17 18ಕ್ಕೆ ಪವಾಡ ರಹಸ್ಯ ಬಯಲು ತರಬೇತಿ ಶಿಬಿರ

KannadaprabhaNewsNetwork |  
Published : Oct 11, 2026, 02:30 AM IST
10ದ್ವ,ಮ ಸಮ, | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೀದರ್ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹಾಗೂ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ಗುಲಬರ್ಗಾ ವಿಭಾಗ ಮಟ್ಟದ ಪವಾಡ ರಹಸ್ಯ ಬಯಲು ತರಬೇತಿ ಶಿಬಿರವನ್ನು ಇದೇ ಅ.17 ಮತ್ತು 18ರಂದು ಕುಷ್ಟಗಿ ತಾಲ್ಲೂಕಿನ ತಾವರೆಗೆರೆಯ ಬುದ್ಧವಿಹಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

- ವೈಜ್ಞಾನಿಕ, ವೈಚಾರಿಕ ಅರಿವು; ಜನಜಾಗೃತಿ ಕನ್ನಡಪ್ರಭ ವಾರ್ತೆ ಬೀದರ್ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹಾಗೂ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ಗುಲಬರ್ಗಾ ವಿಭಾಗ ಮಟ್ಟದ ಪವಾಡ ರಹಸ್ಯ ಬಯಲು ತರಬೇತಿ ಶಿಬಿರವನ್ನು ಇದೇ ಅ.17 ಮತ್ತು 18ರಂದು ಕುಷ್ಟಗಿ ತಾಲ್ಲೂಕಿನ ತಾವರೆಗೆರೆಯ ಬುದ್ಧವಿಹಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ಕುವೆಂಪು ಮತ್ತು ಡಾ.ಹೆಚ್.ನರಸಿಂಹಯ್ಯನವರ ಆಲೋಚನೆಯಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ನಾಗಮೋಹನದಾಸ ಮತ್ತು ಇಸ್ರೋ ದ ಮಾಜಿ ಅಧ್ಯಕ್ಷ ಡಾ.ಎ.ಎನ್.ಕಿರಣಕುಮಾರ ಇವರ ಮಾರ್ಗದರ್ಶನದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ಪವಾಡ ಬಯಲು ಖ್ಯಾತಿಯ ಡಾ.ಹುಲಿಕಲ್ ನಟರಾಜು ಅವರು ಸ್ವತಃ 2 ದಿನ ಶಿಬಿರದಲ್ಲಿ ಇದ್ದು ಸುಮಾರು 50 ಪವಾಡುಗಳನ್ನು ಬಯಲು ಮಾಡಿ ಜನತೆಗೆ ಮೋಸ ಹೋಗದಂತೆ ಜನಜಾಗೃತಿ ಮೂಡಿಸಲಿದ್ದಾರೆ.

ಗುಲಬರ್ಗಾ ವಿಭಾಗದ 8 ಶೈಕ್ಷಣಿಕ ಜಿಲ್ಲೆಗಳ ಸುಮಾರು 120 ಯುವಕ-ಯುವತಿಯರು, ಶಿಕ್ಷಕ-ಶಿಕ್ಷಕಿಯರು ಮತ್ತು ಈ ಶಿಬಿರದಲ್ಲಿ ಭಾಗವಹಿಸಿ ವೈಜ್ಞಾನಿಕ ಮತ್ತು ವೈಚಾರಿಕತೆಯನ್ನು ಬೆಳೆಸಿಕೊಳ್ಳಲಿದ್ದಾರೆ

ಜೊತೆಗೆ ರಾಜ್ಯ ಸಮಿತಿ ಪದಾಧಿಕಾರಿಗಳು, ನಿರ್ದೇಶಕರು, ಜಿಲ್ಲಾ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ಶಿಬಿರದ ಸಂಚಾಲಕ ಜಿಲ್ಲಾಧ್ಯಕ್ಷರಾದ ಲಿಂಗಾರೆಡ್ಡಿ ಮತ್ತು ಗುಲಬರ್ಗಾ ವಿಭಾಗದ ಸಮನ್ವಯ ಜಿಲ್ಲಾಧ್ಯಕ್ಷರಾದ ಮಹಮ್ಮದ್ ರಫೀ ತಾಳಿಕೋಟೆ ಮತ್ತು ಪರಿಷತ್ತಿನ ಗೌರವಾಧ್ಯಕ್ಷ ದಾನಿ ಬಾಬುರಾವ್‌, ರಾಜ್ಯ ನಿರ್ದೇಶಕ ರಾದ ಕಲಾಲ ದೇವಿಪ್ರಸಾದ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ವೈಜ್ಞಾನಿಕ ಧಾರ್ಮಿಕ ಆಚರಣೆಗೆ ವಿರೋಧಿಸದೆ ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಈ ಕುರಿತು ಆಸಕ್ತಿ ಇರುವ ಗುಲಬರ್ಗಾ ವಿಭಾಗದ 8 ಜಿಲ್ಲೆಗಳ 20 ರಿಂದ 40 ವರ್ಷದ ಯುವಕ-ಯುವತಿಯರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ಶಿಬಿರಾರ್ಥಿಗಳಿಗೆ ಊಟ, ವಸತಿ ಹಾಗೂ ಪ್ರಯಾಣ ವೆಚ್ಚ ಕೂಡ ನೀಡ ಲಾಗುವುದು. ಆಸಕ್ತರು ತಕ್ಷಣ ಶಿಬಿರದ ಸಂಯೋಜಕರಾದ ಮಹಮ್ಮದ್ ರಫೀ ತಾಳಿಕೋಟೆ ಮತ್ತು ಪರಿಷತ್ತಿನ ಗೌರವಾಧ್ಯಕ್ಷ ದಾನಿ ಬಾಬುರಾವ, ರಾಜ್ಯ ನಿರ್ದೇಶಕರಾದ ಕಲಾಲ್ ದೇವಿಪ್ರಸಾದ ಇವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 9448568360/9342940525/9845605148 ಇವರನ್ನು ಸಂಪರ್ಕಿಸಬಹದಾಗಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಫ್ರೀಡಂ ಪಾರ್ಕ್‌, ವಿಧಾನಸೌಧ ಬಳಿ ರೈತರ ಪ್ರತಿಭಟನೆ
ಮಂತ್ರಾಲಯ ಮಠಕ್ಕೆ ತಲೆನೋವಾದ ಆನ್ಲೈನ್ ವಂಚಕರು