ಜಲ್ಲಿಗೇರಿ ತಾಂಡಾದಲ್ಲಿ 200 ಮನೆಗಿಲ್ಲ ಶೌಚಾಲಯ!

KannadaprabhaNewsNetwork |  
Published : Jun 14, 2026, 02:30 AM IST
ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಪಂ ವ್ಯಾಪ್ತಿಯ ಜಲ್ಲಿಗೇರಿ ತಾಂಡಾದಲ್ಲಿ ಚೊಂಬು ಹಿಡಿದು ಬಯಲು ಬಹಿರ್ದೆಸೆಗೆ ಹೊರಟಿರುವ ಜನ. | Kannada Prabha

ಸಾರಾಂಶ

ಬೆಳಗಿನ ಜಾವವೇ ಗ್ರಾಮಗಳತ್ತ ಒಂದು ಬಾರಿ ತೆರಳಿದರೆ ಕೈಯಲ್ಲಿ ಚೊಂಬು ಹಿಡಿದು ಗ್ರಾಮಸ್ಥರು ಹೊಲ, ಗದ್ದೆ, ಪೊದೆ, ರಸ್ತೆಬದಿಗಳಲ್ಲಿ ಮಲ ವಿಸರ್ಜನೆ ಮಾಡುವ ಪದ್ಧತಿ ಕೊನೆಗೊಂಡಿಲ್ಲ.

ಮಹದೇವಪ್ಪ ಎಂ. ಸ್ವಾಮಿ

ಶಿರಹಟ್ಟಿ: ಕಳೆದ 2018ರಲ್ಲೇ ಜಿಲ್ಲೆ ಬಯಲು ಶೌಚಮುಕ್ತ ಎಂದು ಘೋಷಣೆಯಾಗಿದೆ. ಆದರೆ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಬಹಿರ್ದೆಸೆ ಪದ್ಧತಿ ಇಂದಿಗೂ ಕೊನೆಗೊಂಡಿಲ್ಲ.ಬೆಳಗಿನ ಜಾವವೇ ಗ್ರಾಮಗಳತ್ತ ಒಂದು ಬಾರಿ ತೆರಳಿದರೆ ಕೈಯಲ್ಲಿ ಚೊಂಬು ಹಿಡಿದು ಗ್ರಾಮಸ್ಥರು ಹೊಲ, ಗದ್ದೆ, ಪೊದೆ, ರಸ್ತೆಬದಿಗಳಲ್ಲಿ ಮಲ ವಿಸರ್ಜನೆ ಮಾಡುವ ಪದ್ಧತಿ ಕೊನೆಗೊಂಡಿಲ್ಲ. ಗ್ರಾಮಗಳಲ್ಲಿ ಕೆಲವರು ಶೌಚಾಲಯ ಕಟ್ಟಿಕೊಂಡಿದ್ದಾರೆ. ಆದರೆ ನೀರಿನ ಸೌಲಭ್ಯ ಮತ್ತು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಬಯಲಿಗೆ ಹೋಗುತ್ತಾರೆ.100 ಮನೆಗಳಲ್ಲಿ ಮಾತ್ರ ಶೌಚಾಲಯ: ತಾಲೂಕಿನ ಜಲ್ಲಿಗೇರಿ ತಾಂಡಾದಲ್ಲಿ ೧೫೦೦ ಜನಸಂಖ್ಯೆ ಇದ್ದು, 300 ಮನೆಗಳಿವೆ. ಆದರೆ ಬರೀ ೧೦೦ ಮನೆಗಳ ಜನರು ಮಾತ್ರ ಶೌಚಾಲಯ ಹೊಂದಿದ್ದನ್ನು ನೋಡಿದರೆ ಬಹಳ ಆಘಾತವೆನಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಬಹಿರ್ದೆಸೆ ನಿರ್ಮೂಲನೆಯಾಗಿಲ್ಲ ಎನ್ನುವುದಕ್ಕೆ ಅಧಿಕಾರಿಗಳಿಗೆ ಮತ್ತೇನು ಸಾಕ್ಷಿ ಬೇಕು ಎಂದು ಸೌಲಭ್ಯ ವಂಚಿತ ತಾಂಡಾದ ಜನತೆ ಬೇಸರದಿಂದ ಹೇಳುತ್ತಾರೆ.ಮಹಿಳೆಯರು ಬಟ್ಟೆಯಿಂದ ಮರೆಮಾಡಿಕೊಂಡು ಬಯಲಲ್ಲಿ ಬಹಿರ್ದೆಸೆಗೆ ಹೋಗಬೇಕು. ಯಾರೂ ನೋಡಬಾರದೆಂದು ರಾತ್ರಿ ಇಲ್ಲವೇ ನಸುಕಿನಲ್ಲಿ ಹೋಗಬೇಕು. ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ಜಲ್ಲಿಗೇರಿ ತಾಂಡಾದತ್ತ ಒಮ್ಮೆ ತಿರುಗಿ ನೋಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬಯಲು ಬಹಿರ್ದೆಸೆ ಅವಲಂಬಿಸಿದವರ ಸಂಖ್ಯೆ ತಾಲೂಕಿನ ೧೪ ಗ್ರಾಮ ಪಂಚಾಯಿತಿಗಳಲ್ಲಿ ಕಡಿಮೆಯಾಗಿಲ್ಲ. ಶೌಚಾಲಯ ಕಟ್ಟಿಕೊಳ್ಳುವವರಿಂದ ಬೆಟ್ಟದಷ್ಟು ಬಂದಿದ್ದ ಅರ್ಜಿಗಳನ್ನು ಹೇಗಾದರೂ ಕರಗಿಸಿ ಶೂನ್ಯಕ್ಕಿಳಿಸಿ ಪ್ರತಿ ಮನೆಯೂ ಶೌಚಾಲಯ ಹೊಂದಿದ ಘೋಷಣೆ ಕೇಳಿದ ಮೇಲೆ ಬಹುತೇಕರು ಅರ್ಜಿ ಹಿಡಿದು ಗ್ರಾಮ ಪಂಚಾಯಿತಿಗಳ ಮೆಟ್ಟಿಲೇರಿದ್ದಾರೆ. ತಾಲೂಕಿನಲ್ಲಿ ಇವರ ದೊಡ್ಡ ಪಟ್ಟಿಯೇ ಇದೆ.

ಕಟ್ಟಿಕೊಳ್ಳಲು ಸೂಚನೆ: ತಾಲೂಕಿನ ೧೪ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಒಟ್ಟು ೧೬೩೧ ಶೌಚಾಲಯ ಕಟ್ಟಿಕೊಳ್ಳುವ ಗುರಿ ಹೊಂದಲಾಗಿತ್ತು. ಸದ್ಯ ೧೨೧೮ ಶೌಚಾಲಯಗಳನ್ನು ಕಟ್ಟಿಕೊಳ್ಳಲಾಗಿದೆ. ಇನ್ನೂ ೪೧೩ ಶೌಚಾಲಯ ಕಟ್ಟಿಕೊಳ್ಳುವುದು ಬಾಕಿ ಉಳಿದಿದ್ದು, ಈಗಾಗಲೇ ಎಲ್ಲರಿಗೂ ಕಟ್ಟಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಪ್ಪ ದೊಡ್ಡಮನಿ ತಿಳಿಸಿದರು.

ಪರಿಶೀಲನೆ ನಡೆಸಿ: ಅಧಿಕಾರಿಗಳು ಬರೀ ಕಾಗದದಲ್ಲಿ ಮಾತ್ರ ಸಾಧನೆ ತೋರಿಸಿದ್ದಾರೆ. ಜಲ್ಲಿಗೇರಿ ತಾಂಡಾದಲ್ಲಿಯೇ ೧೫೦೦ಕ್ಕೂ ಹೆಚ್ಚು ಜನಸಂಖ್ಯೆ ಇದ್ದು ನೂರು ಜನರೂ ಕೂಡ ಶೌಚಾಲಯ ಹೊಂದಿಲ್ಲ. ಖುದ್ದು ಅಧಿಕಾರಿಗಳು ಈ ತಾಂಡಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ ವಾಸ್ತವ ಸಂಗತಿ ಗಮನಕ್ಕೆ ಬರುತ್ತದೆ ಎಂದು ಜಲ್ಲಿಗೇರಿ ತಾಂಡಾದ ಯುವಕ ವೀರೇಶ ಲಮಾಣಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಅತಂತ್ರ
ಸಂವಿಧಾನದಿಂದ ಬಾಲ ಕಾರ್ಮಿಕ ಪದ್ಧತಿ ದೂರವಿಡಲು ಸಾಧ್ಯ