ಕನ್ನಡಪ್ರಭ ವಾರ್ತೆ ಹಲಗೂರು
ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಡೇರಿ ವಾರ್ಷಿಕ ಮಹಾ ಸಭೆಯನ್ನು ನಿವೃತ್ತ ಶಿಕ್ಷಕ ಭೈರವಯ್ಯ ಉದ್ಘಾಟಿಸಿ ಮಾತನಾಡಿ, ಡೇರಿಯಿಂದ ಸರಿಯಾಗಿ ಪ್ರೋತ್ಸಾಹಧನ ಬರುತ್ತಿಲ್ಲ. ಚುನಾವಣೆಯನ್ನು ಅದನ್ನು ಬೇಗ ನಡೆಸಬೇಕು. ಶಿಥಿಲಗೊಂಡಿರುವ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸುವಂತೆ ತಿಳಿಸಿದರು.
ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ರಾಮಕೃಷ್ಣ ಮಾತನಾಡಿ, 5 ರು. ಪ್ರೋತ್ಸಾಹ ಧನ ಬಂದಿಲ್ಲ. ಡೇರಿ ಚುನಾವಣೆ ನಡೆಸಿಲ್ಲ ಎಂದಾಗ ಹಾಲು ಉತ್ಪಾದಕರಿಗೆ ಮುಂದಿನ ದಿನಗಳಲ್ಲಿ ಚುನಾವಣೆ ಹೇಗೆ ನಡೆಯಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.ಈ ವೇಳೆ ಗ್ರಾಪಂ ಸದಸ್ಯರಾದ ನಾರಾಯಣಗೌಡ, ಶಿವಲಿಂಗೇಗೌಡ, ಭೈರವಯ್ಯ, ಡೇರಿ ಗೊಲ್ಲರಹಳ್ಳಿ ಕಾರ್ಯದರ್ಶಿ ಶಿವಲಿಂಗೇಗೌಡ ,ಗೌಡಗೆರೆ ಮಂಜುನಾಥ, ಸೇರಿದಂತೆ ಪಶು ಕೃತಕ ಗರ್ಭಧಾರಣೆ ಕಾರ್ಯಕರ್ತೆ ಸುಮ, ಹಾಲು ಪರೀಕ್ಷಕ ಸಿ. ಚಂದ್ರಶೇಖರ, ಸಹಾಯಕ ಕೆ .ಎನ್. ಪ್ರಜ್ವಲ್ ಸೇರಿದಂತೆ ಇತರರು ಇದ್ದರು.
ರೈತ ಸಂಘದ ನೂತನ ಅಧ್ಯಕ್ಷರಾಗಿ ವಿ.ಸಿ.ಉಮೇಶ್ ಆಯ್ಕೆಮದ್ದೂರು: ತಾಲೂಕು ರೈತ ಸಂಘದ ನೂತನ ಅಧ್ಯಕ್ಷರಾಗಿ ವಿ.ಸಿ.ಉಮೇಶ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಉಮೇಶ್, ಗೌರವಾಧ್ಯಕ್ಷರಾಗಿ ಜಿ.ಕೆ.ರಾಮಕೃಷ್ಣ, ಕಾರ್ಯದರ್ಶಿಯಾಗಿ ಡಿ.ಕೆ .ಚಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ವಿನೋದ್ ಬಾಬು, ಖಜಾಂಚಿಯಾಗಿ ಅಣ್ಣೂರು ಬೋರೇಗೌಡ, ಉಪಾಧ್ಯಕ್ಷರಾಗಿ ರಾಮಲಿಂಗಯ್ಯ, ರೇವಣ್ಣ, ಬನ್ನಹಳ್ಳಿ ರಮೇಶ, ಆಬಲವಾಡಿ ಪುಟ್ಟಸ್ವಾಮಿ, ಸಹ ಕಾರ್ಯದರ್ಶಿಗಳಾಗಿ ಕೋಣಸಾಲೆ ಪ್ರಸನ್ನ, ಸಂಚಾಲಕರಾಗಿ ಕೆಂಪೇಗೌಡ, ಸಂಘಟನಾ ಕಾರ್ಯದರ್ಶಿಗಳಾಗಿ ರಾಮಲಿಂಗಯ್ಯ, ವೆಂಕಟಪ್ಪ, ಶ್ರೀನಿವಾಸ್, ಸಿದ್ದೇಗೌಡ, ಮಹಿಳಾ ಘಟಕದ ಅಧ್ಯಕ್ಷರಾಗಿ ಸಾವಿತ್ರಮ್ಮ, ಕಾರ್ಯದರ್ಶಿಯಾಗಿ ರಮ್ಯ ಆಯ್ಕೆಯಾದರು.