9 ಪ್ರತ್ಯೇಕ ಕೇಸಲ್ಲಿ 13 ಮಂದಿ ಸೆರೆ:1.18 ಕೋಟಿ ರು.ಮೌಲ್ಯದ ವಸ್ತು ವಶ

KannadaprabhaNewsNetwork |  
Published : Sep 30, 2026, 02:00 AM IST
ಪೋಟೊ: 29ಎಸ್‌ಎಂಜಿಕೆಪಿ05ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿದರು.  | Kannada Prabha

ಸಾರಾಂಶ

9 ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 13 ಮಂದಿ ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಬಂಧಿಸಿ, 1.18 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

9 ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 13 ಮಂದಿ ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಬಂಧಿಸಿ, 1.18 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೊಹಮ್ಮದ್ ಅಬ್ದುಲ್‌ ರೆಹಮಾನ್‌, ಪಿಂಟುದಾಸ್‌, ದೀಪಕ್‌, ನಾಗರಾಜ್‌, ರೋಹಿತ್ ದರ್ಜಿ, ವಂಶಿ, ಹುಸೇನ್‌ ಕಾಟತ್‌, ಅಭಿಷೇಕ್‌, ಪ್ರೇಕ್ಷಿತಾ, ಮಹೇಶ್, ಅನಿತಾ ಹಾಗೂ ಇಬ್ಬರು ನೆರೆ ರಾಜ್ಯದವರನ್ನು ಬಂಧಿಸಲಾಗಿದೆ. ರಾಜಸ್ಥಾನ, ಗೋವಾ ಹಾಗೂ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರು ಸುಲಿಗೆ, ಕಳವು, ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ಕದ್ದ ಚಿನ್ನ, ಬೆಳ್ಳಿಯ ವಸ್ತುಗಳನ್ನು ರಾಜಸ್ಥಾನ ಹಾಗೂ ನೆಲಮಂಗಲದ ಚಿನ್ನದ ಅಂಗಡಿಗೆ ಮಾರಾಟ ಮಾಡಿದ್ದರು. ಇನ್ನೂ ಕೆಲವು ಆಭರಣಗಳನ್ನು ಅಡಮಾನ ಇಟ್ಟಿದ್ದರು.

ತಾಯಿ-ಮಗಳು ಸೇರಿ ನಾಲ್ವರ ಬಂಧನ:

ಮನೆ ಕಳವು ಪ್ರಕರಣ‍ದಲ್ಲಿ ತಾಯಿ-ಮಗಳು ಸೇರಿ ನಾಲ್ವರು ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ.ನಗರ ನಿವಾಸಿ ಅನಿತಾ(42), ಈಕೆಯ ಪುತ್ರಿ ಪ್ರೇಕ್ಷಿತಾ(20), ಈಕೆಯ ಪ್ರಿಯಕರ ಅಭಿಷೇಕ್‌(21) ಮತ್ತು ಈತನ ಸ್ನೇಹಿತ ಮಹೇಶ್‌(19) ಬಂಧಿತರು. ಆರೋಪಿಗಳ ಪೈಕಿ ಅನಿತಾ, ಪುಟ್ಟೇನಹಳ್ಳಿಯಲ್ಲಿರುವ ತನ್ನ ಸಹೋದರನ ಮನೆಗೆ ಪುತ್ರಿ ಜತೆ ಬಂದಿದ್ದರು. ಆಗ ಆ ಮನೆಯ ಮಾಲೀಕರ ಬಗ್ಗೆ ಮಾಹಿತಿ ಪಡೆದುಕೊಂಡ ಅನಿತಾ, ತನ್ನ ಪುತ್ರಿಯ ಪ್ರಿಯಕರ ಅಭಿಷೇಕ್‌ನೊಂದಿಗೆ ಜತೆ ಚರ್ಚಿಸಿ ಮನೆ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಅದರಂತೆ ಸಹೋದರನ ಮನೆ ಮಾಲೀಕರ ವಿಶ್ವಾಸಗಳಿಸಿದ್ದ ಅನಿತಾ, ಆ ಮನೆಯ ನಕಲಿ ಕೀ ಸಿದ್ಧಪಡಿಸಿಕೊಂಡಿದ್ದಳು. ಬಳಿಕ ಅಭಿಷೇಕ್‌ ಮತ್ತು ಆತನ ಸ್ನೇಹಿತ ಮಹೇಶ್ ಮೂಲಕ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿಸಿದ್ದರು. ನಂತರ ಕಳವು ಚಿನ್ನಾಭರಣ, ನಗದನ್ನು ನಾಲ್ವರು ಹಂಚಿಕೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಪಾಲಿಗೆ ಪ್ರೊ:ಸುಜನಾ ಆದರ್ಶ ಗುರುವಾಗಿದ್ದರು: ಪ್ರೊ.ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯ
ಜಿಲ್ಲೆಗೆ ಬಂದರೆ ಪ್ರಮೋಷನ್ ಸಿಗುತ್ತೆ, ಹಿಂಬಡ್ತಿ ಅಲ್ಲ: ಶಾಸಕ ಕೃಷ್ನಮೂರ್ತಿ