12ನೇ ಶತಮಾನ ವಚನಗಳ ಸುವರ್ಣ ಕಾಲ: ಶಾಸಕ ಶಾಂತನಗೌಡ

KannadaprabhaNewsNetwork |  
Published : Feb 02, 2025, 01:00 AM IST
ಹೊನ್ನಾಳಿ ಫೋಟೋ 1ಎಚ್.ಎಲ್.ಐ1.ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ,  ತಹಶೀಲ್ದಾರ್ ಪಟ್ಟರಾಜಗೌಡ, ಹೊನ್ನಾಳಿ, ನ್ಯಾಮತಿ  ಮಡಿವಾಳ ಸಮಾಜದ ಅಧ್ಯಕ್ಷರು,ಮುಖಂಡರು ಭಾಗವಹಿಸಿದ್ದರು.  | Kannada Prabha

ಸಾರಾಂಶ

ನಾಡಿನ ಇತಿಹಾಸದಲ್ಲಿ 12ನೇ ಶತಮಾನ ವಚನಗಳ ಸುವರ್ಣ ಕಾಲ ಎಂದು ಹೇಳಬಹುದು. ಬಸವಣ್ಣ, ಅಲ್ಲಮಪ್ರಭು ಅಕ್ಕ ಮಹಾದೇವಿ ಅವರಂಥ ಮಹಾನ್ ವಚನಕಾರರಿಂದ ಸಮಾಜದಲ್ಲಿ ಸಮಸಮಾಜ, ಸಹಬಾಳ್ವೆಯಂತಹ ಅನೇಕ ಸಿದ್ಧಾಂತಗಳು ಸಮಾಜಕ್ಕೆ ವಚನಗಳ ಮೂಲ ಪ್ರಾಪ್ತವಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

- ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಜಯಂತಿ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ನಾಡಿನ ಇತಿಹಾಸದಲ್ಲಿ 12ನೇ ಶತಮಾನ ವಚನಗಳ ಸುವರ್ಣ ಕಾಲ ಎಂದು ಹೇಳಬಹುದು. ಬಸವಣ್ಣ, ಅಲ್ಲಮಪ್ರಭು ಅಕ್ಕ ಮಹಾದೇವಿ ಅವರಂಥ ಮಹಾನ್ ವಚನಕಾರರಿಂದ ಸಮಾಜದಲ್ಲಿ ಸಮಸಮಾಜ, ಸಹಬಾಳ್ವೆಯಂತಹ ಅನೇಕ ಸಿದ್ಧಾಂತಗಳು ಸಮಾಜಕ್ಕೆ ವಚನಗಳ ಮೂಲ ಪ್ರಾಪ್ತವಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕು ಆಡಳಿತದಿಂದ ಶನಿವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರು ಮಾತನಾಡಿದರು.

6ನೇ ಶತಮಾನದಲ್ಲಿ ಬುದ್ಧ, 12ನೇ ಶತಮಾನದಲ್ಲಿ ಕ್ರಾಂತಿಯೋಗಿ ಬಸವಣ್ಣ, 20ನೇ ಶತಮಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಈ ದೇಶ, ನಾಡಿನಲ್ಲಿ ಜನಿಸದೇ ಇದ್ದಿದ್ದರೆ ಬಹುಶಃ ಇಂದು ಸಾಮರಸ್ಯದ ಸಮಾಜ, ಎಲ್ಲರಿಗೂ ಸಮಾನಾದ ಗೌರವ, ರಕ್ಷಣೆ, ಬದುಕುವ ಹಕ್ಕು ಲಭಿಸುತ್ತಿರಲಿಲ್ಲ. ಮಹಾತ್ಮರ ಮಾರ್ಗದರ್ಶದಿಂದ ಸಮಾಜದಲ್ಲಿ ಧಾರ್ಮಿಕತೆ, ಸಂವಿಧಾನದಿಂದ ಎಲ್ಲರೂ ನೆಮ್ಮದಿ, ಶಾಂತಿಯಿಂದ ಬದುಕುವಂತಾಗಿದೆ. ಬಸವಣ್ಣನವರ ಸಕಾಲೀನರಾದ ಮಡಿವಾಳ ಮಾಚಿದೇವ ಕೂಡ ಒಬ್ಬ ಉತ್ತಮ ವಚನಕಾರರಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದರು.

ಹಿಂದಿನ ಕಾಲದಲ್ಲಿ ವೃತ್ತಿಯಿಂದ ಜಾತಿ ಗುರುತಿಸಲಾಗುತ್ತಿತ್ತು. ಆದರೆ, ಇಂದು ವೃತ್ತಿಯನ್ನೇ ಮರೆತು ಕೇವಲ ಜಾತಿಯಿಂದ ಗುರುತಿಸುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ರಾಂತಿಯೋಗಿ ಬಸವಣ್ಣನವರ ಫೋಟೋ ಕಡ್ಡಾಯವಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕುವಂತೆ ಆದೇಶ ಮಾಡಿರುವುದು ನಮ್ಮೆಲ್ಲರ ಸುದೈವವಾಗಿದೆ ಎಂದರು.

ತಹಸೀಲ್ದಾರ್ ಪಟ್ಟರಾಜ ಗೌಡ ಮಾತನಾಡಿ, ಹಿಂದಿನ ಅದೆಷ್ಟೋ ವಚನಕಾರರು ಲಕ್ಷಾಂತರ ವಚನಗಳನ್ನು ರಚಿಸಿರುವ ಬಗ್ಗೆ ಅವರದೇ ಕೃತಿಗಳಲ್ಲಿ ಉಲ್ಲೇಖವಿದೆ. ಆದರೂ, ನಮಗೆ ಲಭಸಿರುವುದು ಸ್ವಲ್ಪ ಮಾತ್ರವಾಗಿವೆ. ಇವುಗಳನ್ನೇ ನೋಡಿದಾಗ ಸಮಾಜ ಸುಧಾರಣೆಗೆ ಇವು ಶಕ್ತಿಶಾಲಿ ಅಸ್ತ್ರಗಳಾಗಿ ತೋರುತ್ತವೆ ಎಂದರು.

ಉಪನ್ಯಾಸ ನೀಡಿದ ನಿ.ಶಿಕ್ಷಕ ಚಂದ್ರಪ್ಪ ಅವರು ಮಡಿವಾಳ ಮಾಚಿದೇವ ಬದುಕು, ಸಾಧನೆಗಳ ಕುರಿತು ಮಾತನಾಡಿ, ಮಾಚಿದೇವ ಸಾವಿರಾರು ವಚನಗಳನ್ನು ರಚಿಸಿದ್ದರೂ ಇದುವರೆಗೆ ಕೇವಲ 399 ವಚನಗಳು ಮಾತ್ರ ಲಭ್ಯವಾಗಿದೆ ಎಂದು ಹೇಳಿದರು.

ಹೊನ್ನಾಳಿ ಮಡಿವಾಳ ಮಾಚಿದೇವ ಸಮಾಜ ಅಧ್ಯಕ್ಷ ಎಂ.ಆರ್. ಮಹಾಂತೇಶ್, ನ್ಯಾಮತಿ ತಾಲೂಕು ಅಧ್ಯಕ್ಷ ರವಿಕುಮಾರ್, ಸಮಾಜದ ಅನೇಕ ಗಣ್ಯರು ಇದ್ದರು.

- - - -1ಎಚ್.ಎಲ್.ಐ1ಜೆಪಿಜಿ:

ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ, ತಹಸೀಲ್ದಾರ್ ಪಟ್ಟರಾಜಗೌಡ, ಹೊನ್ನಾಳಿ, ನ್ಯಾಮತಿ ಮಡಿವಾಳ ಸಮಾಜಗಳ ಅಧ್ಯಕ್ಷರು, ಮುಖಂಡರು ಭಾಗವಹಿಸಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ