ಕನ್ನಡಪ್ರಭ ವಾರ್ತೆ ಸಕಲೇಶಪುರ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಮಹಮ್ಮದ್ ಫರಾನ್ ಎಂಬುವವರು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಜಾತಹಳ್ಳಿ ದೇವರಾಜು ಅವರ ಭತ್ತದ ಕಣದಲ್ಲಿ ಕಾಳಿಂಗ ಸರ್ಪವು ಕಾಣಿಸಿಕೊಂಡಿತ್ತು. ಕೂಡಲೇ ಗ್ರಾಮಸ್ಥರು ಅದನ್ನು ಹಿಡಿಯಲು ಸಕಲೇಶಪುರ ಉರಗತಜ್ಞರದ ಮಹಮ್ಮದ್ ಪರಹನ್ ಅವರನ್ನು ಸಂಪರ್ಕಿಸಿದರು. ಸ್ಥಳಕ್ಕೆ ಬಂದ ಉರಗತಜ್ಞರು ಕಾಳಿಂಗ ಸರ್ಪವನ್ನು ಹಿಡಿಯಲು ಯಶಸ್ವಿಯಾದರು. ಕಾಳಿಂಗ ಸರ್ಪವು ಸುಮಾರು 14 ಅಡಿ ಉದ್ದದ, 10 ಕೆ.ಜಿ ತೂಕವಿದ್ದು, ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಬಿಸ್ಲೆ ರಕ್ಷಿತರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟುಬಂದರು.