ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ಕೋಳಾಲ ಗ್ರಾಮದ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಜಾ ಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಅರ್ಜಿ ಸ್ವೀಕರಿಸಿ ಮಾತನಾಡಿದರು. ಬರದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಗೆ 15 ಕೋಟಿ ರು. ನೀಡಿದ್ದು, ಇದನ್ನು ಕುಡಿಯುವ ನೀರು ಹಾಗೂ ಇತರೇ ನಿರ್ವಹಣೆಗೆ ಬಳಸಲಾಗುವುದು. ತುಮುಲ್ ವತಿಯಿಂದ ರೈತರಿಗೆ ೧ ಲಕ್ಷ ಎಂ.ಪಿ. ಮಿನಿ ಕಿಟ್ಸ್ ವಿತರಿಸಲಾಗುತ್ತಿದ್ದು, ಪಶುಸಂಗೋಪನೆ ಇಲಾಖೆಯಿಂದ ರಾಜ್ಯಾದ್ಯಂತ ಹಸುಗಳಿಗೆ ಮಿನಿ ಕಿಟ್ಸ್ ವಿತರಿಸಲಾಗುತ್ತಿದೆ ಎಂದರು.
ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅರಿಯಲು ಜನರ ಬಳಿಗೆ ಸರ್ಕಾರ, ಜನರಿಗಾಗಿ ಸರ್ಕಾರ ಎಂಬ ಉದ್ದೇಶದಿಂದ ಪ್ರಜಾ ಸೇವಾ ಅಭಿಯಾನ ಪ್ರಾರಂಭವಾಗಿದ್ದು, ಸಾಕಷ್ಟು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಸಾರ್ವಜನಿಕರಿಂದ ೧೫೦ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಮುಖ್ಯವಾಗಿ ಭೂಮಾಪನ ಇಲಾಖೆಯ ತತ್ಕಾಲ್ ಪೋಡಿ, ದುರಸ್ತಿ, ತಿದ್ದುಪಡಿ, ಆರ್.ಆರ್.ಟಿ ಆಗಿಲ್ಲದಿರುವುದು ಹಾಗೂ ೩-೪ ತಿಂಗಳಿಂದ ದಿನಕ್ಕೆ ೨ ಗಂಟೆ ಮಾತ್ರ ಪಂಪ್‌ಸೆಟ್ ವಿದ್ಯುತ್ ನೀಡುತ್ತಿದ್ದು, ಹೆಚ್ಚುವರಿ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ರೈತರು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.ಕೋಳಾಲಕ್ಕೆ ೧೦೦ ಬೆಡ್ ಹಾಸಿಗೆಗೆ ಬೇಡಿಕೆ
ಸಭೆಯಲ್ಲಿ ಜಿ.ಪಂ. ಸಿಇಒ ಬಿ.ವಿ. ಆಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ತಹಸೀಲ್ದಾರ್ ಮಂಜುನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ್ ಮೂರ್ತಿ, ತಾ.ಪಂ. ಇಒ ಅಪೂರ್ವ, ಗಿರೀಶ್, ಕೆಂಪಣ್ಣ, ಮಾಜಿ ಅಧ್ಯಕ್ಷ ಗಿರೀಶ್, ಭದ್ರಣ್ಣ, ಚಂದ್ರು ಹಾಗೂ ಅಧಿಕಾರಿಗಳಾದ ವೆಂಕಟೇಶ್, ವೆಂಕಟರಂಗನ್, ಮಧುಚಂದ್ರ, ಆರ್‌ಐ ಬಸವರಾಜು, ಪ್ರತಾಪ್, ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.