ರಾಯಣ್ಣ ಕೇವಲ ಒಂದು ಜಾತಿಗೆ ಸಿಮಿತವಲ್ಲ: ಶಂಕರರಾವ್ ಹೆಗಡೆ

KannadaprabhaNewsNetwork |  
Published : Aug 16, 2024, 12:50 AM IST
15ಎಸ್ ಎನ್ ಕೆ01 | Kannada Prabha

ಸಾರಾಂಶ

ದೇಶ ಪ್ರೇಮ, ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಬ್ರಿಟಿಷರ ವಿರುದ್ದ ಹೋರಾಡಿದ ವೀರ ಸಂಗೊಳ್ಳಿ ರಾಯಣ್ಣನ ಹೋರಾಟ ಬದುಕು, ತ್ಯಾಗ, ಬಲಿದಾನ ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿದೆ ಎಂದು ಶಂಕರರಾವ್ ಹೆಗಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ದೇಶ ಪ್ರೇಮ, ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಬ್ರಿಟಿಷರ ವಿರುದ್ದ ಹೋರಾಡಿದ ವೀರ ಸಂಗೊಳ್ಳಿ ರಾಯಣ್ಣನ ಹೋರಾಟ ಬದುಕು, ತ್ಯಾಗ, ಬಲಿದಾನ ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರು ಸಂಘದ ಮಾಜಿ ಉಪಾಧ್ಯಕ್ಷ ಶಂಕರರಾವ್ ಹೆಗಡೆ ಹೇಳಿದರು.

ಗುರುವಾರ ಸಮೀಪದ ಗೋಟುರ ಗ್ರಾಮದಲ್ಲಿ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಹಾಗೂ ಸಂಗೊಳ್ಳಿ ರಾಯಣ್ಣ ಯುವಕ ಮಂಡಳಿ ನಾಮ ಫಲಕ ಉದ್ಘಾಟಿಸಿ ಮಾತಮಾಡಿದರು.

ಸಂಗೊಳ್ಳಿ ರಾಯಣ್ಣ ಕೇವಲ ಒಂದು ಜಾತಿಗೆ ಸಿಮಿತವಲ್ಲ, ಮಹಾನ ಪುರುಷ. ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿ, ಬ್ರಿಟಿಷರ ನಿದ್ದೆಗೆಡಿಸಿದ್ದ ವೀರ ಪರಾಕ್ರಮಿ. ಆತನ ಹೋರಾಟ, ದೇಶ ಪ್ರೇಮ ಇಂದಿನ ಯುವಕರಿಗೆ ಸ್ಫೂರ್ತಿಯಾಗಿದೆ ಎಂದರು.

ಗ್ರಾಮದ ಮುಖಂಡರಾದ ಶ್ರೀಧರ ಪಾಟೀಲ ಮಾತನಾಡಿದರು.ಇದೇ ವೇಳೆ ನಂದಗಡದ ರಾಯಣ್ಣ ಸಮಾಧಿಯಿಂದ ತರಲಾದ ರಾಯಣ್ಣ ಜ್ಯೋತಿಯನ್ನು ಅದ್ಧೂರಿಯಾಗಿ ಸ್ವಾಗತಿಸಿ, ವಾದ್ಯಮೇಳದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.

ಗ್ರಾಪಂ ಮಾಜಿ ಅಧ್ಯಕ್ಷ ಕಲಗೌಡ ಕಮತೆ, ಗ್ರಾಪಂ ಉಪಾಧ್ಯಕ್ಷ ರಾಜು ನಾಯಿಕ, ಸದಸ್ಯರಾದ ಅಶೋಕ ಗಂಗಣ್ಣವರ, ಮುಖಂಡರಾದ ಸಿದ್ದಣ್ಣ ಕೋಳಿ, ಶ್ರೀಧರ ಪಾಟೀಲ, ಶಿವಗೌಡ ಪಾಟೀಲ, ಪಾಂಡುರಂಗ ರವಳೋಜಿ, ಶಿವಾನಂದ ಮನ್ನಿಕೇರಿ, ಸಾಮ್ರಾಟ ನಾಗನ್ನವರ, ಮಸೋಬಾ ಶೇಖನವರ, ಹನುಮಂತ ಶೇಖನವರ, ಮಂಜುನಾಥ ಭಮ್ಮನ್ನವರ, ನಾನಾಸಾಹೇಬ ಶೇಖನವರ, ರಾಕೇಶ ಬಮ್ಮನ್ನವರ, ಸುಭಾಸ ನಾಗನ್ನವರ, ವಿನಯಗೌಡ ಪಾಟೀಲ, ರೇವಣ್ಣ ಜಿಲಪೆ, ಸಚಿನ ಜಮಖಂಡಿ, ಸಂತೋಸ ಭಮ್ಮನ್ನವರ, ಬಸವರಾಜ ಶೇಕನವರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!