ಉತ್ತರ ಕನ್ನಡ ಜಿಲ್ಲೆಯ ೨೩,೧೫೫ ಮನೆ ಮಂಜೂರು: ಸಂಸದ ಕಾಗೇರಿ

KannadaprabhaNewsNetwork |  
Published : Feb 01, 2025, 12:02 AM IST
ಪೊಟೋ೩೧ಎಸ್.ಆರ್.ಎಸ್೬ (ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ) | Kannada Prabha

ಸಾರಾಂಶ

ಜಿಲ್ಲೆಗೆ ಹೆಚ್ಚಿನ ಮನೆ ಮಂಜೂರುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಸತಿ ಸಚಿವರಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಶಿರಸಿ: ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಜಿಲ್ಲೆಯ ಗ್ರಾಮೀಣ ವಸತಿರಹಿತ ಜನರಿಗೆ ೨೩,೧೫೫ ಮನೆ ಮಂಜೂರಾಗಿದ್ದು, ಪ್ರಥಮ ಬಾರಿಗೆ ಅತ್ಯಧಿಕ ಮನೆ ಮಂಜೂರಾಗಿ ಬಂದಿರುವುದು ಸಂತಸವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಅಂಕೋಲಾ ತಾಲೂಕಿಗೆ ೨೨೩೮ ಭಟ್ಕಳ ತಾಲೂಕಿಗೆ ೨೭೩೩ ದಾಂಡೇಲಿ ತಾಲೂಕಿಗೆ ೪೩೩, ಹಳಿಯಾಳ ತಾಲೂಕಿಗೆ ೧೭೬೧, ಹೊನ್ನಾವರ ತಾಲೂಕಿಗೆ ೩೩೮೭, ಕಾರವಾರ ತಾಲೂಕಿಗೆ ೧೯೦೭, ಕುಮಟಾ ತಾಲೂಕಿಗೆ ೨೯೭೪, ಮುಂಡಗೋಡ ತಾಲೂಕಿಗೆ ೨೧೦೦, ಸಿದ್ದಾಪುರ ತಾಲೂಕಿಗೆ ೧೦೮೮, ಶಿರಸಿ ತಾಲೂಕಿಗೆ ೨೮೩೨, ಯಲ್ಲಾಪುರ ತಾಲೂಕಿಗೆ ೧೧೧೪ ಹಾಗೂ ಸುಪಾಕ್ಕೆ ೫೮೮ ಸೇರಿದಂತೆ ೨೩,೧೫೫ ಮನೆ ಮಂಜೂರಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಎಲ್ಲ ಪಂಚಾಯಿತಿಗಳು ತಕ್ಷಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ಮಂಜೂರುಗೊಳಿಸಿ ಗ್ರಾಮೀಣ ಭಾಗದ ಬಡ ಜನರಿಗೆ ವಸತಿ ಕಲ್ಪಿಸಿ ಅನುಕೂಲ ಮಾಡಬೇಕು. ಜಿಲ್ಲೆಗೆ ಹೆಚ್ಚಿನ ಮನೆ ಮಂಜೂರುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಸತಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಲಿ

ಭಟ್ಕಳ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಹಾಗೂ ಪುರಸಭೆಯ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆಗೆ ಹಿರಿಯ ಶ್ರೇಣಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಕಾಂತ ಕುರಣಿ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ ಪ್ರಥಮ ಆದ್ಯತೆಯನ್ನು ಪರಿಸರ ಸ್ವಚ್ಛತೆಗೆ ನೀಡುವಂತೆ ಕೋರಿದರು.ಈ ಸಂದರ್ಭದಲ್ಲಿ ಪ್ರಥಮದರ್ಜೆ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಧನವತಿ, ಸಹಾಯಕ ಸರಕಾರಿ ಅಭಿಯೋಜಕರಾದ ವಿವೇಕ ನಾಯ್ಕ, ಶೇಖರ ಹರಿಕಾಂತ, ವಕೀಲರಾದ ವಿ.ಎಫ್. ಗೋಮ್ಸ, ಎಸ್.ಜೆ. ನಾಯ್ಕ, ನಾರಾಯಣ ಯಾಜಿ, ಮಹೇಶ ಆರ್. ನಾಯ್ಕ, ಆರ್.ಜಿ. ನಾಯ್ಕ, ವಿ.ಆರ್. ಸರಾಫ್, ಗಣೇಶ ದೇವಾಡಿಗ, ರವೀಂದ್ರ ಎಂ., ದಾಮೋದರ ನಾಯ್ಕ, ಗಣೇಶ ಮುರ್ಡೇಶ್ವರ, ನ್ಯಾಯಾಲಯಗಳ ಸಿಬ್ಬಂದಿ, ಪುರಸಭೆಯ ಕಾರ್ಮಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ