ಮೈಸೂರು ಕೊಡಗು ಲೋಕಸಭಾ ಚುನಾವಣೆ: ಅಂತಿಮ ಕಣದಲ್ಲಿ 18 ಅಭ್ಯರ್ಥಿಗಳು

KannadaprabhaNewsNetwork |  
Published : Apr 09, 2024, 12:53 AM ISTUpdated : Apr 09, 2024, 08:37 AM IST
ಲೋಕಸಭಾ | Kannada Prabha

ಸಾರಾಂಶ

ಸೋಮವಾರ ಆರು ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದಾರೆ. ಅಂತಿಮವಾಗಿ ಕಣದಲ್ಲಿ 18 ಅಭ್ಯರ್ಥಿಗಳು ಉಳಿದಿದ್ದಾರೆ.

 ಮಡಿಕೇರಿ :  ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದ ಸೋಮವಾರ ಆರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ 18 ಅಭ್ಯರ್ಥಿಗಳು ಉಳಿದಿದ್ದಾರೆ.

ಸೋಮವಾರ ಪಕ್ಷೇತರ ಅಭ್ಯರ್ಥಿಗಳಾದ ಆರ್. ಮಹೇಶ್, ಎಸ್.ದೊರೆಸ್ವಾಮಿ ನಾಯಕ, ರಾಜಣ್ಣ, ಶಿವನಂಜಯ್ಯ, ಶ್ರೀನಿವಾಸ್ ಬೋಗಾದಿ ಹಾಗೂ ಸಣ್ಣ ನಾಯಕ ಇವರು ನಾಮಪತ್ರ ವಾಪಸ್ ಪಡೆದಿದ್ದಾರೆ.

ಅಂತಿಮ ಕಣದಲ್ಲಿ 18 ಅಭ್ಯರ್ಥಿಗಳು: ಸುನಿಲ್ ಟಿ. ಆರ್. (ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ), ಎಂ.ಎಸ್ ಪ್ರವೀಣ್ (ಕರ್ನಾಟಕ ರಾಷ್ಟ್ರ ಸಮಿತಿ), ಎ.ಎಸ್ ಸತೀಶ್ (ಅಖಿಲ ಭಾರತ ಹಿಂದೂ ಮಹಾ ಸಭಾ ), ಪಿ.ಎಸ್. ಯಡಿಯೂರಪ್ಪ (ಪಕ್ಷೇತರ ), ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಭಾರತೀಯ ಜನತಾ ಪಕ್ಷ), ಎಚ್.ಕೆ ಕೃಷ್ಣ (ಕರುನಾಡು ಪಾರ್ಟಿ ), ಲೀಲಾವತಿ ಜೆ ಎಸ್ (ಉತ್ತಮ ಪ್ರಜಾಕೀಯ ಪಕ್ಷ), ರಂಗಸ್ವಾಮಿ ಎಂ. (ಪಕ್ಷೇತರ ), ರಾಮ ಮೂರ್ತಿ ಎಂ (ಪಕ್ಷೇತರ ), ಹರೀಶ್ ಎನ್ (ಸೋಶಿಯಲಿಸ್ಟ್ ಪಾರ್ಟಿ ), ಎಂ ಲಕ್ಷ್ಮಣ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ), ಕ್ರಿಸ್ಟೋಫರ್ ರಾಜಕುಮಾರ್ (ಇಂಡಿಯನ್ ಮೂವ್ಮೆಂಟ್ ಪಾರ್ಟಿ ), ಪಿ ಕೆ ದರ್ಶನ್ ಶೌರಿ (ಪಕ್ಷೇತರ ), ರಾಜು (ಪಕ್ಷೇತರ), ಎಚ್ .ಎಂ ನಂಜುಂಡಸ್ವಾಮಿ (ಸಮಾಜವಾದಿ ಜನತಾ ಪಾರ್ಟಿ -ಕರ್ನಾಟಕ ), ಎನ್.ಅಂಬರೀಷ್ (ಕರ್ನಾಟಕ ಜನತಾ ಪಕ್ಷ ), ಎ.ಜಿ ರಾಮಚಂದ್ರ ರಾವ್ (ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್ ), ಅಂಬೇಡ್ಕರ್ ಸಿ ಜೆ (ಪಕ್ಷೇತರ ) ಅಂತಿಮ ಕಣದ ಅಭ್ಯರ್ಥಿಗಳಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿವ್‌-ಇನ್‌ ಸಂಬಂಧಕ್ಕೆ ಜನಿಸಿದ ಮಗುವಿಗೆ ತಾಯಿ ಸರ್‌ನೇಮ್‌!
ಪಿಎಂ ಹೇಳ್ತಿರೋ ಆರೆಂಜ್‌ ಆರ್ಥಿಕತೆ ರಾಜ್ಯದಲ್ಲಿ 2016ಲ್ಲೇ ನೀತಿ ಜಾರಿ: ಡಿಕೆ