ಹಾನಗಲ್ಲ ತಾಲೂಕಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ₹ ೨೦೦ ಕೋಟಿ ಬಿಡುಗಡೆ: ಶಾಸಕ ಮಾನೆ

KannadaprabhaNewsNetwork |  
Published : Nov 24, 2026, 03:00 AM IST
ಇನಾಂನೀರಲಗಿಗ್ರಾಮದಲ್ಲಿ₹ ೩೫ ಲಕ್ಷವೆಚ್ಚದಲ್ಲಿನಾನಾಅಭಿವೃದ್ಧಿ ಕಾಮಗಾರಿಗಳಿಗೆಶಾಸಕ, ಕರ್ನಾಟಕ ಗೃಹಮಂಡಳಿಅಧ್ಯಕ್ಷಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ರಸ್ತೆಗಳು ಹಾಗೂ ಸೇತುವೆಗಳ ನಿರ್ಮಾಣ, ಹೆದ್ದಾರಿ ಸುಧಾರಣೆ, ಗ್ರಾಮೀಣ ಭಾಗದ ಮೂಲ ಸೌಕರ್ಯ ಹೆಚ್ಚಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ಹಾನಗಲ್ ತಾಲೂಕಿಗೆ ಒಟ್ಟು ೨೦೦ ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ರಸ್ತೆಗಳು ಹಾಗೂ ಸೇತುವೆಗಳ ನಿರ್ಮಾಣ, ಹೆದ್ದಾರಿ ಸುಧಾರಣೆ, ಗ್ರಾಮೀಣ ಭಾಗದ ಮೂಲ ಸೌಕರ್ಯ ಹೆಚ್ಚಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ಹಾನಗಲ್ ತಾಲೂಕಿಗೆ ಒಟ್ಟು ೨೦೦ ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಇನಾಂನೀರಲಗಿ ಗ್ರಾಮದಲ್ಲಿ ೨೦೨೫-೨೬ನೇ ಸಾಲಿನ ಕಾಲೋನಿ ಅಭಿವೃದ್ಧಿ ಹಾಗೂ ಪ್ರಗತಿ ಕಾಲೋನಿ ಯೋಜನೆಯಡಿ₹ ೩೫ ಲಕ್ಷವೆಚ್ಚದಲ್ಲಿ ಗ್ರಾಮದ ಒಳಗೆ ಸಂಪರ್ಕ ಕಲ್ಪಿಸುವ ಸಿಸಿರಸ್ತೆ, ಸಿಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಎಲ್ಲ ೪೨ ಗ್ರಾಮ ಪಂಚಾಯಿತಿಗಳಿಗೆ ತಲಾ ₹ಒಂದು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಬರುವ ಮಾರ್ಚ್ ಒಳಗೆ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಉಧ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮರಗಡಿ, ತಾಲೂಕಾಧ್ಯಕ್ಷ ಬೈಲವಾಳ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸನಗೌಡ ಪಾಟೀಲ, ಕೆಪಿಸಿಸಿ ಸದಸ್ಯಖ್ವಾಜಾಮೊಹಿದ್ದೀನ ಜಮಾದಾರ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ತಾಪಂ ಕೆಡಿಪಿ ಸದಸ್ಯ ರಾಘವೇಂದ್ರ ಹಾನಗಲ್, ಮುಖಂಡರಾದ ಮಂಜಣ್ಣ ಶೃಂಗೇರಿ, ದೇವಿಂದ್ರಪ್ಪ ಬಿಳಗಲಿ, ಬಸವರಾಜ ಹಿರೇಕಾಂಶಿ, ನಾಗಪ್ಪ ಉಪ್ಪಾರ, ಜಗದೀಶ, ರವಿ ಮಾಸ್ತೆಣ್ಣನವರ, ಲೋಕಪ್ಪ ಹಾವೇರಿ, ನಿಂಗಪ್ಪ ಬನವಾಸಿ, ಗಜೇಂದ್ರ ಕೋರಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉನ್ನತ ಶಿಕ್ಷಣದಿಂದಲೇ ಮಹಿಳೆಯರ ಸಬಲೀಕರಣ ಸಾಧ್ಯ
ರಾಜ್ಯಪಾಲದ ಮಧ್ಯಪ್ರವೇಶಕ್ಕೆ ಆಗ್ರಹ