ಕಂಪ್ಲಿಗೆ ₹14.10 ಕೋಟಿ ಅನುದಾನ ಬೇಡಿಕೆ

KannadaprabhaNewsNetwork |  
Published : Oct 30, 2025, 02:15 AM IST
ಕಂಪ್ಲಿ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ 2026-27ನೇ ಸಾಲಿನ ಕರಡು ವಾರ್ಷಿಕ ಯೋಜನಾ ವರದಿ ಸಿದ್ಧಪಡಿಸುವ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ಲೆಕ್ಕಿಗ ರಮೇಶ್ ಬೆಳಂಕರ್ ಅನುದಾನ ಬೇಡಿಕೆ ಪಟ್ಟಿಯನ್ನು ಓದಿದರು. | Kannada Prabha

ಸಾರಾಂಶ

ಪಟ್ಟಣದ ಅಗತ್ಯ ಮೂಲ ಸೌಕರ್ಯಗಳಿಗಾಗಿ ಅನುದಾನ ಬೇಡಿಕೆ ಪಟ್ಟಿ ಸಿದ್ಧಪಡಿಸಲಾಗಿದೆ.

ಕಂಪ್ಲಿ: ಪಟ್ಟಣದಲ್ಲಿ ಒಳಾಂಗಡ ಕ್ರೀಡಾಂಗಣ ಹಾಗೂ ಅಗತ್ಯ ಮೂಲ ಸೌಕರ್ಯ ಸೇರಿ ಇತರೆ ಅಭಿವೃದ್ಧಿ ಕಾರ್ಯಗಳಿಗಾಗಿ ₹14.10 ಕೋಟಿ ಕ್ರಿಯಾ ಯೋಜನೆ ರೂಪಿಸಿ, ಪೌರಾಡಳಿತ ಸಚಿವರಿಗೆ ಅನುದಾನ ಬೇಡಿಕೆ ಸಲ್ಲಿಸಲು ಪುರಸಭೆ ತೀರ್ಮಾನಿಸಿದೆ ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ 2026-27ನೇ ಸಾಲಿನ ಕರಡು ವಾರ್ಷಿಕ ಯೋಜನಾ ವರದಿ ಸಿದ್ಧಪಡಿಸುವ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ಮಾತನಾಡಿದರು.

2026-27ನೇ ಸಾಲಿನ ಕ್ರಿಯಾ ಯೋಜನೆ ರೂಪಿಸುವ ಸಂದರ್ಭದಲ್ಲಿ ವಾರ್ಡ್ ಸದಸ್ಯರೊಂದಿಗೆ ಚರ್ಚಿಸಿ ಪಟ್ಟಣದ ಅಗತ್ಯ ಮೂಲ ಸೌಕರ್ಯಗಳಿಗಾಗಿ ಅನುದಾನ ಬೇಡಿಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಇದರ ಅಡಿಯಲ್ಲಿ ರಸ್ತೆ ಮತ್ತು ಚರಂಡಿ ವಲಯಕ್ಕೆ ಎಸ್‌ಸಿಎಸ್‌ಪಿ ಅನುದಾನವಾಗಿ ₹1.41 ಕೋಟಿ, ಟಿಎಸ್‌ಪಿ ಅನುದಾನವಾಗಿ ₹61 ಲಕ್ಷ ಸೇರಿ ಒಟ್ಟು ₹13.10 ಕೋಟಿ, ಆರೋಗ್ಯ ವಲಯಕ್ಕೆ ₹15 ಲಕ್ಷ, ಗ್ರಂಥಾಲಯ ವಲಯಕ್ಕೆ ₹30 ಲಕ್ಷ, ಶೈಕ್ಷಣಿಕ ವಲಯಕ್ಕೆ ₹25 ಲಕ್ಷ, ವೈಯಕ್ತಿಕ ಸಹಾಯಧನ ವಲಯಕ್ಕೆ ಎಸ್‌ಸಿಎಸ್‌ಪಿ ಅಡಿಯಲ್ಲಿ ₹10 ಲಕ್ಷ ಮತ್ತು ಟಿಎಸ್‌ಪಿ ಅಡಿಯಲ್ಲಿ ₹8 ಲಕ್ಷ, ಒಟ್ಟು ₹30 ಲಕ್ಷ ರೂಪಾಯಿಗಳ ಅನುದಾನ ಬೇಡಿಕೆಯಿದೆ ಎಂದು ವಿವರಿಸಿದರು. ಪಟ್ಟಣಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಒಟ್ಟಾರೆ ₹14.10 ಕೋಟಿ ಅನುದಾನ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಜಿ.ಸುಶೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಉಸ್ಮಾನ್, ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಮಧ್ಯಾಹ್ನ 3ಕ್ಕೆ ಪಿಯುಸಿ ಫಲಿತಾಂಶ
ಕಾಡುಪ್ರಾಣಿಗಳ ಸಂತಾನಶಕ್ತಿ ಹರಣಕ್ಕೆ ರಾಜ್ಯ ಸರ್ಕಾರದಿಂದ ಚಿಂತನೆ: ಖಂಡ್ರೆ