ಎಸ್ಸಿ 6, ಎಸ್ಟಿ 1, ಹಿಂದುಳಿದ ವರ್ಗ ‘ಅ’ 6, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯರಿಗೆ 14 ಮೀಸಲು । 5 ತಾಲೂಕು ಪಂಚಾಯಿತಿಯ 81 ಕ್ಷೇತ್ರಗಳ ಪೈಕಿ 42 ಸ್ಥಾನಗಳು ಮಹಿಳೆಯರಿಗೆ ಮೀಸಲು
ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾಯಿತ ಸದಸ್ಯ ಸ್ಥಾನಗಳಿಗೆ ಮೀಸಲು ನಿಗದಿ ಪಡಿಸಿ ರಾಜ್ಯಸರ್ಕಾರ ಅಧಿಸೂಚನೆ ಹೊರಡಿಸಿದ್ದು, ರಾಮನಗರ ಜಿಪಂ,ಯ 28 ಕ್ಷೇತ್ರಗಳ ಪೈಕಿ 14 ಹಾಗೂ ತಾಪಂಯ 81 ಕ್ಷೇತ್ರಗಳ ಪೈಕಿ 42 ಸ್ಥಾನಗಳು ಮಹಿಳೆಯರಿಗೆ ಮೀಸಲಿರಿಸಿ ಆದೇಶಿಸಿದೆ.ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಕ್ಷೇತ್ರಗಳ ಸೀಮಾ / ಗಡಿ ಹಾಗೂ ಚುನಾಯಿತರಾಗಬೇಕಾದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಶಿಫಾರಸ್ಸು ಮಾಡಿರುವ ವರದಿಯನ್ನು ಅಂಗೀಕರಿಸಿರುವ ರಾಜ್ಯ ಸರ್ಕಾರ ಮೀಸಲು ನಿಗದಿಪಡಿಸಿ ಈ ಅಧಿಸೂಚನೆ ಹೊರಡಿಸಿದೆ.
ಅದರಂತೆಯೇ ತಾಪಂ ಕ್ಷೇತ್ರಗಳಿಗೂ ಮೀಸಲಿಗೆ ಅಧಿಸೂಚನೆ ಹೊರಬಿದ್ದಿದ್ದು, ಜಿಲ್ಲೆಯ ಹೊಸ ತಾಲೂಕಾದ ಹಾರೋಹಳ್ಳಿಯ 9 ಕ್ಷೇತ್ರಗಳಲ್ಲಿ 5 ಸ್ಥಾನಗಳನ್ನು ಮಹಿಳೆಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಅನುಸೂಚಿತ ಜಾತಿಗೆ 2, ಇದರಲ್ಲಿ 1 ಮಹಿಳೆ , ಅನುಸೂಚಿತ ಪಂಗಡಕ್ಕೆ 1 ಮಹಿಳೆ , ಹಿಂದುಳಿದ ವರ್ಗ ‘ಅ’ 1 ಮಹಿಳೆ ಹಾಗೂ ಸಾಮಾನ್ಯ ವರ್ಗಕ್ಕೆ ನಿಗದಿ ಪಡಿಸಿರುವ 5ರಲ್ಲಿ 2 ಮಹಿಳೆಗೆ ಮೀಸಲಿಡಲಾಗಿದೆ.
ಮಾಗಡಿ ತಾಲೂಕು ಪಂಚಾಯಿತಿಗಳ 18 ಸ್ಥಾನಗಳ ಪೈಕಿ 9 ಕ್ಷೇತ್ರಗಳು ಮಹಿಳೆಗೆ ಮೀಸಲಿರಿಸಲಾಗಿದೆ. ಅನುಸೂಚಿತ ಜಾತಿಗೆ ನಿಗದಿ ಪಡಿಸಿರುವ 4ರಲ್ಲಿ 2 ಮಹಿಳೆ,ಅನುಸೂಚಿತ ಪಂಗಡಕ್ಕೆ 1 ಮಹಿಳೆ, ಹಿಂದುಳಿದ ವರ್ಗ ‘ಅ’ ಗೆ 3ರಲ್ಲಿ 2 ಮಹಿಳೆ, ಹಿಂದುಳಿದ ವರ್ಗ ‘ಬ’ 1 ಹಾಗೂ ಸಾಮಾನ್ಯ ವರ್ಗಕ್ಕೆ 9ರಲ್ಲಿ 4 ಮಹಿಳೆಯರಿಗೆ ಮೀಸಲಿಡಲಾಗಿದೆ.
ಕನಕಪುರ ತಾಪಂ.ಯ 21 ಕ್ಷೇತ್ರಗಳ ಪೈಕಿ 11 ಸ್ಥಾನ ಮಹಿಳೆಗೆ ಮೀಸಲಿರಿಸಲಾಗಿದೆ. ಅನುಸೂಚಿತ ಜಾತಿಗೆ 4 ರಲ್ಲಿ 2 ಮಹಿಳೆ , ಅನುಸೂಚಿತ ಪಂಗಡ 1 ಮಹಿಳೆ , ಹಿಂದುಳಿದ ವರ್ಗ ‘ಅ’ ಗೆ 4 ರಲ್ಲಿ 2 ಮಹಿಳೆ, ಹಿಂದುಳಿದ ವರ್ಗ ‘ಬ’ 1 ಮಹಿಳೆ ಹಾಗೂ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿರುವ 11ರಲ್ಲಿ 5 ಸ್ಥಾನ ಮಹಿಳೆಗೆ ಮೀಸಲಿಡಲಾಗಿದೆ.
ಜಿಪಂ ಮತ್ತು ತಾಪಂ ಚುನಾವಣೆಗೆ ಪೂರಕವಾಗಿ ಆಯೋಗವು ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಕ್ಷೇತ್ರದ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಮಾಡಿತ್ತು. ಆದರೆ, ಈ ಪುನರ್ ವಿಂಗಡಣೆ ಕಾರ್ಯ ಸರಿಯಾಗಿ ನಡೆದಿಲ್ಲ ಎಂದು ರಾಜ್ಯ ಸರ್ಕಾರವೇ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ಆಯೋಗವು ಹಿಂದಿನ ಜನಗಣತಿಯಲ್ಲಿ ಖಚಿತಪಡಿಸಿದ ಜನಸಂಖ್ಯೆಯ ಆಧಾರದ ಮೇಲೆ ಜಿಪಂ ಮತ್ತು ತಾಪಂಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆ, ಕ್ಷೇತ್ರಗಳ ವಿಂಗಡಣೆ ಹಾಗೂ ಕ್ಷೇತ್ರದ ಗಡಿಗಳನ್ನು ನಿರ್ಧರಿಸಿ ಶಿಫಾರಸ್ಸು ಮಾಡಿತು. ಈ ವರದಿಯನ್ನು ರಾಜ್ಯಸರ್ಕಾರ ಅಂಗೀಕರಿಸಿ ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.ಯಾವ ತಾಲೂಕಿನಲ್ಲಿ ಎಷ್ಟು ಕ್ಷೇತ್ರಗಳು?
ಹಾರೋಹಳ್ಳಿ ತಾಲೂಕಿನಲ್ಲಿ 2 ಜಿಪಂ ಬದಲು 3, ರಾಮನಗರ ತಾಲೂಕಿನಲ್ಲಿ 4 ರಿಂದ 5, ಮಾಗಡಿ ತಾಲೂಕಿನಲ್ಲಿ 5 ರಿಂದ 6, ಚನ್ನಪಟ್ಟಣ ತಾಲೂಕಿನಲ್ಲಿ 5 ರಿಂದ 7 ಹಾಗೂ ಕನಕಪುರ ತಾಲೂಕಿನಲ್ಲಿ 6 ರಿಂದ 7 ಕ್ಷೇತ್ರಗಳ ಗಡಿ ಗುರುತಿಸಲಾಗಿದೆ.
ಇನ್ನು ತಾಪಂ ವಿಚಾರದಲ್ಲಿ ಹಾರೋಹಳ್ಳಿ -9, ರಾಮನಗರ - 14, ಮಾಗಡಿ - 18, ಚನ್ನಪಟ್ಟಣ - 19 ಕ್ಷೇತ್ರ ಹಾಗೂ ಕನಕಪುರದಲ್ಲಿ 21 ಕ್ಷೇತ್ರಗಳನ್ನು ನಿಗದಿ ಪಡಿಸಲಾಗಿದೆ. ರಾಮನಗರ ಜಿಲ್ಲೆಯ ತಾಪಂ ಸದಸ್ಯರ ಹಾಗೂ ()ಆವರಣದಲ್ಲಿರುವುದು ಮಹಿಳೆ ನಿಗದಿ ಸಂಖ್ಯೆತಾಪಂ ಸದಸ್ಯರ ಸಂಖ್ಯೆ, ಜಿಪಂ ಸದಸ್ಯರ ಸಂಖ್ಯೆ.
ಹಾರೋಹಳ್ಳಿ 09(5) 03ರಾಮನಗರ 14 (7) 05
ಮಾಗಡಿ 18 (9) 06ಚನ್ನಪಟ್ಟಣ 19 (10) 07
ಕನಕಪುರ 21 (11) 07----
ಒಟ್ಟು 81 (42) 28 (14)--