ಧಾರವಾಡ:
ಇಲ್ಲಿನ ಜರ್ನಲಿಸ್ಟ್ ಗಿಲ್ಡ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಮೀಟ್ ದೀ ಪ್ರೇಸ್‌ನಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಸವದತ್ತಿಯಿಂದ 3 ಪೈಪ್‌ಲೈನ್ ಮೂಲಕ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಹುಬ್ಬಳ್ಳಿಗೆ ನೇರವಾಗಿ 100 ಎಂಎಲ್‌ಡಿ, ಧಾರವಾಡಕ್ಕೆ 55 ಎಂಎಲ್‌ಡಿ ಹಳೆಯ ಪೈಪ್‌ಲೈನ್ ಮಾರ್ಗದ ಮೂಲಕ ನೀರು ಬರುತ್ತಿದೆ. ಇದೀಗ ಮತ್ತೆ 43 ಎಂಎಲ್‌ಡಿ ನೀರನ್ನು ಹೊಸದಾಗಿ ನಗರಕ್ಕೆ ತರಲಾಗಿದ್ದು, ಇದರಿಂದ ಅವಳಿ ನಗರದಲ್ಲಿ 10 ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ನೀರು ಐದು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ ಎಂದು ಹೇಳಿದರು.
ನೀರ ಸಾಗರ ಕೆರೆಯಿಂದಲೂ 20 ಎಂಎಲ್‌ಡಿ ನೀರು ಲಭ್ಯವಿದ್ದು, ಇದನ್ನು ಸುತ್ತಮುತ್ತಲಿನ ಹಳ್ಳಿಗಳಿಗೆ ಪೂರೈಕೆ ಮಾಡಲಾಗುವುದು. ಸದ್ಯಕ್ಕೆ ಈ ನೀರು ಪೂರೈಕೆಯಾಗುತ್ತಿದ್ದರೂ, ಮನೆ-ಮನೆ ಸರಬರಾಜು ಪೈಪ್‌ಲೈನ್ ಕಾರ್ಯ ಪೂರ್ಣವಾಗಿಲ್ಲ. ಇನ್ನೊಂದು ವರ್ಷದಲ್ಲಿ ಎಲ್ಲವನ್ನು ಮುಗಿಸಿ 2027ರ ಅಂತ್ಯದ ಒಳಗಾಗಿ ಅವಳಿ ನಗರಕ್ಕೆ ದಿನದ 24/7 ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.11 ಲಕ್ಷ ಮೆಟ್ರಿಕ್ ಟನ್ ಕಸ ಕರಗಸ್ತೇವೆ:
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಡಾ. ಬಸವರಾಜ್ ಹೊಂಗಲ್, ಪಾಲಿಕೆ ಮತ್ತು ಜನರ ನಡುವೆ ಪತ್ರಕರ್ತರು ಕೊಂಡಿಯಾಗಿ ಕೆಲಸ ಮಾಡುತ್ತಿದ್ದು, ಜನರ ಸಮಸ್ಯೆಗಳಿಗೆ ಪಾಲಿಕೆ ಸ್ಪಂದಿಸುವ ಅಗತ್ಯತೆಗಾಗಿಯೇ ಇಂತಹ ಮಾಧ್ಯಮ ಸಂವಾದ ನಡೆಸಲಾಗುತ್ತಿದೆ ಎಂದು ಹೇಳಿದರು.
ಮಹಾನಗರದಲ್ಲಿ ಹಳೆಯ ಬೀದಿದೀಪ ತೆಗೆದು ಎಲ್‌ಇಡಿ ಬಲ್ಬ್ ಅಳವಡಿಸುತ್ತಿದ್ದು ಇದರಿಂದ ವಾರ್ಷಿಕವಾಗಿ ಪಾಲಿಕೆಗೆ ಕನಿಷ್ಠ ₹ 12 ಕೋಟಿ ಉಳಿಕೆಯಾಗಲಿದೆ. ಅಲ್ಲದೇ 700 ಎಕರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೂ ಚಿಂತನೆ ಇದ್ದು, ಇಲ್ಲಿ ಕೂಡ ವಿದ್ಯುತ್ ಉತ್ಪಾದಿಸಲು ಸಿದ್ಧತೆ ನಡೆದಿದೆ ಎಂದು ಪಾಲಿಕೆತ್ಯುಕ್ತ ರುದ್ರೇಶ ಗಾಳಿ ಹೇಳಿದರು. ನೀರಿನ ಬಿಲ್ ತುಂಬಲು ಪಾಲಿಕೆ ಹೊಸ ವ್ಯವಸ್ಥೆ ರೂಪಿಸಿದ್ದು, ಮನೆಯಲ್ಲಿ ಕುಳಿತುಕೊಂಡು ಮೊಬೈಲ್ ಮೂಲಕವೇ ಪಾವತಿಸಬಹುದಾಗಿದೆ ಎಂದ ಅವರು, ಸಾರ್ವಜನಿಕ ಉದ್ಯಾನವನದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲು ಚಿಂತನೆ ನಡೆದಿದೆ. ಈಗಾಗಲೇ ಉಣಕಲ್, ತೋಳನಕೆರೆ ಸೇರಿದಂತೆ ಕೆಲವು ಕಡೆಗಳಲ್ಲಿ ಖಾಸಗಿ ನಿರ್ವಹಣೆ ನಡೆಯುತ್ತಿದ್ದು, ಇನ್ನುಳಿದ ಕಡೆಗಳೆಲ್ಲೂ ಬೇಡಿಕೆ ಬಂದರೆ ಅವುಗಳನ್ನು ನೀಡಲಾಗುವುದು ಎಂದು ಗಾಳಿ ತಿಳಿಸಿದರು.