ಬಾಗಲಕೋಟೆಯಲ್ಲಿ ಇಂದು, ನಾಳೆ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನ

KannadaprabhaNewsNetwork |  
Published : Jan 30, 2026, 02:45 AM IST
ಹಸ್ತಪ್ರತಿ | Kannada Prabha

ಸಾರಾಂಶ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ ಹಾಗೂ ಬಾಗಲಕೋಟೆಯ ನವನಗರದ ಸರ್ಕಾರಿ ಪ್ರಥಮ ದರ್ಜೆಕಾಲೇಜು ಸಹಯೋಗದಲ್ಲಿ ಜ.30 ಮತ್ತು ಜ.31ರಂದು ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವಮಾನವ ಸಭಾಭವನದಲ್ಲಿ ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ ಹಾಗೂ ಬಾಗಲಕೋಟೆಯ ನವನಗರದ ಸರ್ಕಾರಿ ಪ್ರಥಮ ದರ್ಜೆಕಾಲೇಜು ಸಹಯೋಗದಲ್ಲಿ ಜ.30 ಮತ್ತು ಜ.31ರಂದು ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವಮಾನವ ಸಭಾಭವನದಲ್ಲಿ ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನ ಆಯೋಜಿಸಲಾಗಿದೆ. 30ರಂದು ಬೆಳಗ್ಗೆ 9 ಗಂಟೆಗೆ ಮೆರವಣಿಗೆ ಮೂಲಕ ಸಮ್ಮೇಳಾನಧ್ಯಕ್ಷರ ಬರಮಾಡಿಕೊಳ್ಳಲಾಗುವುದು.10.30 ಗಂಟೆಗೆ ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಬೆಂಗಳೂರಿನ ಹಿರಿಯ ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಸಮ್ಮೇಳನಾಧ್ಯಕ್ಷತೆ ವಹಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸುವರು. ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆನಂದ ದೇಶಪಾಂಡೆ ಸಮ್ಮೇಳನ ಉದ್ಘಾಟಿಸುವರು. ಬಾಗಲಕೋಟೆ ಬಿವಿವಿ ಸಂಘದ ಆಡಳಿತಾಧಿಕಾರಿ, ಸಾಹಿತಿಗಳಾದ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಡಾ.ವೀರೇಶ ಬಡಿಗೇರ ಸಂಪದಾನೆಯ ಹಸ್ತಪ್ರತಿ ವ್ಯಾಸಂಗ-25 ಪುಸ್ತಕ ಬಿಡುಗಡೆ ಮಾಡುವರು. ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪ್ರೊ.ಪಿ.ಬಿ. ಬಡಿಗೇರ ಅತಿಥಿಗಳಾಗಿ ಪಾಲ್ಗೊಳ್ಳುವರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಪ್ರಾಸ್ತಾವಿಕ ನುಡಿ ಹೇಳುವರು.

ಮಧ್ಯಾಹ್ನ 12.30 ಗಂಟೆಗೆ ನಡೆಯುವ ಒಂದನೆಯ ಗೋಷ್ಠಿಯಲ್ಲಿ ಡಾ.ಬಿ.ಎಸ್. ಕುಲಕರ್ಣಿಯವರ ಸಾಹಿತ್ಯ ಸಂಸ್ಕರಣೆ-1 ಇದರಲ್ಲಿ ಅವರ ಜೀವನ ಮತ್ತು ಪರಿಸರ ಕುರಿತು ಧಾರವಾಡದ ಡಾ.ಜಿನದತ್ತ ಹಡಗಲಿ, ಸಂಶೋಧನೆ ಕುರಿತು ಬೆಳಗಾವಿ ಡಾ.ಪಿ.ಜಿ. ಕೆಂಪಣ್ಣವರ, ಕಾವ್ಯ ಸಂಪಾದನೆ-1 ಕುರಿತು ಧಾರವಾಡದ ಡಾ.ಹನುಮಂತ ಮೇಲಿನಮನಿ ವಿಷಯ ಮಂಡಿಸುವರು.

ಮಧ್ಯಾಹ್ನ 2.30 ಗಂಟೆಗೆ ನಡೆಯುವ ಎರಡನೆಯ ಗೋಷ್ಠಿಯಲ್ಲಿ ಡಾ.ಬಿ.ಎಸ್. ಕುಲಕರ್ಣಿಯವರ ಸಾಹಿತ್ಯ ಸಂಸ್ಕರಣೆ-2 ಇದರಲ್ಲಿ ಅವರ ಕಾವ್ಯ ಸಂಪಾದನೆ-2 ಕುರಿತು ವಿದ್ಯಾರಣ್ಯದ ಸೂರಲಿಂಗಯ್ಯ.ಕೆ, ಗದ್ಯ ಸಾಹಿತ್ಯ ಸಂಪಾದನೆ ಕುರಿತು ವಿದ್ಯಾರಣ್ಯದ ಸುನೀಲ.ಐ.ಎಸ್, ಹಸ್ತಪ್ರತಿ ಸೂಚಿ ರಚನೆ ಕುರಿತು ವಿದ್ಯಾರಣ್ಯದ ಗೋಣಿಬಸಪ್ಪ ಪಿ. ವಿಷಯ ಮಂಡಿಸುವರು. ಸಂಜೆ 4.30 ಗಂಟೆಗೆ ನಡೆಯುವ ಮೂರನೆಯ ಗೋಷ್ಠಿಯಲ್ಲಿ ಪ್ರಾಚೀನ ಕಾವ್ಯ ಪರಿಷ್ಕರಣೆ ಇದರಲ್ಲಿ ಮೋಹನ ತರಂಗಿಣಿ ಕುರಿತು ವಿದ್ಯಾರಣ್ಯದ ಡಾ.ಎಫ್.ಟಿ. ಹಳ್ಳಿಕೇರಿ, ದೇವರ ದಾಸಿಮಯ್ಯ ವಚನಗಳ ಕುರಿತು ವಿದ್ಯಾರಣ್ಯದ ಲಿಂಗರಾಜ ಉಳ್ಳಾಗಡ್ಡಿ, ಅನಂತನಾಥ ಪುರಾಣ ಕುರಿತು ವಿದ್ಯಾರಣ್ಯದ ಡಾ.ಎಸ್.ಎಸ್. ಅಂಗಡಿ, ಬಸವ ಪುರಾಣ ಕುರಿತು ಡಾ.ಎಸ್.ಆರ್.ಚನ್ನವೀರಪ್ಪ ವಿಷಯಗಳ ಮಂಡಿಸುವರು.

31ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ನಾಲ್ಕನೆಯ ಗೋಷ್ಠಿಯಲ್ಲಿ ಹಸ್ತಪ್ರತಿಶಾಸ್ತ್ರ ಮತ್ತು ಗ್ರಂಥಸಂಪಾದನೆ ಹೊಸ ತಲೆಮಾರಿನ ತುಡಿತಗಳು ಇದರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಅಧ್ಯಕ್ಷತೆ ವಹಿಸುವರು. ಹಸ್ತಪ್ರತಿ ಲಿಪಿ ಮತ್ತು ಭಾಷೆ ಕುರಿತು ಮೈಸೂರಿನ ಡಾ.ಸಣ್ಣಪಾಪಯ್ಯ, ಆಯುರ್ವೇದ ಹಸ್ತಪ್ರತಿಗಳಲ್ಲಿ ಸಮಕಾಲೀನತೆ ಕುರಿತು ಇಳಕಲ್‌ ಡಾ.ಈರಣ್ಣ ಹುರಳಿ, ಸಂಸ್ಕೃತ ಹಸ್ತಪ್ರತಿಗಳ ವೈಶಿಷ್ಟ್ಯ ಕುರಿತು ಬೆಂಗಳೂರಿನ ಡಾ.ಪ್ರಭುಸ್ವಾಮಿ, ಕನ್ನಡ ಮುದ್ರಣ ಮೊಳೆ ಮತ್ತು ಅತ್ತಾವರ ಅನಂತಾಚಾರಿ ಕುರಿತು ವಿದ್ಯಾರಣ್ಯದ ಸತೀಶಗೌಡ ಬಿ, ಸಣ್ಣಾಟದ ಹಸ್ತಪ್ರತಿಗಳ ಸ್ವರೂಪ ಕುರಿತು ಕೌಜಲಗಿಯ ಡಾ.ರಾಜು ಕಂಬಾರ, ಅಶ್ವಾಸ್ತ್ರದ ಹಸ್ತಪ್ರತಿಗಳ ಸ್ವರೂಪ ಕುರಿತು ನರೇಗಲ್ ದ ಡಾ.ಕಲ್ಲಯ್ಯ ಹಿರೇಮಠ, ಕನ್ನಡ ಹಸ್ತಪ್ರತಿಗಳ ಮೌಖಿಕರೂಪ ಕುರಿತು ವಿದ್ಯಾರಣ್ಯದ ಭಾರತಿ ಬಡಿಗೇರ, ಬಯಲಾಟದ ಹಸ್ತಪ್ರತಿಗಳಲ್ಲಿ ಸೂಚನೆಗಳು ಕುರಿತು ವಿದ್ಯಾರಣ್ಯದ ಕಾವೇರಿ ಆರ್. ವಿಷಯ ಮಂಡನೆ ಮಾಡುವರು.

ಬೆಳಗ್ಗೆ 11.30 ಗಂಟೆಗೆ ಐದನೆಯ ಗೋಷ್ಠಿಯಲ್ಲಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಬದುಕು ಬರಹ ಇದರಲ್ಲಿ ಅವರ ಜೀವನ ಮತ್ತು ಸಾಧನೆ ಕುರಿತು ಡಾ.ಚಂದ್ರಶೇಖರ ಕಾಳನ್ನವರ, ಗ್ರಂಥ ಸಂಪಾದನೆ ಕುರಿತು ಡಾ.ವೀರೇಶ ಬಡಿಗೇರ, ಇತರೆ ಸಂಪಾದನೆಗಳು ಕುರಿತು ಗುಲಬುರ್ಗಾ ಡಾ.ಎಂ.ಬಿ. ಕಟ್ಟಿ, ವಿಮರ್ಶೆ ಹಾಗೂ ಸಂಸ್ಕೃತಿ ಅಧ್ಯಯನ ಕುರಿತು ವಿಜಯಪುರದ ಡಾ. ಗಂಗಾಧರಯ್ಯ ಎಸ್.ಎಂ, ಭಾಷೆ ಮತ್ತು ನಿಘಂಟು ಕುರಿತು ವಿದ್ಯಾರಣ್ಯದ ಮಲ್ಲಿಕಾರ್ಜುನ ಎಚ್, ಅವರ ಇತರೆ ಸಾಹಿತ್ಯ ಕುರಿತು ವಿಜಯಪುರದ ಡಾ.ನಾಗರಾಜ ಎಂ.ವಿಷಯ ಮಂಡಿಸುವರು.

31ರಂದು ಮಧ್ಯಾಹ್ನ 2.30 ಗಂಟೆಗೆ ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು, ಬೆಂಗಳೂರಿನ ಹಿರಿಯ ವಿದ್ವಾಂಸರಾದ ಡಾ.ನಾ.ಗೀತಾಚಾರ್ಯ ಸಮಾರೋಪ ನುಡಿ ಹೇಳುವರು, ಹಂಪಿ ಕನ್ನಡ ವಿಶ್ವದ್ಯಾಲಯದ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅಧ್ಯಕ್ಷತೆ ವಹಿಸುವರು, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಸಮ್ಮೇಳನಾಧ್ಯಕ್ಷರ ನುಡಿ ಹೇಳುವರು. ಅತಿಥಿಗಳಾಗಿ ಹಡಲಗೇರಿಯ ಸರ್ಕಾರಿ ಪ್ರಥಮ ದರ್ಜೆ ವಸತಿಯುಕ್ತ ಕಾಲೇಜಿನ ಪ್ರಾಚಾರ್ಯ ಡಾ.ಶರಣಗೌಡ ಪಾಟೀಲ ಪಾಲ್ಗೊಳ್ಳುವರು. ಹಸ್ತಪ್ರತಿಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ವೀರೇಶ ಬಡಿಗೇರ, ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಉಪಸ್ಥಿತರಿರುವರು. ಸಮ್ಮೇಳನದ ಪ್ರಯುಕ್ತ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾದ ವತಿಯಿಂದ ಹಸ್ತಪ್ರತಿಗಳ ಪ್ರದರ್ಶನ ಆಯೊಜಿಸಲಾಗಿದೆ ಎರಡು ದಿನದ ಸಮ್ಮೇಳನದಲ್ಲಿ ನಾಡಿನ ವಿದ್ವಾಂಸರು, ಸಾಹಿತಿಗಳು, ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಪಾಲ್ಗೋಳ್ಳುವರು ಎಂದು ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎತ್ತಿನಹೊಳೆ ಗುತ್ತಿಗೇಲಿ ಹಲವು ಲೋಪ : ಸಿಎಜಿ
40 ವರ್ಷ ವಯಸ್ಸಾದರೂ ಸಿಗುತ್ತದೆ ಸರ್ಕಾರಿ ಕೆಲಸ