ಮನುಷ್ಯ ಜೀವನದಲ್ಲಿ ಕಲಿಯಬೇಕಾದದ್ದು ಬಹಳಷ್ಠಿದೆ ಕಲಿತಿರುವುದು ಸ್ವಲ್ಪ ಮಾತ್ರ ಅರಿತು ಬಾಳಿದರೆ ಬದುಕು ಬಂಗಾರ ಮರೆತು ಬಾಳಿದರೆ ಬದುಕು ಬಂಧನಕಾರಿ ಎಂದು ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಮನುಷ್ಯ ಜೀವನದಲ್ಲಿ ಕಲಿಯಬೇಕಾದದ್ದು ಬಹಳಷ್ಠಿದೆ ಕಲಿತಿರುವುದು ಸ್ವಲ್ಪ ಮಾತ್ರ ಅರಿತು ಬಾಳಿದರೆ ಬದುಕು ಬಂಗಾರ ಮರೆತು ಬಾಳಿದರೆ ಬದುಕು ಬಂಧನಕಾರಿ ಎಂದು ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಸಿದ್ದರ ಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಏರ್ಪಡಿಸಿದ್ದ ೨೨೩ ನೇ ಬೆಳದಿಂಗಳ ಕೂಟ ಜನ ಜಾಗೃತಿ ಧರ್ಮ ಸಮಾರಂಭದ ದಿವ್ಯಸಾನಿದ್ಯವಹಿಸಿ ಆಶೀರ್ವಚನ ನೀಡಿ ಮನುಷ್ಯ ಜೀವನದಲ್ಲಿ ಏಳುಬೀಳು ಸಹಜ, ಧರ್ಮ ಮಾರ್ಗದಲ್ಲಿ ನಡೆದರೆ ಉತ್ತಮ ಪ್ರಜೆಯಾಗಲು ಸಾಧ್ಯ, ಎಂದರು. ಕಾರ್ಯಕ್ರಮದಲ್ಲಿ ದಾವಣೆಗೆರೆ ಶ್ರೀ ಮಠದ ನಾಲ್ವಡಿ ಶಾಂತವೀರಭದ್ರ ಸ್ವಾಮೀಜಿ ಮಾತನಾಡಿ ಮನುಷ್ಯ ಜೀವನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಜೀವಿಸದಾಗ ಮಾತ್ರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಲು ಸಾಧ್ಯ ಎಂದು ತಿಳಿಸಿದರು. ತಿಪಟೂರು ಮಳೆ ಸಂಶೋಧಕರು ಜೀವವೈವಿದ್ಯ ಶಿಕ್ಷಣ ಸಂಶೋಧನಾ ಪ್ರಯೋಗಾಲಯದ ಮುರಳಿಧರ್ ಗುಂಗರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಜಮೀನುಗಳಲ್ಲಿ ಬೆಳೆಯುವ ಕಳೆಯನ್ನು ಆಹಾರವಾಗಿ ಪರಿವರ್ತನೆ ಗೊಳಿಸುವ ಬಗ್ಗೆ ಸಭೆಯಲ್ಲಿ ವಿವರಿಸಿದರು. ಕಾರ್ಯಕ್ರಮದಲ್ಲಿ ಬಿಎಂಟಿಸಿ ನಿವೃತ್ತ ನೌಕರರ ಬಿ.ಪಿ.ನಂಜುಂಡಯ್ಯ, ಜಿ.ಸುಶೀಲಮ್ಮ, ಬಿ.ಎಂ.ಗಂಗಾಬಿಕೆ, ರೋಹಿತ್, ದೇವಂತ್ ಸೇರಿದಂತೆ ಶ್ರೀ ಮಠದ ಸದ್ಭಕ್ತರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.