17 ವರ್ಷದ ಬಾಲಕಿಯೊಬ್ಬಳಿಗೆ ಹೊಟ್ಟೆನೋವು ಕಾಣಿಸಿಕೊಂಡು, ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ತೆರಳುವಾಗ ಆ್ಯಂಬುಲೆನ್ಸ್‌ನಲ್ಲಿಯೇ ಹೆರಿಗೆಯಾಗಿರುವ ಘಟನೆಯು ತಾಲೂಕಿನ ದೇಶಿಪುರ ಗ್ರಾಮದಲ್ಲಿ ನಡೆದಿದೆ.
- ಆ್ಯಂಬುಲೆನ್ಸ್‌ನಲ್ಲಿ ತೆರಳುವಾಗಲೇ ಬಾಲಕಿಗೆ ಹೆರಿಗೆ
- ಸಂತ್ರಸ್ಥೆಯ ತಂದೆಯ ದೂರಿನ ಮೇರೆಗೆ ಪ್ರಕರಣ
---
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
17 ವರ್ಷದ ಬಾಲಕಿಯೊಬ್ಬಳಿಗೆ ಹೊಟ್ಟೆನೋವು ಕಾಣಿಸಿಕೊಂಡು, ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ತೆರಳುವಾಗ ಆ್ಯಂಬುಲೆನ್ಸ್‌ನಲ್ಲಿಯೇ ಹೆರಿಗೆಯಾಗಿರುವ ಘಟನೆಯು ತಾಲೂಕಿನ ದೇಶಿಪುರ ಗ್ರಾಮದಲ್ಲಿ ನಡೆದಿದೆ.
ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇರೆಗೆ ಅಪ್ರಾಪ್ತೆಯ ಸಂಬಂಧಿಯೂ ಆಗಿರುವ ದೇಶಿಪುರ ಗ್ರಾಮದ ಸುರೇಶ್ (46) ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಏನಿದು ಘಟನೆ:
ದೇಶಿಪುರ ಗ್ರಾಮದ 17 ವರ್ಷದ ಬಾಲಕಿಗೆ 3 ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಗುಂಡ್ಲುಪೇಟೆ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದ್ದಾರೆ. ಬಳಿಕ ಅಲ್ಲಿಂದ ಚಾಮರಾಜನಗರದ ಸಿಮ್ಸ್‌ಗೆ ತೆರಳಲು ವೈದ್ಯರು ಸೂಚಿಸಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್‌ನಲ್ಲಿ ತೆರಳುವಾಗ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಾಳೆ.
ಇದೇ ವೇಳೆ ಗರ್ಭಿಣಿಯಾಗಲು ಸಂಬಂಧಿಕ ಸುರೇಶ್ ಕಾರಣ ಎಂದು ಅಪ್ರಾಪ್ತೆಯು ತನ್ನ ತಂದೆ ಬಳಿ ನಿವೇದಿಸಿಕೊಂಡಿದ್ದಾಳೆ.
ಬಳಿಕ ಅಪ್ರಾಪ್ತೆಯ ತಂದೆ ಬೇಗೂರು ಠಾಣೆಯಲ್ಲಿ ಪ್ರಕರಣ ದೂರು ನೀಡಿದ್ದು, ಸುರೇಶ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಹಸಗೂಲಿ ಗ್ರಾದ ವೃದ್ಧನೋರ್ವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೋ ಅಡಿ ಆರೋಪಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.