ಜಪ್ತಿ ಮಾಡಲಾದ 38 ಕೋಟಿಬೆಲೆಯ 128 ಕೆಜಿ ಡ್ರಗ್ಸ್ ನಾಶ

KannadaprabhaNewsNetwork |  
Published : Apr 18, 2026, 03:45 AM IST
Drugs

ಸಾರಾಂಶ

ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 38 ಕೋಟಿ ರು. ಮೌಲ್ಯದ 128 ಕೆಜಿ ಡ್ರಗ್ಸ್ ಅನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗದ (ಎನ್‌ಸಿಬಿ) ಬೆಂಗಳೂರು ವಲಯ ಶುಕ್ರವಾರ ನಾಶಗೊಳಿಸಿದೆ.

  ಬೆಂಗಳೂರು :  ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 38 ಕೋಟಿ ರು. ಮೌಲ್ಯದ 128 ಕೆಜಿ ಡ್ರಗ್ಸ್ ಅನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗದ (ಎನ್‌ಸಿಬಿ) ಬೆಂಗಳೂರು ವಲಯ ಶುಕ್ರವಾರ ನಾಶಗೊಳಿಸಿದೆ.

ಡ್ರಗ್ಸ್ ಸುಟ್ಟು ಹಾಕಿದ ಎನ್‌ಸಿಬಿ ಅಧಿಕಾರಿಗಳು

ಹೊಸಕೋಟೆ ಕೈಗಾರಿಕಾ ಪ್ರದೇಶದಲ್ಲಿ 13 ಪ್ರಕರಣಗಳಲ್ಲಿ ಡ್ರಗ್ಸ್ ಅನ್ನು ಎನ್‌ಸಿಬಿ ಅಧಿಕಾರಿಗಳು ಸುಟ್ಟು ಹಾಕಿದ್ದಾರೆ. ಇದೇ ವರ್ಷ ಎರಡನೇ ಬಾರಿ ವಶಪಡಿಸಿಕೊಂಡ ಡ್ರಗ್ಸ್ ಅನ್ನು ಎನ್‌ಸಿಬಿ ಅಗ್ನಿಗೆ ಆಹುತಿ ಮಾಡಿದ್ದು, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು 49 ಕೋಟಿ ರು ಮೌಲ್ಯದ 1735 ಕೆಜಿ ಡ್ರಗ್ಸ್ ನಾಶಗೊಳಿಸಿದೆ. 

ಮಾದಕ ವಸ್ತುಗಳು ನಾಶ

ಇದರಲ್ಲಿ ಎಂಡಿಎಂಎ, ಹೈಡ್ರೋ ಗಾಂಜಾ, ಕೊಕೇನ್‌, ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳು ಸೇರಿವೆ.

ಡ್ರಗ್ಸ್ ನಾಶಗೊಳಿಸುವ ವೇಳೆ ಬೆಂಗಳೂರು ವಲಯ ಎನ್‌ಸಿಬಿ ನಿರ್ದೇಶಕ ಸಚಿನ್ ಘೋರ್ಪಡೆ, ಸಿಸಿಬಿ ಡಿಸಿಪಿ ರಾಜಾ ಇಮಾಮ್ ಕಾಸಿಂ ಹಾಗೂ ಎನ್‌ಸಿಬಿ ಸಹಾಯಕ ನಿರ್ದೇಶಕ ಎಂ.ಆರ್‌.ಅರವಿಂದ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಎಸ್ಐಟಿ ರಚನೆ ಆದಾಗ ಡಾ। ಹೆಗ್ಗಡೆ ಜೈಲಿಗೆ ಹೋಗ್ತಾರೆ ಅಂತ ಸಂಭ್ರಮಿಸಿತ್ತು ಬುರುಡೆ ಗ್ಯಾಂಗ್‌: ಚಿನ್ನಯ್ಯ
ಗೃಹಲಕ್ಷ್ಮಿ ಸ್ಕೀಂನಿಂದ 3.89 ಲಕ್ಷ ಮಂದಿ ಫಲಾನುಭವಿಗಳು ಔಟ್‌