನ್ನಿಕಾ ಜ್ಯೂಯಲರ್‌ ಅಂಗಡಿಯಲ್ಲಿ ನಿನ್ನೆ ಸಂಜೆ ಸುಮಾರು 6 ಗಂಟೆಯ ವೇಳೆಗೆ ಚಾಣಾಕ್ಷತನದಿಂದ ಚಿನ್ನದ ಸರ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಅಂಗಡಿ ಮಾಲೀಕ ಅಮೃತ್ ಅವರ ಮಾಹಿತಿಯಂತೆ, ಮಾಸ್ಕ್ ಧರಿಸಿಕೊಂಡು ಅಪರಿಚಿತ ವ್ಯಕ್ತಿ ಗ್ರಾಹಕನಂತೆ ನಟಿಸಿ ಅಂಗಡಿಗೆ ಬಂದಿದ್ದು, ಮೊದಲು ತಾಳಿ ಗುಂಡು ಹಾಗೂ ಚಿನ್ನದ ಸರ ಬೇಕೆಂದು ಹೇಳಿ ವೀಕ್ಷಿಸಿದ್ದಾನೆ. ನಂತರ ಉಂಗುರ ತೋರಿಸುವಂತೆ ಕೇಳಿದ್ದಾನೆ. ಅಂಗಡಿ ಮಾಲೀಕ ಉಂಗುರ ತರುವ ವೇಳೆ, ಆ ವ್ಯಕ್ತಿ ಗಮನ ಬೇರೆಡೆ ಸೆಳೆದು ಇಟ್ಟಿದ್ದ ಚಿನ್ನದ ಸರವನ್ನು ಜೇಬಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾನೆ. ಕಳವಾಗಿರುವ ಸರವು ಸುಮಾರು 12 ಗ್ರಾಂ ತೂಕ ಹೊಂದಿದ್ದು, ಅದರ ಮೌಲ್ಯ ಸುಮಾರು ₹1.90 ಲಕ್ಷ ಎಂದು ತಿಳಿದುಬಂದಿದೆ. .ಈ ಸಂಬಂಧ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಮಹಜರು ಮಾಡಲು ಪೊಲೀಸರು ಬಂದಿದ್ದು ಆರೋಪಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನದಲ್ಲಿ ಶ್ರೀರಾಮನವಮಿ ವೈಭವ ಸಾಮೂಹಿಕ ಯಜ್ಞ
ಕಡೂರಿನಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ: ಭಂಡಾರಿ ಶ್ರೀನಿವಾಸ್