ಮಲಪ್ರಭ ನದಿಯಲ್ಲಿ ಗಣೇಶ ವಿಸರ್ಜನೆ ಮಾಡಿ ಮರಳುವಾಗ ಟ್ಯ್ರಾಕ್ಟರ್ ಹಿಂದಿನ ಟ್ರ್ಯಾಲಿ ಕಳಚಿ ಬಿದ್ದ ಪರಿಣಾಮ ಟ್ರ್ಯಾಕ್ಟರ್ನಲ್ಲಿ ಇದ್ದ ಇಬ್ಬರಿಗೆ ತೀವ್ರ ಗಾಯಗಳಾದ ಘಟನೆ ರಾಯಚೂರು-ಬೆಳಗಾವಿ ಮುಖ್ಯರಸ್ತೆಯ ದೊಡ್ಡಣವರ್ ಮೈನ್ಸ್ ಬಳಿ ಭಾನುವಾರ ನಡೆದಿದೆ.
ಅಮೀನಗಡ: ಮಲಪ್ರಭ ನದಿಯಲ್ಲಿ ಗಣೇಶ ವಿಸರ್ಜನೆ ಮಾಡಿ ಮರಳುವಾಗ ಟ್ಯ್ರಾಕ್ಟರ್ ಹಿಂದಿನ ಟ್ರ್ಯಾಲಿ ಕಳಚಿ ಬಿದ್ದ ಪರಿಣಾಮ ಟ್ರ್ಯಾಕ್ಟರ್ನಲ್ಲಿ ಇದ್ದ ಇಬ್ಬರಿಗೆ ತೀವ್ರ ಗಾಯಗಳಾದ ಘಟನೆ ರಾಯಚೂರು-ಬೆಳಗಾವಿ ಮುಖ್ಯರಸ್ತೆಯ ದೊಡ್ಡಣವರ್ ಮೈನ್ಸ್ ಬಳಿ ಭಾನುವಾರ ನಡೆದಿದೆ.
ಪಟ್ಟಣದ ತೇರಿನಮನೆ ಬಳಿಯ ಗಣೇಶೋತ್ಸವ ಸಮಿತಿಯವರು ಭಾನುವಾರ ರಾತ್ರಿ ಕಮತಗಿ ಬಳಿಯ ಮಲಪ್ರಭಾ ನದಿಯಲ್ಲಿ ಗಣೇಶನನ್ನು ವಿಸರ್ಜಿಸಿ ಹಿಂದಿರುಗಿ ಅಮೀನಗಡಕ್ಕೆ ಬರುವಾಗ ರಾಯಚೂರು-ಬೆಳಗಾವಿ ಮುಖ್ಯರಸ್ತೆಯ ದೊಡ್ಡಣವರ್ ಮೈನ್ಸ್ ಬಳಿ, ಟ್ರ್ಯಾಕ್ಟರ್ ಹಿಂದಿನ ಟ್ರ್ಯಾಲಿಯ ಕೊಂಡಿ ಕಳಚಿಬಿದ್ದ ಪರಿಣಾಮ ಟ್ರ್ಯಾಕ್ಟರ್ ರಸ್ತೆಯ ಪಕ್ಕಕ್ಕೆ ಉರುಳಿಬಿದಿದೆ. ಈ ವೇಳೆ ಟ್ರ್ಯಾಕ್ಟರ್‌ನಲ್ಲಿದ್ದ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.