ಸತ್ತವರ ಖಾತೆಗೆ ₹2.75 ಕೋಟಿ ಗೃಹಲಕ್ಷ್ಮಿ ಹಣ

KannadaprabhaNewsNetwork |  
Published : Aug 09, 2026, 02:15 AM IST
ಸಸಸಸ | Kannada Prabha

ಸಾರಾಂಶ

ರಾಜ್ಯ ಸರ್ಕಾರ ಪ್ರಾರಂಭಿಸಿರುವ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮುಖ್ಯಸ್ಥಳಿಗೆ ಪ್ರತಿ ತಿಂಗಳು ಎರಡು ಸಾವಿರ ನೀಡಲಾಗುತ್ತದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಮರಣ ಹೊಂದಿದ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಕೊಪ್ಪಳ ಜಿಲ್ಲೆಯಲ್ಲಿಯೇ ಬರೋಬ್ಬರಿ ₹27418000 ಜಮೆಯಾಗಿದೆ.

ಇತ್ತೀಚಿಗೆ ಸರ್ಕಾರ ಗೃಹಲಕ್ಷ್ಮಿ ಖಾತೆಯನ್ನು ಪರಾಮರ್ಶೆಗೆ ಒಳಪಡಿಸಿದಾಗ ಇದು ಬೆಳಕಿಗೆ ಬಂದಿದೆ. ಸತ್ತವರ ಖಾತೆಗೆ ಜಮೆಯಾಗಿರುವ ಗೃಹ ಲಕ್ಷ್ಮಿ ಹಣ ಅನೇಕರು ಡ್ರಾ ಮಾಡಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.

ರಾಜ್ಯ ಸರ್ಕಾರ ಪ್ರಾರಂಭಿಸಿರುವ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮುಖ್ಯಸ್ಥಳಿಗೆ ಪ್ರತಿ ತಿಂಗಳು ಎರಡು ಸಾವಿರ ನೀಡಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಮರಣ ಹೊಂದಿದವರ ಖಾತೆಗೂ ಇದುವರೆಗೂ ಬರೋಬ್ಬರಿ ₹27418000 ಜಮೆಯಾಗಿದೆ.

ಜಿಲ್ಲೆಯಲ್ಲಿ ಯೋಜನೆ ಪ್ರಾರಂಭವಾದ ಮೇಲೆ ಇದುವರೆಗೂ 7086 ಫಲಾನುಭವಿಗಳು ಮರಣ ಹೊಂದಿದ್ದಾರೆ. ಈ ಪೈಕಿ ಮರಣ ಹೊಂದಿದ ನಂತರವೂ 2664 ಫಲಾನುಭವಿಗಳ ಹಣ ಡ್ರಾ ಮಾಡಿಕೊಂಡಿದ್ದಾರೆ. ಇನ್ನು ಮರಣ ಹೊಂದಿದ ನಂತರ 13709 ಕಂತಿನ ಹಣ ಜಮೆಯಾಗಿದೆ.

ಜಿಲ್ಲೆಯಲ್ಲಿ ಮರಣ ಹೊಂದಿದ ನಂತರವೂ ಬ್ಯಾಂಕ್ ಖಾತೆ ಮತ್ತು ಪೋಸ್ಟಲ್ ಖಾತೆಗೂ ಹಣ ಜಮೆಯಾಗಿದ್ದು, ಈ ಪೈಕಿ ಈಗಾಗಲೇ ₹86 ಲಕ್ಷ ಮರಳಿ ಸರ್ಕಾರದ ಖಾತೆಗೆ ಜಮೆ ಮಾಡಿಕೊಳ್ಳಲಾಗಿದೆ. ಉಳಿದ ಹಣ ಮರಳಿ ಪಡೆಯುವ ಕಾರ್ಯ ನಡೆಯುತ್ತಿದೆ.

ಡ್ರಾ ಮಾಡಿದ ಹಣ:ಮರಣ ಹೊಂದಿದ ನಂತರವೂ ಹಣ ಜಮೆಯಾಗಿದ್ದರೂ ಅದನ್ನು ಬ್ಯಾಂಕ್ ಮತ್ತು ಪೋಸ್ಟಲ್ ಖಾತೆಯಿಂದ ಡ್ರಾ ಮಾಡಿಕೊಳ್ಳಲಾಗಿದೆ. ಫಲಾನುಭವಿಗಳ ಖಾತೆಯ ನಿರ್ವಹಣೆ ಅವರ ಕುಟುಂಬಸ್ಥರು ಮಾಡುವಾಗ ಸತ್ತಿರುವ ಮಾಹಿತಿ ನೀಡದೆ ಹಣ ಪಡೆಯಲಾಗಿದೆ. ಈಗ ಇದನ್ನು ವಸೂಲಿ ಮಾಡುವುದೇ ದೊಡ್ಡ ಸವಾಲಾಗಿದೆ.

ಸರ್ಕಾರದಿಂದ ಪಡೆಯುವ ನಿವೃತ್ತಿ ವೇತನ ಸೇರಿದಂತೆ ವಿವಿಧ ಮಾಸಾಶನ ಪಡೆಯುವವರು ಪ್ರತಿ ವರ್ಷ ತಮ್ಮ ಇರುವಿಕೆ ದೃಢಪಡಿಸಬೇಕು. ಹೀಗೆ ದೃಢಪಡಿಸದ ಹೊರತು ಅವರಿಗೆ ಸರ್ಕಾರದಿಂದ ನೀಡುವ ಹಣ ಬ್ಯಾಂಕಿನಿಂದಲೇ ಜಮೆ ಮಾಡಲಾಗುತ್ತಿರಲಿಲ್ಲ. ಆದರೆ, ಗ್ಯಾರಂಟಿ ಯೋಜನೆಯಲ್ಲಿ ಈ ರೀತಿಯ ಕಟ್ಟಳೆ ಇಲ್ಲ. ಹೀಗಾಗಿ ಈ ಫಲಾನುಭವಿಗಳ ಖಾತೆ ಅವರ ಮನೆಯವರು ನಿರ್ವಹಣೆ ಮಾಡುತ್ತಿದ್ದಾರೆ. ಇವರು ಮರಣದ ನಂತರ ಮಾಹಿತಿ ನೀಡದೇ ಹಣ ವಿಥ್‌ಡ್ರಾ ಮಾಡಿದ್ದಾರೆ. ಈಗ ಪತ್ತೆ ಮಾಡುವ ಕಾರ್ಯ ಪ್ರಾರಂಭವಾದ ಮೇಲೆ ಸತ್ತ ಮೇಲೆಯೂ ಕೋಟಿ ಕೋಟಿ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ.

ಮರಣ ಹೊಂದಿದ ನಂತರವೂ ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಮಿ ಹಣ ಜಮೆಯಾಗಿದ್ದು ಮತ್ತು ಕೆಲವರು ಡ್ರಾ ಮಾಡಿಕೊಂಡಿರುವುದು ಪತ್ತೆಯಾಗಿದ್ದು, ಅದನ್ನು ವಸೂಲಿ ಮಾಡುವ ಕಾರ್ಯ ಪ್ರಾರಂಭವಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ತಿಳಿಸಿದ್ದಾರೆ.

ಸತ್ತಿರುವ ಮಾಹಿತಿ ನೀಡಿದ್ದರೂ ಸಹ ಅವರು ಪರಿಗಣಿಸಿಲ್ಲ. ನಾವೇನು ಮಾಡಬೇಕು. ಅವರ ಖಾತೆಗ ಜಮೆಯಾಗಿದ್ದನ್ನು ನಾವು ಬಳಕೆ ಮಾಡಿಲ್ಲ ಎಂದು ಹೆಸರು ಹೇಳದ ಫಲಾನುಭವಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ವಸ್ತು ಸಂಗ್ರಹಾಲಯ ಈ ನೆಲದ ಜೀವನ ಮೀಮಾಂಸೆ ಹೇಳುವ ಪಠ್ಯ
ಹಡಪದ ಅಪ್ಪಣ್ಣನವರು ಬಸವಣ್ಣನವರ ಬಲಗೈ ಬಂಟರಾಗಿದ್ದರು-ಸ್ವಾಮೀಜಿ