ಮಂತ್ರಾಲಯ ಮಠದ ಶ್ರೀಗಳಿಂದ 12ನೇ ಚಾತುರ್ಮಾಸ ದೀಕ್ಷೆ ಸ್ವೀಕಾರ

KannadaprabhaNewsNetwork |  
Published : Aug 03, 2024, 12:33 AM IST
02ಕೆಪಿಆರ್‌ಸಿಆರ್03: | Kannada Prabha

ಸಾರಾಂಶ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು 12 ನೇ ಚಾತುರ್ಮಾಸ ದೀಕ್ಷೆಯನ್ನು ಸ್ವೀಕರಿಸಿದರು.

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಮ್ಮ 12ನೇ ಚಾತುರ್ಮಾಸ ದೀಕ್ಷೆಯನ್ನು ಶುಕ್ರವಾರ ಸ್ವೀಕರಿಸಿದರು.

ಚಾತುರ್ಮಾಸ್ಯ ದೀಕ್ಷೆ ಸ್ವೀಕಾರ ಹಿನ್ನೆಲೆ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೀಕ್ಷೆ ಸ್ವೀಕಾರಕ್ಕೂ ಪೂರ್ವದಲ್ಲಿ ಶ್ರೀಗಳು ಶ್ರೀರಾಘವೇಂದ್ರ ಸ್ವಾಮೀಜಿ ಮೂಲ ಬೃಂದಾವನ ಹಾಗೂ ಶ್ರೀವಾದೀಂದ್ರ ತೀರ್ಥರು ಸೇರಿ ಶ್ರೀಮಠದಲ್ಲಿರುವ ಎಲ್ಲ ಯತಿಗಳ ಬೃಂದಾವನಳಿಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಸ್ವಾಮೀಜಿ ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು.

ಚಾತುರ್ಮಾಸದ ನಿಮಿತ್ತ ಶ್ರೀಮಠದಲ್ಲಿ ನಿರಂತರವಾಗಿ ಆಧಾತ್ಮಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೆ ಸುಕ್ಷೇತ್ರಕ್ಕೆ ಆಗಮಿಸಿದ್ದ ಬಳಗಾರು ಮಠದ ಕಿರಿಯ ಮಠಾಧೀಶ ಅಕ್ಷೋಭ ರಾಮಪ್ರಿಯ ತೀರ್ಥರು ಹಾಗೂ ಸೋಸ್ಲೆ ವ್ಯಾಸರಾಜ ಮಠದ ವಿದ್ಯಾಮನೋಹರ ತೀರ್ಥರು ಚಾತುರ್ಮಾಸ್ ದೀಕ್ಷೆಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಶ್ರೀಮಠದ ವಿದ್ವಾಂಸರು,ಪಂಡಿತರು,ಅಧಿಕಾರಿ, ಸಿಬ್ಬಂದಿ ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆ, ಬಾಗಲಕೋಟೆ ಕ್ಷೇತ್ರ ನಮ್ದೆ : ಡಿ.ಕೆ.ಶಿವಕುಮಾರ್‌
ಟಿಬಿ ಡ್ಯಾಂ ಹಿನ್ನೀರಿನ ಕೈಗಾರಿಕೆ ಲೈಸೆನ್ಸ್‌ ರದ್ದತಿಗಾಗಿ ಹೋರಾಟ