ಆರೋಗ್ಯ ಜಾಗೃತಿ ಮೂಡಿಸಿದ ಮ್ಯಾರಥಾನ್, ಉಚಿತ ಕಿಡ್ನಿ ತಪಾಸಣೆ ಶಿಬಿರ ಉದ್ಘಾಟಿಸಿದ ಡಿವೈಎಸ್ಪಿ ಪ್ರಕಾಶ್
ಕಾರ್ಯಕ್ರಮಕ್ಕೆ ಆಗಮಿಸಿದ ಡಿವೈಎಸ್ಪಿ ಪ್ರಕಾಶ್ ಮ್ಯಾರಥಾನ್‌ಗೆ ಚಾಲನೆ ನೀಡಿದರು.
ಆರೋಗ್ಯವೇ ಭಾಗ್ಯ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಿದ್ವಿನ್ ಆಸ್ಪತ್ರೆ ಆಯೋಜಿಸಿದ್ದ ವಿಶ್ವ ಕಿಡ್ನಿ ದಿನ ಹಾಗೂ ವಿಶ್ವ ಪ್ರಯೋಗಾಲಯ ದಿನಾಚರಣೆ ಅಂಗವಾಗಿ ವಿಶಿಷ್ಟ ‘ರನ್ ಫಾರ್ ಹೆಲ್ತ್’ ಮಾರಥಾನ್‌ನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.ಈ ವೇಳೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಮೇಘನಾ ಅರುಣ್ ಕುಮಾರ್, ಉತ್ತಮ ಆರೋಗ್ಯಕ್ಕಾಗಿ ಒತ್ತಡರಹಿತ ಜೀವನ ಹಾಗೂ ನಿಯಮಿತ ದೈಹಿಕ ಚಟುವಟಿಕೆಗಳ ಅಗತ್ಯವಿದೆ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ನುರಿತ ತಜ್ಞ ಡಾ.ರಮೇಶ್ ಅವರು ತಪಾಸಣೆ ನಡೆಸಲಿದ್ದಾರೆ ಎಂದರು.
ಈ ಮ್ಯಾರಥಾನ್ನಲ್ಲಿ 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ವಿಜೇತರಿಗೆ ಮೊದಲ ಮೂರು ಬಹುಮಾನಗಳೊಂದಿಗೆ, ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಮತ್ತು ಪದಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಮಹಿಳಾ ವಿಭಾಗದಲ್ಲಿ ಜಯಶ್ರೀ ಪ್ರಥಮ ಬಹುಮಾನವಾಗಿ ₹7 ಸಾವಿರ ,ಕುಸುಮಾ ದ್ವಿತೀಯ ಬಹುಮಾನವಾಗಿ ₹5 ಸಾವಿರ, ಸೌಮ್ಯ ತೃತೀಯ ಬಹುಮಾನವಾಗಿ ₹3 ಸಾವಿರ ಪಡೆದರು. ಯುವಕರು ಹಾಗೂ ಹಿರಿಯರು ಸಮಾನವಾಗಿ ಭಾಗವಹಿಸಿ ತಮ್ಮ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಸಿದ್ವಿನ್ ಆಸ್ಪತ್ರೆ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮ ಆರೋಗ್ಯವೇ ಭಾಗ್ಯ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರಿತು.
ಸಿಕೆಬಿ-3 ಚಿಕ್ಕಬಳ್ಳಾಪುರ ನಗರದ ಸಿದ್ವಿನ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ 5ಕಿಮೀ ಮಾರಥಾನ್/ ವಾಕ್‌ಥಾನ್ ಗೆ ಡಿವೈಎಸ್ಪಿ ಪ್ರಕಾಶ್ ಚಾಲನೆ ನೀಡಿದರು.