ಜಿಲ್ಲೆಗೆ 15 ಸಾವಿರ ಮನೆಗಳು ಮಂಜೂರು: ಸಂಸದ ಖಂಡ್ರೆ

KannadaprabhaNewsNetwork |  
Published : Jan 07, 2025, 12:16 AM IST
ಚಿತ್ರ 6ಬಿಡಿಆರ್‌4ಭಾಲ್ಕಿಯ ಸಂಸದರ ಕಚೇರಿ ಆವರಣದಲ್ಲಿ ಭಾಲ್ಕಿ ತಾಲೂಕಿನ ಗ್ರಾಮೀಣ ಭಾಗದವರಿಗೆ ಪಿಎಂಎವೈ(ಜಿ) ಅಡಿಯಲ್ಲಿ ಮಂಜೂರಿಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿಯ ತಿಳುವಳಿಕೆ ಪತ್ರವನ್ನು ಸಂಸದ ಸಾಗರ ಖಂಡ್ರೆ ವಿತರಣೆ ಮಾಡಿದರು. | Kannada Prabha

ಸಾರಾಂಶ

15 thousand houses sanctioned for the district: MP Khandre

ತಿಳುವಳಿಕೆ ಪತ್ರ ವಿತರಣೆ

-----

-ಪಿಎಂಎವೈ(ಜೆ) ಅಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಮನೆ ಮಂಜೂರು

------

ಕನ್ನಡಪ್ರಭ ವಾರ್ತೆ ಭಾಲ್ಕಿ

ಜಿಲ್ಲೆಯನ್ನು ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 15 ಸಾವಿರ ಮನೆಗಳು ಮಂಜೂರಾಗಿದ್ದು ಯಾರಿಗೆ ಮನೆ ಮತ್ತು ನಿವೇಶನವಿಲ್ಲ ಅಂತಹವರಿಗೆ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಸಂಸದ ಸಾಗರ ಖಂಡ್ರೆ ತಿಳಿಸಿದರು.

ಅವರು ಭಾಲ್ಕಿಯ ಸಂಸದರ ಕಚೇರಿ ಆವರಣದಲ್ಲಿ ಭಾಲ್ಕಿ ತಾಲೂಕಿನ ಗ್ರಾಮೀಣ ಭಾಗದ 665 ಜನರಿಗೆ 2024-25ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಿಂದ ಪಿಎಂಎವೈ(ಜಿ) ಅಡಿಯಲ್ಲಿ ಮಂಜೂರಿಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿಯ ತಿಳುವಳಿಕೆ ಪತ್ರ ವಿತರಣೆ ಮಾಡಿ ಮಾತನಾಡಿದರು.

ಸಾಮಾನ್ಯ ಜನರಿಗೆ ಮೊದಲನೇ ಕಂತಿನಲ್ಲಿ 30ಸಾವಿರ ರು,, ಎರಡನೇ ಕಂತಿನದಲ್ಲಿ 60ಸಾವಿರ ರು,, ಮೂರನೇ ಕಂತಿನಲ್ಲಿ 30 ಸಾವಿರ ರು., ಒಟ್ಟು 1,20,000ರು., ಹಣವನ್ನು ಸಂಬಂಧಿಸಿದ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮೊದಲನೇ ಕಂತಿನಲ್ಲಿ 43,750ರು., ಎರಡನೇ ಕಂತಿನಲ್ಲಿ 87,500ರು., ಮೂರನೇ ಕಂತಿನಲ್ಲಿ 43,750 ರುಪಾಯಿಗಳನ್ನು ಸಂಬಂಧಿಸಿದ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದರು.

ಫಲಾನುಭವಿ ಖಾತೆಗೆ ನೇರ ಹಣ ಜಮೆ:

ಮಧ್ಯವರ್ತಿಗಳನ್ನು ನಂಬಬೇಡಿ, ಅನುದಾನವು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗಲಿದೆ. ಮೊದಲ ಕಂತು ಜಮೆಯಾದ ತಕ್ಷಣವೇ ಮನೆ ಕಾಮಗಾರಿ ಆರಂಭಿಸತಕ್ಕದ್ದು. ಭಾಲ್ಕಿ ತಾಲೂಕಿನ ಗ್ರಾಮಾಂತರ ವ್ಯಾಪ್ತಿಗೆ ಒಟ್ಟು 3 ಸಾವಿರ ಮನೆ ಮಂಜೂರಾಗಿದ್ದು, ಈ ಪೈಕಿ ಮೊದಲ ಹಂತದ 665 ಫಲಾನುಭವಿಗಳಿಗೆ ಇಂದು ತಿಳುವಳಿಕೆ ಪತ್ರ ನೀಡಲಾಗುತ್ತಿದೆ ಎಂದರು. ಅದೇ ರೀತಿ ಗ್ರಾಮೀಣ ಭಾಗದಲ್ಲಿ ಇನ್ನೂ ವಸತಿ ರಹಿತರ ಗುರುತಿಸುವಿಕೆ ಕಾರ್ಯ ನಡೆಯುತ್ತಿದ್ದು, ಅಂತವರಿಗೆ ಮುಂದಿನ ಸಮಯದಲ್ಲಿ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿವಾರು ಫಲಾನುಭವಿಗಳಿಗೆ ತಿಳುವಳಿಕೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.

----

ಫೋಟೊ: ಭಾಲ್ಕಿ ಸಂಸದರ ಕಚೇರಿ ಆವರಣದಲ್ಲಿ ಭಾಲ್ಕಿ ಗ್ರಾಮೀಣ 665 ಜನರಿಗೆ ತಿಳುವಳಿಕೆ ಪತ್ರ ವಿತರಿಸಲಾಯಿತು.

ಫೈಲ್‌ 6ಬಿಡಿ4

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುದ್ರಣ ಸಂಸ್ಥೆಗಳ ಕಡೆಗಣನೆ: ಸಿ.ಆರ್.ಜನಾರ್ದನ್‌ ಅಸಮಾಧಾನ
ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿಗೆ ಚಿದಂಬರ ಬೈಕಂಪಾಡಿ ಆಯ್ಕೆ