ಕನಕಪುರ: ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ತಿಳಿಸಿದರು.
ಧರ್ಮ ಎಂದರೆ ಹಿಂದೂ ರ ಕ್ರಿಶ್ಚಿಯನ್, ಇಸ್ಲಾಂ ಧರ್ಮ ಅಲ್ಲಾ. ಎಲ್ಲಾ ಧರ್ಮಗಳನ್ನು ಪೂಜ್ಯ ಭಾವನೆಯಿಂದ ನೋಡಬೇಕು. ನವದಂಪತಿಗಳು ಹೊರ ಜಗತ್ತಿನೊಂದಿಗೆ ಆಧ್ಯಾತ್ಮಿಕ ಜೀವನ ನಡೆಸಿಕೊಂಡು ಹೋಗುವುದು ಧರ್ಮ. ಧರ್ಮ ನಮ್ಮನ್ನು ನೋಡಿಕೊಳ್ಳುತ್ತೆ ಅಜ್ಞಾನ ಹೋಗಿ ಜ್ಞಾನ ಬರಬೇಕಾದರೆ ಧರ್ಮದ ಹೆಸರಿನ ನಮ್ಮ ಒಳಗಿನ ಜ್ಞಾನ ನಾವು ಪಡೆದುಕೊಳ್ಳಬೇಕು. ಧರ್ಮದ ಬೆಳಕಿನಲ್ಲಿ ನಡೆಯಬೇಕು ಎಂದರು.
ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರನಾಥ ಸ್ವಾಮೀಜಿ ಮಾತನಾಡಿ, ಶಿವಗಿರಿ ಕ್ಷೇತ್ರ ಪುರಾಣ ಪ್ರಸಿದ್ಧ ಸಿದ್ಧರು ತಪೋಗೈದ ಪುಣ್ಯಕ್ಷೇತ್ರ ದಲ್ಲಿ ಕಾರ್ತೀಕ ಮಾಸದ ಶುಭ ದಿನದಂದು 13 ಜೋಡಿಗಳು ದಾಂಪತ್ಯಕ್ಕೆ ಕಾಲಿಡುತ್ತಿದ್ದು, ಉತ್ತಮ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.ಮರಳೆ ಗವಿಮಠದ ಪೀಠಾಧ್ಯಕ್ಷ ಮುಮ್ಮಡಿ ಶಿವರುದ್ರ ಮಹಾಸ್ವಾಮಿ ಮಾತನಾಡಿ, ಶ್ರಾವಣ ಮತ್ತು ಕಾರ್ತೀಕ ಎರಡು ಮಾಸಗಳು ತುಂಬಾ ಶ್ರೇಷ್ಠವಾದವು. ಮನುಷ್ಯನಲ್ಲಿರುವ ಕಲ್ಮಶ ತೊರೆದು ಸುಜ್ಞಾನ ತುಂಬುತ್ತವೆ. ಮನುಷ್ಯನ ಮುಕ್ತಿಗೆ ದಾರಿ ಮಾಡಿಕೊಡುತ್ತವೆ ಎಂದು ತಿಳಿಸಿದರು.
ಶಿವಗಿರಿ ಕ್ಷೇತ್ರದಲ್ಲಿ ಕಾರ್ತೀಕ ಮಾಸ ಹಾಗೂ ಬಾಲಗಂಗಾಧರನಾಥ ಸ್ವಾಮಿಗಳ 50ನೇ ವರ್ಷ ದ ಪಟ್ಟಾಭಿಷೇಕದ ಮಹೋತ್ಸವ ಹಾಗೂ ಸಾಮೂಜಿಕ ವಿವಾಹೋತ್ಸವಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.