ಅಪಘಾತ ತಡೆಯಲು 1500 ಕೋಟಿ ವೆಚ್ಚ: ಪರಂ

KannadaprabhaNewsNetwork |  
Published : Sep 10, 2024, 01:31 AM IST
ಮಧುಗಿರಿ  ಕಾಟಗಾನಹಟ್ಟಿ ಸಮಿಪ ಎರೆಡು ಕಾರುಗಳ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ 6 ಜನ ಮೃತಪಟ್ಟ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಅಧಿಕಾರಿಗಳ ಜೊತೆ ಬೇಟಿ ನೀಡಿ ಪರಿಶೀಲಿಸಿದರು.  | Kannada Prabha

ಸಾರಾಂಶ

ಅಪಘಾತ ತಡೆಯಲು 1500 ಕೋಟಿ ವೆಚ್ಚ: ಪರಂ

ಕನ್ನಡಪ್ರಭ ವಾರ್ತೆ ಮಧುಗಿರಿ

ರಾಜ್ಯಾದ್ಯಂತ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ 1500 ಕೋಟಿ ವೆಚ್ಚದಲ್ಲಿ ಅಗತ್ಯ ಕ್ರಮಗಳನ್ನುಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದರು.

ಮಧುಗಿರಿ ಕಾಟಗಾನಹಟ್ಟಿ (ಕೆರೆಗಳಪಾಳ್ಯ) ಸಮೀಪ ಭಾನುವಾರ ಸಂಜೆ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ 6 ಜನ ಮೃತ ಪಟ್ಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಸ್ತೆ ಅಪಘಾತಗಳನ್ನು ತಡೆಗಟ್ಟಲು ನಮ್ಮ ಸರ್ಕಾರ ತೀರ್ಮಾನಿಸಿದ್ದು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಕೆಶಿಪ್‌ ರಸ್ತೆಗಳಲ್ಲಿ ಎಲ್ಲೆಲ್ಲಿ ಅಫಘಾತ ಜಾಗಗಳಿವೆ ಅಲ್ಲಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಮೈಸೂರಿನಿಂದ ಬೆಂಗಳೂರು ಹೊಸ ರಸ್ತೆ ಆದ ಮೇಲೆ 4 ತಿಂಗಳಲ್ಲಿ 100ಕ್ಕೂ ಅಧಿಕ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಚಾರ ತಿಳಿದ ನಂತರ ಅಪಘಾತಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಸ್ತೆ ನಿರ್ಮಿಸಿದವರಿಗೆ ಸೂಚಿಸಿದ್ದು ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಲು ಸೂಚಸಿದ್ದೇವೆ. ಈ ಕ್ರಮ ಕೈಗೊಂಡ ನಂತರ ಕಳೆದ ಆರು ತಿಂಗಳಿಂದ ಆಕ್ಸಿಡೆಂಟ್‌ ಕಡಿಮೆಯಾಗಿವೆ ಇದರಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಅದೇ ರೀತಿ ರಾಜ್ಯಾದ್ಯಂತ ಹೆಚ್ಚಿನ ಕ್ರಮ ಕೈಗೊಂಡು ಅಪಘಾತ ವಲಯಗಳನ್ನು ಗುರುತಿಸಿ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರದ ಮಟ್ಟದಲ್ಲಿ 1500 ಕೋಟಿ ರು.ವೆಚ್ಚದಲ್ಲಿ ಅನುಮೋದನೆಗೆ ಕಳುಹಿಸಲಾಗಿದೆ ಎಂದರು. ನಿನ್ನೆ ಆಗಿರುವ ಅಪಘಾತ ದುರಾದೃಷ್ಟಕರ ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಆ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು. ಎಡಿಜಿಪಿ ಅಲೋಕ್‌ ಕುಮಾರ್‌, ಕೇಂದ್ರ ವಲಯ ಐಜಿಪಿ ಲಾಬೂರಾಮ್‌, ತುಮಕೂರು ಎಸ್‌ಪಿ ಅಶೋಕ್‌ ವೆಂಕಟ್‌ , ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ, ಸಿಪಿಐ ಹನುಮಂತರಾಯಪ್ಪ, ಪಿಎಸೈ ವಿಜಯ್‌ ಕುಮಾರ್‌ ಸೇರಿದಂತೆ ಅಧಿಕಾರಿಗಳು ಇದ್ದರು.

ಪ್ರಸ್ತುತ ಗುಣ ಮಟ್ಟದ ರಸ್ತೆಗಳನ್ನು ಮಾಡುತ್ತಿದ್ದು, ಸ್ವಾಭಾವಿಕವಾಗಿ ಕಾರುಗಳ ಹೈ ಸ್ಪೀಡಾಗಿ ಚಲಿಸುತ್ತವೆ. ಮೈಸೂರು ರಸ್ತೆಯಲ್ಲಿ 80 ಕಿಮೀ ಕ್ರಾಸಾದ ತಕ್ಷಣವೇ ನೀವು ಕೊಟ್ಟಿರುವ ನಂಬರ್‌ಗೆ ಸಂದೇಶ ಬರುತ್ತದೆ. ಇದೇ ರೀತಿ ರಾಜ್ಯ ಹೆದ್ದಾರಿ, ರಾಷ್ಠ್ರೀಯ ಹೆದ್ದಾರಿಗಳಲ್ಲಿ ಕೂಡ ಹಂತ ಹಂತವಾಗಿ ಅಧ್ಯಯನ ಮಾಡುವುದಾಗಿ ತಿಳಿಸಿದರು. ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿನ ಶವಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು.

ಎಡಿಜಿಪಿ ಅಲೋಕ್‌ ಕುಮಾರ್‌, ಕೇಂದ್ರ ವಲಯ ಐಜಿಪಿ ಲಾಬೂರಾಮ್‌, ತುಮಕೂರು ಎಸ್‌ಪಿ ಅಶೋಕ್‌ ವೆಂಕಟ್‌ , ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ, ಸಿಪಿಐ ಹನುಮಂತರಾಯಪ್ಪ, ಪಿಎಸೈ ವಿಜಯ್‌ ಕುಮಾರ್‌ ಸೇರಿದಂತೆ ಅಧಿಕಾರಿಗಳು ಇದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ