ಉಳವಿಯಲ್ಲಿ 23 ಕೆಜಿ ಕಾಡುಕೋಣ ಮಾಂಸ ವಶ: ಆರೋಪಿ ಬಂಧನ

KannadaprabhaNewsNetwork | Updated : Nov 01 2023, 01:01 AM IST

ಸಾರಾಂಶ

ಸೊರಬ ವಲಯ ಅರಣ್ಯಾಧಿಕಾರಿಗಳು

ಸೊರಬ: ತಾಲೂಕಿನ ಉಳವಿ ಗ್ರಾಮದ ಮನೆಯೊಂದರಲ್ಲಿ ಸಂಗ್ರಹಿಸಿದ್ದ ಕಾಡುಕೋಣದ ಮಾಂಸವನ್ನು ಆರೋಪಿ ಸಮೇತ ಮಂಗಳವಾರ ಸೊರಬ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಉಳವಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡುಕೋಣವನ್ನು ಬೇಟೆಯಾಡಿ, ಮಾಂಸವನ್ನು ಸಂಗ್ರಹಿಸಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿತು. ಗ್ರಾಮದ ವಿವಿಧೆಡೆ ಸುಮಾರು 23 ಕೆಜಿ ಕಾಡುಕೋಣದ ಮಾಂಸ ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಳವಿ ಗ್ರಾಮದ ಇಬ್ರಾಹಿಂ ಸಾಬ್ ಮುನೀರ್ ಸಾಬ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡ ಆರೋಪಿಗಳಾದ ತಸ್ವಿರ್ ಅಹ್ಮದ್ ಸೈಫುಲ್ಲಾ, ನವೀದ್ ಶೇಖ್ ಅಹ್ಮದ್, ಫಾರೂಕ್ ಇಸ್ಮಾಯಿಲ್ ಎಂಬವರ ಪತ್ತೆಗೆ ಕಾರ್ಯಾಚರಣೆ ನಡೆದಿದೆ.

ಸಾಗರದ ಡಿಸಿಎಫ್ ಸಂತೋಷ ಕೆಂಚಪ್ಪನವರ ಹಾಗೂ ಸೊರಬ ಎಸಿಎಫ್ ಸಿ.ಕೆ. ಯೋಗೀಶ್ ಮಾರ್ಗದರ್ಶನದಲ್ಲಿ ಸೊರಬ ವಲಯದ ವಲಯ ಅರಣ್ಯಾಧಿಕಾರಿ ಜಾವೇದ್ ಭಾಷಾ ಅಂಗಡಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಉಪ ವಲಯ ಅರಣ್ಯಧಿಕಾರಿಗಳಾದ ಮುತ್ತಣ್ಣ, ರಾಮಪ್ಪ, ಮೋಹನ್, ಯೋಗರಾಜ್, ಪರಶುರಾಮ್, ಶರಣಪ್ಪ ಹಾಗೂ ಅರಣ್ಯ ರಕ್ಷಕರಾದ ಮಂಜು, ದೇವರಾಜ್, ಕಸ್ತೂರಮ್ಮ, ಆನಂದ್, ಹರಿ, ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- - - (** ಈ ಫೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)-31ಕೆಪಿಸೊರಬ03:

ಸೊರಬ ತಾಲೂಕಿನ ಉಳವಿ ಗ್ರಾಮದ ಮನೆಯೊಂದರಲ್ಲಿ ಸಂಗ್ರಹಿಸಿದ್ದ ಕಾಡುಕೋಣದ ಮಾಂಸವನ್ನು ಆರೋಪಿ ಸಮೇತ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದರು.

Share this article