ಕನ್ನಡಪ್ರಭ ವಾರ್ತೆ ಸವದತ್ತಿ
ನನ್ನ ಚುನಾವಣೆಯಲ್ಲಿ ಶೇ.೭೦ರಷ್ಟು ಜನ ಹಾಲುಮತ ಸಮಾಜದವರು ನನಗೆ ಆಶೀರ್ವಾದ ಮಾಡಿದ್ದು, ಆ ಜನಾಂಗದವರ ಬೇಡಿಕೆಯಂತೆ ಕನಕದಾಸ ಭವನ ನಿರ್ಮಿಸಲು ೨ ಎಕರೆ ಜಾಗ ಮತ್ತು ₹೫ ಕೋಟಿಗಳ ಅನುದಾನ ನೀಡುವೆ ಎಂದು ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದರು.ಪಟ್ಟಣದ ಗುರುಭವನದಲ್ಲಿ ಶನಿವಾರ ನಡೆದ ತಾಲೂಕು ಆಡಳಿತ, ತಾಪಂ, ಪುರಸಭೆ ಸಂಯುಕ್ತಾಶ್ರಯದಲ್ಲಿ ಸಂತ ಶ್ರೇಷ್ಠಕವಿ ಭಕ್ತ ಕನಕದಾಸರ ೫೩೮ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಾಸ ಪರಂಪರೆಯನ್ನು ಪರಿಪಾಲನೆ ಮಾಡುವುದರೊಂದಿಗೆ ಸಾಮಾಜಿಕ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಭಕ್ತ ಕನಕದಾಸರು ಸಮಾಜಕ್ಕೆ ನೀಡಿರುವಂತ ಕೊಡುಗೆಗಳು ಅಪಾರವಾಗಿದ್ದು, ಅವರ ತತ್ವಾದರ್ಶಗಳನ್ನು ನಾವು ಮೈಗೂಡಿಸಿಕೊಂಡು ನಡೆಯಬೇಕು. ಕನಕದಾಸರು ಸರ್ವ ಜನಾಂಗಕ್ಕೆ ಬೇಕಾದಂತ ಮಹಾನ್ ಶ್ರೇಷ್ಠ ಕವಿಯಾಗಿದ್ದು, ಅವರ ಜಯಂತಿ ಉತ್ಸವದಲ್ಲಿ ಪ್ರತಿಯೊಂದು ಸಮಾಜದವರು ಪಾಲ್ಗೊಳ್ಳುವುದು ನಮ್ಮ ಕರ್ತವ್ಯ ಎಂದರು. ಅರುಂದತಿ ಬದಾಮಿ ಮಾತನಾಡಿ, ಭಕ್ತ ಕನಕದಾಸರು ವಿಶ್ವ ಮಾನವ ಸಂತರಾಗಿ ಹೋಗಿದ್ದು, ಕನ್ನಡ ಸಾಹಿತ್ಯಕ್ಕೆ ಕನದಾಸರ ಕೊಡುಗೆ ಅಪಾರವಾಗಿದೆ ಎಂದರು. ಮಹಾತ್ಮರ ತತ್ವಾದರ್ಶಗಳನ್ನು ನಾವು ನಿಷ್ಠೆಯಿಂದ ಪರಿಪಾಲನೆ ಮಾಡಬೇಕಿದೆ ಎಂದರು.ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಡಿ.ಡಿ.ಟೋಪೋಜಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಉಪಾಧ್ಯಕ್ಷೆ ಕೌಶಲ್ಯ ಮೋಟೆಕರ, ಟಿಎಪಿಸಿಎಂಎಸ್ ಅಧ್ಯಕ್ಷ ರವೀಂದ್ರ ಯಲಿಗಾರ, ಅರ್ಜುನ ಅಮ್ಮೋಜಿ, ದ್ಯಾಮನ್ನವ ಸುತಗಟ್ಟಿ ಫಕ್ಕೀರಪ್ಪ ಹದ್ದನ್ನವರ, ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಜಿ.ಜಿ.ಕಣವಿ, ಎಫ್.ವೈ.ಗಾಜಿ, ತಾಪಂ ಇಒ ಆನಂದ ಬಡಕುಂದ್ರಿ, ಗ್ರೇಡ್-೨ ತಹಸೀಲ್ದಾರ್ ಎಂ.ಎನ್.ಮಠದ, ಬಿಇಒ ಎ.ಎ.ಖಾಜಿ, ಕಲ್ಲಪ್ಪ ಪೂಜಾರ, ಸಿಪಿಐ ಧರ್ಮಾಕರ ಧರ್ಮಟ್ಟಿ, ಕಿರಣ ಕುರಿ, ಮಂಜುನಾಥ ಪಾಚಂಗಿ, ಸೋಮು ಮಲ್ಲೂರ ಇತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣಾಧಿಕಾರಿ ಆರ್.ಆರ್.ಕುಲಕರ್ಣಿ ಸ್ವಾಗತಿಸಿದರು.ನಿರಂತರವಾಗಿ ೯ ದಿನಗಳ ಕಾಲ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆಗೆ ನಮ್ಮ ಸರ್ಕಾರ ಸಂಪೂರ್ಣ ಸ್ಪಂದನೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯವರು ರೈತ ಬೆಳೆದ ಕಬ್ಬಿಗೆ ₹೩೩೦೦ ದರ ನಿಗದಿ ಮಾಡಿ ರೈತರ ಆರ್ಥಿಕತೆಗೆ ಸಹಕಾರ ನೀಡಿದ್ದಾರೆ.
-ವಿಶ್ವಾಸ ವೈದ್ಯ, ಶಾಸಕರು.