ಕಟ್ಟಡ ಕಾರ್ಮಿಕರ ಸಂಘದ ದಿನದರ್ಶಿಕೆ ಬಿಡುಗಡೆ

KannadaprabhaNewsNetwork | Published : Dec 12, 2024 12:33 AM

ಸಾರಾಂಶ

ಕಟ್ಟಡ ಕಾರ್ಮಿಕರು ತಮ್ಮ ಕಾಯಕದಿಂದಲೇ ಜೀವನ ಕಂಡುಕೊಂಡವರು.

ಕನ್ನಡಪ್ರಭ ವಾರ್ತೆ ಸರಗೂರುಪಟ್ಟಣದ ಸೋಮೇಶ್ವರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಚೇರಿಯಲ್ಲಿ ಮಂಗಳವಾರ ಸೋಮೇಶ್ವರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಹೊರ ತಂದಿರುವ 2025ರ ನೂತನ ವರ್ಷದ ದಿನದರ್ಶಿಕೆಯನ್ನು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಸಿ. ಚಂದನ್ ಗೌಡ ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರು ತಮ್ಮ ಕಾಯಕದಿಂದಲೇ ಜೀವನ ಕಂಡುಕೊಂಡವರು. ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವ ಮೂಲಕ ಆರ್ಥಿಕವಾಗಿ ಆಭಿವೃದ್ಧಿ ಹೊಂದಲು ಶ್ರಮಿಸಬೇಕು. ಕೃಷಿಕರು, ಸೈನಿಕರು, ಶಿಕ್ಷಕರಂತೆ ಶ್ರಮಿಕರೂ ಪ್ರಮುಖ ಪಾತ್ರ ವಹಿಸುತ್ತಾರೆ. ಶ್ರಮಿಕರು ಇಲ್ಲದಿದ್ದರೆ ನಾವು ಹೀಗೆ ಇರಲು ಸಾಧ್ಯವಿಲ್ಲ. ಕಾಯಕವೇ ಕೈಲಾಸ ಎಂಬ ಮುತ್ತಿನಂತೆ ನುಡಿಗಟ್ಟು ಹಾಕಲಾಗಿದೆ. ಶ್ರಮಿಕರ ಬದುಕು ಉತ್ತಮವಾಗಿರಲು ಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.ನಾವು ಬದುಕಲು ಭಗವಂತ ನೀಡಿರುವುದನ್ನು ಸಮರ್ಪಕವಾಗಿ, ಸೂಕ್ಷ್ಮವಾಗಿ ಬಳಸಿಕೊಳ್ಳಬೇಕು. ಉಳ್ಳವರು, ಉಳ್ಳದವರ ತಟ್ಟೆಗೆ ಕೈಹಾಕಬಾರದು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಚ್. ರಮೇಶ್ ಮಾತನಾಡಿ, ಸಂಘವು ಉತ್ತಮ ಉದ್ದೇಶದೊಂದಿಗೆ ಶುರುವಾಗಿದ್ದು, ಸಂಘದಲ್ಲಿ ಪೇಂಟರ್, ಎಲೆಕ್ಟ್ರಿಷಿಯನ್, ಮರಗೆಲಸದವರು ಸೇರಿದಂತೆ ಇನ್ನಿತರ ವೃತ್ತಿ ಮಾಡುವವರು ಇದ್ದಾರೆ. ಸಂಘವೂ ಸಾಮಾಜಿಕ ಕಳಕಳಿಯುಳ್ಳದಾಗಿದ್ದು, ರಾಜ್ಯ ಸರ್ಕಾರದ ಸೌಲಭ್ಯವನ್ನು ಆರ್ಹ ಫಲಾನುಭವಿಗಳಿಗೆ ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಸರಗೂರು ತಾಲೂಕು ಅಧ್ಯಕ್ಷ ಜಿ.ಸಿ. ಲೋಕೇಶ್, ಎಚ್.ಡಿ. ಕೋಟೆ ತಾಲೂಕು ಅಧ್ಯಕ್ಷ ಉಮೇಶ್, ಸಂಘದ ಅಧ್ಯಕ್ಷ ಮಣಿ ,ಪ್ರಧಾನ ಕಾರ್ಯದರ್ಶಿ ರಮೇಶ್, ಸರಗೂರಿನ ಉದ್ಯಮಿ ಸಮಂತ್, ಜಿಲ್ಲಾ ಸಂಚಾಲಕ ಶಂಕರ್, ಸಂಘದ ಗೌರವಾಧ್ಯಕ್ಷ ತಗಡೂರು ನಾಯಕ, ಉಪಾಧ್ಯಕ್ಷ ಮುತ್ತುರಾಜು, ಪ್ರಧಾನ ಕಾರ್ಯದರ್ಶಿ ಎಸ್.ಎಚ್. ರಮೇಶ್, ಸಂಘಟನಾ ಕಾರ್ಯದರ್ಶಿ ಷರೀಫ್, ಖಜಾಂಚಿ ಸಿ. ನಾಗರಾಜು, ಸಹ ಕಾರ್ಯದರ್ಶಿ ರಾಘವೇಂದ್ರ, ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ್, ವಿನಯ್ ಕುಮಾರ್, ಮಂಜುನಾಥ, ಗಣೇಶ್, ಎಸ್.ಜಿ. ಕುಮಾರ್, ರಾಜಣ್ಣ, ಅಜಯ್, ಪೇಂಟ್ ಲೋಕೇಶ್, ಟೈಲ್ಸ್ ಸುರೇಶ್, ಪುಟ್ಟಸ್ವಾಮಾಚಾರಿ ಸೇರಿದಂತೆ ಪದಾಧಿಕಾರಿಗಳು, ರೈತ ಮುಖಂಡರು ಇದ್ದರು.

Share this article