ರಟ್ಟೀಹಳ್ಳಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ 2 ಕೋಟಿ ಹಣವನ್ನು ಸರಕಾರದಿಂದ ಅನುಮೋದನೆ ಗೊಳಿಸಿದ ಶಾಸಕ ಯು.ಬಿ. ಬಣಕಾರ ಅವರನ್ನು ರಟ್ಟೀಹಳ್ಳಿ ಕ್ರೀಡಾ ಅಭಿಮಾನಿಗಳು ಹಾಗೂ ವಿವಿಧ ಸ್ಪೋಟ್ಸ ಕ್ಲಬ್ ವತಿಯಿಂದ ಶಾಸಕರನ್ನು ಅವರ ಗೃಹ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ರಟ್ಟೀಹಳ್ಳಿ:ರಟ್ಟೀಹಳ್ಳಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ 2 ಕೋಟಿ ಹಣವನ್ನು ಸರಕಾರದಿಂದ ಅನುಮೋದನೆ ಗೊಳಿಸಿದ ಶಾಸಕ ಯು.ಬಿ. ಬಣಕಾರ ಅವರನ್ನು ರಟ್ಟೀಹಳ್ಳಿ ಕ್ರೀಡಾ ಅಭಿಮಾನಿಗಳು ಹಾಗೂ ವಿವಿಧ ಸ್ಪೋಟ್ಸ ಕ್ಲಬ್ ವತಿಯಿಂದ ಶಾಸಕರನ್ನು ಅವರ ಗೃಹ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಹೊಯ್ಸಳ ಸ್ಪೋಟ್ಸ ಕ್ಲಬ್‌ನ ರಾಜು ವೇರ್ಣೇಕರ್ ದಸರಾ ಕ್ರೀಡಾಕೂಟ ನಡೆಯುವ ಸಂದರ್ಭದಲ್ಲಿ ಶಾಸಕ ಯು.ಬಿ. ಬಣಕಾರ ಅವರಿಗೆ ರಟ್ಟೀಹಳ್ಳಿ ತಾಲೂಕು ಕೇಂದ್ರವಾಗಿ ಹಲವು ವರ್ಷಗಳಾದರೂ ವ್ಯವಸ್ಥಿತ ಕ್ರೀಡಾಂಗಣ ಇಲ್ಲದಿರುವುದರಿಂದ ಕ್ರೀಡಾ ಪಟುಗಳಿಗೆ ಸಾಕಷ್ಟು ಅನಾನುಕೂಲವಾಗುತ್ತಿದ್ದು, ಪಟ್ಟಣದಲ್ಲಿನ ಸಾವಿರಾರು ಕ್ರೀಡಾಪಟುಗಳಿಗೆ ಕ್ರೀಡಾ ಪ್ರೋತ್ಸಾಹವಿಲ್ಲದೆ ಕ್ರೀಡಾ ಚಟುವಟಿಕೆಗಳು ಸೊರುಗುತ್ತಿವೆ. ಆದ್ದರಿಂದ ಆದಷ್ಟು ಬೇಗ ಕ್ರೀಡಾಂಗಣಕ್ಕೆ ಮನವಿ ಸಲ್ಲಿಸಿದ್ದರಿಂದ ಮನವಿಗೆ ಸ್ಪಂದಿಸಿ ಶಾಸಕ ಯು.ಬಿ. ಬಣಕಾರ ಅವರು ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಸರಕಾರಕ್ಕೆ ಒತ್ತಡ ತಂದು 2 ಕೋಟಿ ಹಣಕ್ಕೆ ಅನುಮೋದನೆ ಗೊಳಿಸಿರುವುದು ಪಟ್ಟಣದ ಜನತೆಗೆ ಅತ್ಯಂತ ಸಂತಸವಾಗಿದೆ. ಆದ್ದರಿಂದ ಶಾಸಕರಿಗೆ ಇಂದು ಸಾಂಕೇತಿಕವಾಗಿ ಅವರನ್ನು ಸನ್ಮಾನಿಸುತ್ತಿದ್ದು ಮುಂಬರುವ ದಿನಗಳಲ್ಲಿ ವಿಜೃಂಭಣೆ ಕಾರ್ಯಕ್ರಮ ಆಯೋಜಿಸಲಾಗುವುದು. ಅಲ್ಲದೇ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಕೇವಲ 2 ಕೋಟಿ ಹಣ ಸಾಕಾಗುವುದಿಲ್ಲ, ಮುಂಬರುವ ದಿಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸುವಲ್ಲಿ ಶಾಸಕರು ಮುತುವರ್ಜಿವಹಿಸಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಯು.ಬಿ. ಬಣಕಾರ ರಟ್ಟೀಹಳ್ಳಿ ಪಟ್ಟಣದ ಕಂದಾಯ ಇಲಾಖೆಯ 7 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 2 ಕೋಟಿ ಹಣ ಅನುಮೋದನೆ ದೊರೆತಿದ್ದು, ಪಟ್ಟಣದಲ್ಲಿ ನೂರಾರು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳು ಇದ್ದು, ಪಟ್ಟಣದಲ್ಲಿ ಮಾದರಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದರು. ಅದೇ ರೀತಿ ಇನ್ನೂ ಹೆಚ್ಚಿನ ಅನುದಾನಕ್ಕೆ ಮನವಿ ಸಲ್ಲಿಸಿದ್ದು ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧ ಪಟ್ಟ ಸಚಿವರು, ಅಧಿಕಾರಿಗಳಿಗೆ ಒತ್ತಡ ಹಾಕಿ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ವಿಜಯ ಅಂಗಡಿ, ಚಂದ್ರಶೇಖರ ಜಾಡರ, ಸಿದ್ದಪ್ಪ ಜಾಧವ, ಮಾಲತೇಶ ಬೆಣ್ಣಿ, ಮಾರುತಿ ಸುಣಗಾರ, ರವಿ ಹದಡೇರ, ಸುನೀಲ್ ಸರಶೆಟ್ಟರ್, ಮುತ್ತು ಬೆಣ್ಣಿ, ಮನೋಜ್ ಗೋಣೆಪ್ಪನವರ, ಮಂಜು ತಳವಾರ, ಶಮ್ಮು ಗೋಡಿಹಾಳ್, ಅಬ್ರಾರ್ ಖಾಜಿ ಹಾಗೂ ಎಸ್.ಕೆ. ಹಾಕಿ ಕ್ಲಬ್, ಸ್ಪೋಟ್ಸ ಕ್ಲಬ್ ರಟ್ಟೀಹಳ್ಳಿ, ಈಗಲ್ ಸ್ಪೋಟ್ಸ ಕ್ಲಬ್‌ನ ಅಧ್ಯಕ್ಷರು, ಸದಸ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.