ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ೨೪ ಮಂದಿ ಅವಿರೋಧ ಆಯ್ಕೆ

KannadaprabhaNewsNetwork |  
Published : Oct 25, 2024, 12:45 AM ISTUpdated : Oct 25, 2024, 12:46 AM IST
ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ೨೪ ಮಂದಿ ಅವಿರೋಧ ಆಯ್ಕೆ | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಗೆ ೨೦೨೪-೨೯ನೇ ಸಾಲಿಗೆ ೩೪ ಕಾರ್ಯಕಾರಿ ಸಮಿತಿ ನಿರ್ದೇಶಕ ಸ್ಥಾನದಲ್ಲಿ ೨೪ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಗೆ ೨೦೨೪-೨೯ನೇ ಸಾಲಿಗೆ ೩೪ ಕಾರ್ಯಕಾರಿ ಸಮಿತಿ ನಿರ್ದೇಶಕ ಸ್ಥಾನದಲ್ಲಿ ೨೪ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಪ್ರಾಥಮಿಕ, ಪ್ರೌಢಶಾಲೆ, ಆರ್‌ಡಿಪಿಆರ್‌ ಮತ್ತು ಸಾರ್ವಜನಿಕ ಆಸ್ಪತ್ರೆ ಇಲಾಖೆಗಳ ೧೦ಸ್ಥಾನಗಳಿಗೆ ಅ.೨೮ ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಎಸ್.ಅಂಕಪ್ಪ ಘೋಷಿಸಿದ್ದಾರೆ.

ಅವಿರೋಧವಾಗಿ ಆಯ್ಕೆಯಾದ ಕೃಷಿ ಇಲಾಖೆ ಕ್ಷೇತ್ರದಿಂದ ಎಸ್.ಸುದೀಂದ್ರ ಭಾರದ್ವಾಜ್, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕ್ಷೇತ್ರದಿಂದ ಮಹದೇವ, ಕಂದಾಯ ಇಲಾಖೆ ಕ್ಷೇತ್ರದಿಂದ ಮಹದೇವಯ್ಯ ಎಂ,ಸಿ.ಮಹದೇವಪ್ಪ, ಲೋಕೋಪಯೋಗಿ ಇಲಾಖೆ, ಜಲ ಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕ್ಷೇತ್ರದಿಂದ ವಿ.ಶ್ರೀನಿವಾಸ,ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ, ಪಿಎಂಜಿಎಸ್‌ ವೈ ಯೋಜನೆ ಹಾಗೂ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯೀಕರಣ ಇಲಾಖೆ ಕ್ಷೇತ್ರದಿಂದ ಶಿವಮೂರ್ತಿ ಸಿ,ಸಾರ್ವಜನಿಕ ಶಿಕ್ಷಣ ಲಾಖೆಯ ಆಡಳಿತ ಕಚೇರಿ ಕ್ಷೇತ್ರದಿಂದ ಸವಿತ ಎಸ್‌,ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಹಾಗು ಪದವಿ ಕಾಲೇಜುಗಳ ಕ್ಷೇತ್ರದಿಂದ ಪ್ರಭುಸ್ವಾಮಿ,ಡಾ.ತುಳಸಿರಾಂ ಎಸ್‌, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಇಲಾಖೆ ಕ್ಷೇತ್ರದಿಂದ ರಂಗಸ್ವಾಮಿ ಜಿ.ಎಸ್‌,ಅರಣ್ಯ ಇಲಾಖೆ ಕ್ಷೇತ್ರದಿಂದ ಭರತ್‌ ಜಿ.ಪಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷೇತ್ರದಿಂದ ಡಾ.ಬಿ.ಆರ್.ಅಲಿಂ ಪಾಶ,ಸ್ವಾಮಿ ಎಂ,ರಾಘವೇಂದ್ರ,ಬಿ.ಮಹೇಶ,ತೋಟಗಾರಿಕೆ ಹಾಗು ರೇಷ್ಮೆ ಇಲಾಖೆ ಕ್ಷೇತ್ರದಿಂದ ಕುಮಾರ್‌ ಬಿ,ಖಜಾನೆ ಇಲಾಖೆ ಕ್ಷೇತ್ರದಿಂದ ರಾಜೇಶ್‌ ಕೆ,ಭೂ ಮಾಪನಾ,ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಇಲಾಖೆ ಕ್ಷೇತ್ರದಿಂದ ಮಹೇಶ್‌ ಟಿ.ಎಸ್, ನ್ಯಾಯಾಂಗ ಇಲಾಖೆ ಕ್ಷೇತ್ರದಿಂದ ಸತೀಶ್‌ ಕುಮಾರ್‌, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕ್ಷೇತ್ರದಿಂದ ಮಲ್ಲಮ್ಮ ಆಲಿಯಾಸ್‌ ಮಲ್ಲಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕ್ಷೇತ್ರದಿಂದ ರಾಜೇಶ್ವರಿ, ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳ ಇಲಾಖೆ ಕ್ಷೇತ್ರದಿಂದ ಎಂ.ಎನ್.ಬಾಸ್ಕರ್‌, ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ, ನೋಂದಣಿ ಇಲಾಖೆ, ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕ ಪರಿಶೋಧಕ ಹಾಗೂ ಸಾಂಖ್ಯಿಕ ಇಲಾಖೆ ಕ್ಷೇತ್ರದಿಂದ ಶಿವಮೂತ್ತಿ ಕೆ,ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಕ್ಷೇತ್ರದಿಂದ ಎಚ್.ಎಸ್.ಪ್ರಸಾದ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಚ್.ಎಸ್.ಪ್ರಸಾದ್‌ಗೆ ಹ್ಯಾಟ್ರಿಕ್‌ ಗೆಲುವುಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಗೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಕ್ಷೇತ್ರದಿಂದ ಎಚ್.ಎಸ್.ಪ್ರಸಾದ್‌ ಸತತ ಮೂರು ಬಾರಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ತಾಲೂಕಿನ ಬೇಗೂರು ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ತರಬೇತಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಎಲ್ಲಾ ನೂತನ ನಿರ್ದೇಶಕರಿಗೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಸಾದ್‌ ಅಭಿನಂದನೆ ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಸೂರಿಗಾಗಿ ₹4 ಲಕ್ಷ ಅನುದಾನ: ಸಚಿವ ಜಮೀರ್ ಅಹಮದ್
ಗುರುವೇ ಗತಿ ಎಂದಾಗ ಸಕಲ ಜ್ಞಾನ ಸಿಗಲು ಸಾಧ್ಯ: ಗುರುರಾಜ ಗುರೂಜಿ