ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಪಟ್ಟಣದ ಕೃಷಿಇಲಾಖೆ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರೈತರು ಕೃಷಿಯಿಂದಾಗಿ ಆಗುವಂತಹ ನಷ್ಟವನ್ನು ಬೆಳೆವಿಮೆ ಮಾಡಿಸುವ ಮೂಲಕ ಪಡೆಯಬಹುದು ಆದ್ದರಿಂದ ಎಲ್ಲಾ ರೈತರು ಬೆಳೆವಿಮೆ ಮಾಡಿಸಿ ಎಂದ ರೈತರ ಬೆಳೆವಿಮೆ ಕಂತನ್ನು ಸರ್ಕಾರವೇ ಪಾವತಿಸಿದರೆ ರೈತರಿಗೆ ಅನುಕೂಲವಾಗುವುರೊಂದಿಗೆ ಬೆಳೆಯ ನಷ್ಟದಿಂದ ಸರ್ಕಾರದ ಮೇಲೆ ಆಗುವಂತಹ ಹೊರೆಯನ್ನು ಕಡಿಮೆ ಮಾಡಬಹುದು ಈ ಬಗ್ಗೆ ವಿಧಾನಸೌಧದಲ್ಲೂ ಚರ್ಚೆ ಮಾಡಿರುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಯಾವ ಮಣ್ಣು ಯಾವ ಬೆಳೆಗೆ ಸೂಕ್ತ ಎಂಬುದನ್ನು ಪರೀಕ್ಷಿಸಿ ಅದಕ್ಕೆ ತಕ್ಕಂತೆ ಸಾವಯವ ಕೃಷಿಯನ್ನು ಮಾಡುವಂತೆ ರೈತರಿಗೆ ತಿಳಿಸಿ ಹಾಗೂ ಸಾಧ್ಯವಾದಷ್ಟು ಬಿದ್ದಂತಹ ಮಳೆಯ ನೀರು ಹರಿಯುವುದನ್ನು ನಿಲ್ಲಿಸಿ, ನಿಂತ ನೀರನ್ನು ಹಿಂಗಿಸುವಂತಹ ಕೃಷಿ ಹೊಂಡಗಳನ್ನು, ಗೋಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿ ಎಂದರು. ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದೊಂದಿಗೆ ಚರ್ಚೆಮಾಡುವುದಾಗಿ ಮತ್ತು ಶೆಟ್ಟಿಕೆರೆಯಲ್ಲಿ ರೈತ ಸಂಪರ್ಕ ಕೇಂದ್ರವನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ಎಸ್ ಮಾಹಿತಿ ನೀಡಿ ತಾಲೂಕಿನ ಇಲಾಖೆಯಲ್ಲಿ ೩೫ ಹುದ್ದೆಗಳು ಮಂಜೂರಾತಿ ಇದ್ದು ಇದರಲ್ಲಿ ೯ ಹುದ್ದೆಗಳು ಭರ್ತಿಯಾಗಿವೆ ಇನ್ನು ೨೬ ಹುದ್ದೆಗಳು ಖಾಲಿ ಇದ್ದು ಅವುಗಳ ಭರ್ತಿಗೆ ಕ್ರಮಕೈಗೊಳ್ಳುವಂತೆ ಮಾಹಿತಿ ನೀಡಿದರು.ಸಭೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ್‌ಕುಮಾರ್ ಗೊಬ್ಬರಗಳ ಲಭ್ಯತೆ ಸೇರಿದಂತೆ ವಿವಿಧ ಮಾಹಿತಿ ನೀಡಿದರು. ಸಭೆಯಲ್ಲಿ ಮಲ್ಲಿಕಾರ್ಜುನ್ ಎಂ, ಕರಿಬಸವಯ್ಯ ರಾಧಾ, ಎಸ್, ರಂಗನಾಥ್, ಉಮೇಶ್, ಮಧುರಾ ಸೇರಿದಂತೆ ಇತರರು ಇದ್ದರು.