ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಮುಖ್ಯಸ್ಥ ಚೇತನ್‌ಕುಮಾರ್ ಒತ್ತಾಯ
ಕನ್ನಡಪ್ರಭ ವಾರ್ತೆ ಕೋಲಾರಗೃಹ ಬಳಕೆ ಅನಿಲ ಸಿಲಿಂಡರ್‌ಗಳನ್ನು ವ್ಯಾಣಿಜ್ಯ ಉದ್ದೇಶಕ್ಕೆ ಬಳಸುವುದು ಅಪರಾಧವಾಗಿದ್ದು ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್‌ನಿಂದ ನಡೆಸಲಾಗುತ್ತಿದೆ ಎಂದು ಫೌಂಡೇಶನ್‌ನ ಕರ್ನಾಟಕ ವಿಭಾಗದ ಮುಖ್ಯಸ್ಥ ಎಸ್.ಚೇತನ್ ಕುಮಾರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಳಿಗಿಂತ ಬೆಲೆ ಹೆಚ್ಚು ಇರುವುದರಿಂದ ದುರ್ಬಳಕೆ ಆಗುತ್ತಿದೆ ಎಂದರು.ತೈಲ ಕಂಪನಿಗಳಿಂದ ಅಕ್ರಮ
ತೈಲ ಕಂಪನಿಗಳೇ ನೇರವಾಗಿ ಅಕ್ರಮದಲ್ಲಿ ತೊಡಗಿದ್ದು, ಸರ್ಕಾರದ ಆದಾಯಕ್ಕೆ ಭಾರಿ ನಷ್ಟವುಂಟು ಮಾಡುತ್ತಿವೆ. ಪ್ರತಿ ಕುಟುಂಬ ವರ್ಷಕ್ಕೆ ೬ ರಿಂದ ೮ ಸಿಲಿಂಡರ್‌ಗಳನ್ನು ಮಾತ್ರ ಉಪಯೋಗಿಸುತ್ತಿವೆ. ಆದರೆ ತೈಲ ಕಂಪನಿಗಳು ೧೨ ಸಿಲಿಂಡರ್‌ಗಳ ಲೆಕ್ಕ ತೋರಿಸಿ ಮೋಸ ಮಾಡುತ್ತಿವೆ. ಗೃಹ ಬಳಕೆಯ ೧೪.೨ ಕೆ.ಜಿ ತೂಕದ ಎಲ್.ಪಿ.ಜಿ ಸಿಲಿಂಡರ್‌ಗಳ ಗ್ಯಾಸ್‌ನ್ನು ಅಕ್ರಮವಾಗಿ ೧೯ ಕೆ.ಜಿ ತೂಕದ ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್‌ಗಳಿಗೆ ತುಂಬಿಸಿ ಚಿಲ್ಲರೆಯಾಗಿ ಮಾರಾಟ ಮಾಡುವ ದಂಧೆ ನಿರಂತರವಾಗಿ ನಡೆಯುತ್ತಿದೆ. ಈ ದಂಧೆಯಲ್ಲಿ ಕೋಟ್ಯತರ ರು.ಗಳ ಅವ್ಯವಹಾರ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.ಸರ್ಕಾರ ಕಡಿವಾಣ ಹಾಕಬೇಕುಅಕ್ರಮ ರೀಫಿಲಿಂಗ್ ದಂಧೆಗೆ ಕೇಂದ್ರ-ರಾಜ್ಯ ಸರ್ಕಾರಗಳು ಇನ್ನಾದರೂ ಕಡಿವಾಣ ಹಾಕಬೇಕು, ಆಹಾರ ವಿತರಣೆಗೆ ಅಳವಡಿಸಿರುವ ಬಯೋ ಮೆಟ್ರಿಕ್‌ನಂತೆ ಸಾರ್ವಜನಿಕರಿಕೆ ಬಯೋ ಮೆಟ್ರಿಕ್ ವ್ಯವಸ್ಥೆ ಮೂಲಕ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಿದರೆ ಬಹುತೇಕ ಅವ್ಯವಹಾರ ತಡೆಯಬಹುದು ಎಂದರು.
ಗೃಹ ಬಳಕೆಯ ಸಿಲಿಂಡರ್‌ಗಳನ್ನು ದುರ್ಬಳಕೆ ಮಾಡಿದರೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ ದಂಡ ವಿಧಿಸುವ ಕಾನೂನು ಜಾರಿಗೆ ತರಬೇಕು. ನಮ್ಮ ಸ್ವಯಂ ಸೇವಾಸಂಸ್ಥೆ ಕಳೆದ ಎರಡು ವರ್ಷಗಳಿಂದ ದೇಶದ ಎಲ್ಲಾ ರಾಜ್ಯಗಳಲ್ಲೂ ಅಭಿಯಾನ ನಡೆಸುತ್ತಿದ್ದು, ಸರ್ಕಾರಗಳ ಗಮನ ಸೆಳೆಯುವ ಕೆಲಸ ಮಾಡುತ್ತಿದೆಯೆಂದು ತಿಳಿಸಿದರು.ಈ ಸಂದರ್ಭದಲ್ಲಿ ಫೌಂಡೇಶನ್‌ನ ಆಡಳಿತಾಧಿಕಾರಿ ಪ್ರಶಾಂತ್ ಜಾಮಗಡೆ, ಕರ್ನಾಟಕ ವಿಭಾಗದ ಪಿ.ಆರ್.ಒ ಅರುಣ ಮಾನಗಾಂವೆ, ಯಶ್ ದೇಶಪಾಂಡೆ ಇದ್ದರು.