ಕನ್ನಡಪ್ರಭ ವಾರ್ತೆ ಮಂಗಳೂರು
ಅವರು ಗುರುವಾರ ನಗರದ ಇಂದಿರಾ ಆಸ್ಪತ್ರೆಯ ೨೫ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಸ್ಥೆಯ ೨೫ರ ಸಾಧನೆ ಎಂದರೆ ಐತಿಹಾಸಿಕ ದಿನ. ಡಾ.ಸಯ್ಯದ್ ನಿಜಾಮುದ್ದೀನ್ ಅವರು ತಮ್ಮ ಬದ್ಧತೆಯಿಂದ ಅವರ ತಂದೆಯವರ ಆಶೀರ್ವಾದ, ಕುಟುಂಬದ ಸಹಕಾರದಿಂದ ಈ ದೊಡ್ಡ ಸಂಸ್ಥೆ ಕಟ್ಟಿದ್ದಾರೆ. ಸಂಸ್ಥೆ ಎಂದರೆ ಕಟ್ಟಡವಲ್ಲ, ಸೇವಾ ಮನೋಭವದ ಸಿಬ್ಬಂದಿಗಳು ಮುಖ್ಯ. ಅಂತಹ ಸಿಬ್ಬಂದಿ, ವೈದ್ಯರ ತಂಡವನ್ನು ರಚಿಸಿ ಯಶಸ್ವಿಯಾಗಿದ್ದಾರೆ. ಈ ಸಂಸ್ಥೆ ರಜತಮಹೋತ್ಸವ ಮಾತ್ರವಲ್ಲ ನೂರು ವರ್ಷ ಯಶಸ್ವಿಯಾಗಿ ಪೂರೈಸಲಿದೆ ಎಂದರು.ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಇಂದಿರಾ ಆಸ್ಪತ್ರೆಯ ನಿರ್ಮಾಣ ಮೂಲಕ ಮಂಗಳೂರಿನ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಸಿಕ್ಕಿದಂತಾಗಿದೆ. ಇದು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಆಸ್ಪತ್ರೆಯ ಪಯಣದಲ್ಲಿ ೨೫ ವರ್ಷ ಎನ್ನುವುದು ಮಹತ್ವದ ಘಟ್ಟ. ಈ ಸಂದರ್ಭದಲ್ಲಿ ಆಸ್ಪತ್ರೆಯ ಯಶಸ್ಸಿನ ಕಾರಣಕರ್ತರಾದ ಸಿಬ್ಬಂದಿ, ವೈದ್ಯರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು. ಇಂದಿರಾ ಆಸ್ಪತ್ರೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಸಯ್ಯದ್ ನಿಜಾಮುದ್ದೀನ್ ಸ್ವಾಗತಿಸಿದರು.ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಯೇನೆಪೋಯ ವಿವಿ ಕುಲಪತಿ ಯೇನೆಪೋಯ ಅಬ್ದುಲ್ಲ ಕುಂಞ ಶುಭ ಹಾರೈಸಿದರು.
ಡಾ.ಸಯ್ಯದ್ ಝೊರಾನುದ್ದೀನ್, ಇಂದಿರಾ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ತಂಗಂ ವರ್ಗೀಸ್ ಜೋಶ್ವ, ಡಾ. ಮಹಮ್ಮದ್ ಇಸ್ಮಾಯಿಲ್, ಡಾ. ಮುನೀರ್ ಅಹಮದ್, ಡಾ. ಜಮೀಲಾ, ಡಾ. ವಿಜಯಗೋಪಾಲ್, ಡಾ. ಕೃಷ್ಣ ಪ್ರಸಾದ್ ಇದ್ದರು.ಸಂಸ್ಥೆಯ ವೈದ್ಯರು ಸಿಬ್ಬಂದಿಯನ್ನು ಅವರ ಸೇವೆಗಾಗಿ ಗಣ್ಯರು ಅಭಿನಂದಿಸಿ ಗೌರವಿಸಿದರು. ಹೆರಾ ಪಿಂಟೊ, ಸಾಹಿಲ್ ಜಹೀರ್ ನಿರೂಪಿಸಿದರು............................
೨೫ ವರ್ಷಗಳ ಹಾದಿ...ಇಂದಿರಾ ಆಸ್ಪತ್ರೆಯು ನಗರದ ಫಳ್ನೀರಿನಲ್ಲಿ ೧೯೯೯ರ ಆ.೧೫ರಂದು ಕಾರ್ಯಾರಂಭಿಸಿತ್ತು. ಅಂದಿನಿಂದ ಆಸ್ಪತ್ರೆ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ನೀಡುವ ಮೂಲಕ ಹೆಸರಾಗಿದೆ. ೧೫೦ ಹಾಸಿಗೆಯ ಸೇವೆ, ತುರ್ತು ಆರೈಕೆ, ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಮೆಟರ್ನಿಟಿ, ಮೆಡಿಸಿನ್, ಫಿಸಿಯೋಥೆರಪಿ ಸೇರಿದಂತೆ ವಿಶಾಲವಾದ ಸೇವೆಗಳನ್ನು ಒದಗಿಸುವ ಅತ್ಯಾಧುನಿಕ ವೈದ್ಯಕೀಯ ಕೇಂದ್ರವಾಗಿ ಬೆಳೆದಿದೆ.