೨೫ ಹೆಕ್ಟರ್‌ ಅರಣ್ಯ ಪ್ರದೇಶ ತೆರವು ಕಾರ್ಯಾಚರಣೆ

KannadaprabhaNewsNetwork |  
Published : Sep 10, 2024, 01:50 AM IST
ಭದ್ರಾವತಿ ವಿಭಾಗ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮನೆ ಮತ್ತು ಅಂಗಡಿಗಳನ್ನು ತೆರವುಗೊಳಿಸಿ ಸುಮಾರು ೨೫ ಹೆಕ್ಟರ್‌ನಷ್ಟು ಪ್ರದೇಶ ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಭೈರುಕ್ಯಾಂಪ್ ಬೇಚಾರ್ ಗ್ರಾಮದಲ್ಲಿ ನಡೆದಿದೆ. | Kannada Prabha

ಸಾರಾಂಶ

ಭದ್ರಾವತಿ ವಿಭಾಗ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮನೆ ಮತ್ತು ಅಂಗಡಿಗಳನ್ನು ತೆರವುಗೊಳಿಸಿ ಸುಮಾರು ೨೫ ಹೆಕ್ಟರ್‌ನಷ್ಟು ಪ್ರದೇಶ ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಭೈರು ಕ್ಯಾಂಪ್ ಬೇಚಾರ್ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಭದ್ರಾವತಿ

ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮನೆ ಮತ್ತು ಅಂಗಡಿಗಳನ್ನು ತೆರವುಗೊಳಿಸಿ ಸುಮಾರು ೨೫ ಹೆಕ್ಟರ್‌ನಷ್ಟು ಪ್ರದೇಶ ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಭೈರು ಕ್ಯಾಂಪ್ ಬೇಚಾರ್ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಕೂಡ್ಲಿಗೆರೆ ಹೂಬಳಿ, ಗಂಗೂರು ಶಾಖಾ ವ್ಯಾಪ್ತಿಯ ಬೆಳ್ಳಿಗೆರೆ ಗ್ರಾಮದ ಸರ್ವೆ ನಂ.೧೬ ಮತ್ತು ೧೮ರ ಕುಕ್ವಾಡ-ಉಬ್ರಾಣಿ ರಾಜ್ಯ ಅರಣ್ಯ ಪ್ರದೇಶ ನೈಸಗಿಕವಾಗಿ ಅಮೂಲ್ಯವಾದ ಅರಣ್ಯ ಸಂಪತ್ತಿನಿಂದ ಕೂಡಿದ್ದು, ಈ ಪ್ರದೇಶದಲ್ಲಿರುವ ಭೈರು ಕ್ಯಾಂಪ್ ಬೇಚಾರ್ ಗ್ರಾಮದಲ್ಲಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಪ್ರದೇಶದಲ್ಲಿ ಅನಧಿಕೃತವಾಗಿ ವಹಿವಾಟಿಗಾಗಿ ಕಚ್ಚಾ ಮನೆ ಮತ್ತು ಅಂಗಡಿಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿತ್ತು.

ಅರಣ್ಯ ಭೂಮಿ ಒತ್ತುವರಿಗೆ ಪ್ರಯತ್ನಗಳು ನಡೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ.ಆಶಿಶ್ ರೆಡ್ಡಿ ಮತ್ತು ಚನ್ನಗಿರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭ ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಬಿ.ಎಚ್. ದುಗ್ಗಪ್ಪ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಅಣ್ಣನಾಯ್ಕ, ಪಿ.ಕೆ, ಟಿಕೇಶ್ವರ್, ಹನುಮಂತ ನಾಯ್ಕ, ಶೇಖರ್ ಚೌಗಲೆ ಹಾಗು ಗಸ್ತು ವನಪಾಲಕರಾದ ಪಿ.ರಾಬರ್ಟ್‌, ಎನ್. ಅರವಿಂದ ಕುಮಾರ್, ಬಿ.ಶ್ರೀಧರ, ಚಂದ್ರಶೇಖರ್, ಕಾಂತೇಶ್ ನಾಯ್ಕ್, ಅವಿನಾಶ್ ಮತ್ತು ಅರಣ್ಯ ವೀಕ್ಷಕರಾದ ರಂಗಸ್ವಾಮಿ, ಗಫರ್, ಮಲ್ಲಿಕಾರ್ಜುನ, ಬಾಗೇಶ, ಕೂಠಿ, ಅವಿನಾಶ್, ಅಬ್ದುಲ್, ಸುರೇಶ, ವಿನಯ್, ವೆಂಕಟೇಶ್, ರಘು, ಹನುಮಂತ, ಬರ್ಮ ಸೇರಿದಂತೆ ಇತರರು ಚನ್ನಗಿರಿ ಅರಣ್ಯ ಸಂಚಾರಿದಳ ಮತ್ತು ಪೂಲೀಸ್ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಸುಮಾರು ೨೫ ಹೆಕ್ಟರ್‌ನಷ್ಟು ಪ್ರದೇಶ ತೆರವುಗೂಳಿಸಿ ಕುಕ್ವಾಡ-ಉಬ್ರಾಣಿ ರಾಜ್ಯ ಅರಣ್ಯ ಪ್ರದೇಶ ಹಾಗು ನೆಟ್ಟಕಲ್ಲಹಟ್ಟಿ ಕಿರು ಅರಣ್ಯ ಪ್ರದೇಶ ಅರಣ್ಯ ಇಲಾಖೆ ಸುಪರ್ದಿಗೆ ಪಡೆಯಲಾಗಿದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ